Advertisment

ಶವ ಸಂಸ್ಕಾರಕ್ಕೆ ಹೋದಾಗ ಮತ್ತೊಂದು ದುರಂತ; ಹೆಜ್ಜೇನು ದಾಳಿಗೆ ಓರ್ವ ಸಾವು

author-image
AS Harshith
Updated On
ಶವ ಸಂಸ್ಕಾರಕ್ಕೆ ಹೋದಾಗ ಮತ್ತೊಂದು ದುರಂತ; ಹೆಜ್ಜೇನು ದಾಳಿಗೆ ಓರ್ವ ಸಾವು
Advertisment
  • ಮಹಿಳೆಯೊಬ್ಬರ ಅಂತ್ಯಕ್ರಿಯೆಯ ವೇಳೆ ನಡೆದ ಘಟನೆ
  • ಹೆಜ್ಜೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ವ್ಯಕ್ತಿ
  • ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಸಾವು

ಚಾಮರಾಜನಗರ: ಶವ ಸಂಸ್ಕಾರಕ್ಕೆ ಹೋಗಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದು, ಈ ದಾಳಿಯಿಂದ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಪ್ಪ (60) ಮೃತರಾದರೆ, 10 ಮಂದಿಗೆ ಗಾಯವಾಗಿದೆ.

Advertisment

ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರ ಅಂತ್ಯಕ್ರಿಯೆಗೆ ಚೆನ್ನಪ್ಪ ಹೋಗಿದ್ದರು. ವಿಧಿ ವಿಧಾನದ ವೇಳೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿದೆ. ತೀವ್ರ ಅಸ್ವಸ್ಥಗೊಂಡ ಚೆನ್ನಪ್ಪ ಅವರಿಗೆ ಕಾಮಗೆರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಇನ್ನಿತರ ಗಾಯಾಳುಗಳು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯಹೆಚ್ಚಿನ ಚಿಕಿತ್ಸೆಗಾಗಿ 

Advertisment
Advertisment
Advertisment