newsfirstkannada.com

BREAKING: ಹೈಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ಪಾಕಿಸ್ತಾನದ ಅಕೌಂಟ್‌ಗೆ ಹಣ ಹಾಕುವಂತೆ ಧಮ್ಕಿ

Share :

24-07-2023

    ಹೈಕೋರ್ಟ್ ಆರು ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ

    ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸುವ ಸಂದೇಶ ರವಾನೆ

    50 ಲಕ್ಷ ರೂಪಾಯಿ ಅಕೌಂಟ್‌ಗೆ ಹಾಕಲು ಬೆದರಿಕೆ ಸಂದೇಶ

ಬೆಂಗಳೂರು: ಹೈಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಅಲೈಟ್ ಬ್ಯಾಂಕ್ ಲಿಮಿಟೆಡ್‌ನ‌ ಅಕೌಂಟ್ ನಂಬರ್‌ ಕೊಟ್ಟಿರುವ ಅಪರಿಚಿತರು, ಹಣ ಹಾಕದಿದ್ರೆ ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಅನ್ನೋ ವರದಿಯಾಗಿದೆ. ಈ ಸಂಬಂಧ ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಆಧಿಕಾರಿ ಸೆಂಟ್ರಲ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ. ಮುರಳೀಧರ್‌ಗೆ ದುಷ್ಕರ್ಮಿಗಳು ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. 50 ಲಕ್ಷ ರೂಪಾಯಿ ಅಕೌಂಟ್‌ಗೆ ಹಾಕಬೇಕು. ಹಣ ಹಾಕದಿದ್ದರೆ ಆರು ನ್ಯಾಯಮೂರ್ತಿಗಳ ಕೊಲೆ ಮಾಡಿಸುವುದಾಗಿ ಬೆದರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಈ ವಾಟ್ಸಾಪ್ ಸಂದೇಶ ಆಧರಿಸಿ ಸೆಂಟ್ರಲ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ಹೈಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ಪಾಕಿಸ್ತಾನದ ಅಕೌಂಟ್‌ಗೆ ಹಣ ಹಾಕುವಂತೆ ಧಮ್ಕಿ

https://newsfirstlive.com/wp-content/uploads/2023/06/HIGHCOURT.jpg

Load More