newsfirstkannada.com

ಶಾಸಕರ ಸಸ್ಪೆಂಡ್​​ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ; ಇಂದು ಕೂಡ ಹೋರಾಟಕ್ಕಿಳಿಯಲಿರುವ ಬಿಜೆಪಿ ನಾಯಕರು

Share :

20-07-2023

    ಪೇಪರ್‌ ಹರಿದು ಹಾಕಿ ಎಸೆದ ಕೇಸರಿ ನಾಯಕರು

    ದುರ್ವರ್ತನೆ ತೋರಿದವರು ಸದನದಿಂದ ಗೇಟ್‌ಪಾಸ್

    ವಿಧಾನಸಭೆಯಿಂದ ಹೊತ್ತು ಹೊರ ಹಾಕಿದ ಮಾರ್ಷಲ್ಸ್‌

ನಿನ್ನೆ ಸದನದಲ್ಲಿ ಬಿಜೆಪಿ ನಾಯಕರು ಹೈಡ್ರಾಮ ಸೃಷ್ಟಿಸಿದ್ರು. ಧರಣಿ ವೇಳೆ ಅಸ್ವಸ್ಥರಾಗಿದ್ದ ಶಾಸಕ ಯತ್ನಾಳ್ ಪೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಡರಾತ್ರಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ರು.

ಹೊರ ಹಾಕುವಾಗ ಕುಸಿದು ಬಿದ್ದ ಶಾಸಕ ಯತ್ನಾಳ್‌

ನಿನ್ನೆ ಸದನದಲ್ಲಿ ಹೈಡ್ರಾಮವೇ ಸೃಷ್ಟಿಯಾಗಿತ್ತು. ವಿಧಾನಸಭೆ ಅಧಿವೇಶನ ನಿಜಕ್ಕೂ ರಣರಂಗವಾಗಿತ್ತು. ಬಿಜೆಪಿ ನಾಯಕರು ಡೆಪ್ಯೂಟಿ ಸ್ಪೀಕರ್‌ ಮೇಲೆ ಪೇಪರ್ ಹರಿದು ಹಾಕಿ ದುರ್ವರ್ತನೆ ತೋರಿದ್ರು. ಅಧಿವೇಶನದ ನಡವಳಿಗೆ ಅಗೌರವ ತೋರಿ ಇಡೀ ದೇಶದ ಮುಂದೆ ರಾಜ್ಯದ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿದ್ರು. ಅಮಾನತ್ತಾದ್ರೂ ಸದನ ಪ್ರವೇಶಿಸಿ ಗಲಾಟೆ ಮಾಡಿದ್ರು.

ವಿಪಕ್ಷಗಳ ಇಂಡಿಯಾ ಸಭೆಗೆ ಬಂದ ಗಣ್ಯರನ್ನ ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನ ಬಳಸಿಕೊಳ್ಳಲಾಗಿದೆ ಅಂತಾ ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸಿಡಿದೆದ್ದಿದ್ರು. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ರು. ಏಕಾಏಕಿ ಡೆಪ್ಯೂಟಿ ಸ್ಪೀಕರ್‌ ರುದ್ರಪ್ಪ ಲಮಾಣಿ ಮೇಲೆ ಪೇಪರ್‌ ಎಸೆದು ಅಗೌರವ ತೋರಿದ್ರು. ಬಳಿಕ 10 ಮಂದಿ ಬಿಜೆಪಿ ಶಾಸಕರನ್ನ ಮುಂದಿನ ಅಧಿವೇಶನದವರೆಗೂ ಸಸ್ಪೆಂಡ್ ಮಾಡಿ ಸ್ಪೀಕರ್ ಆದೇಶ ಹೊರಡಿಸಿದ್ರು.

ಫೋರ್ಟೀಸ್ ಆಸ್ಪತ್ರೆಯಲ್ಲಿ ಯತ್ನಾಳ್

ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ರು ಬಿಜೆಪಿ ಶಾಸಕರು ಒಳಪ್ರವೇಶಿಸಲು ಯತ್ನಿಸಿದ್ರು. ಈ ವೇಳೆ ಶಾಸಕ ಅಶ್ವತ್ಥ್ ನಾರಾಯಣ್‌ರನ್ನ ಮಾರ್ಷಲ್ಸ್‌ ಹೆಗಲ ಮೇಲೆ ಹೊತ್ತು ಹಾಕಿದ್ರು. ಇದೇ ವೇಳೆ ಸದನಕ್ಕೆ ಎಂಟ್ರಿ ಕೊಡಲು ಯತ್ನಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಮಾರ್ಷಲ್ಸ್ ಹೊರ ಹಾಕಲು ಮುಂದಾದ್ರು.. ಕೈ ಕಾಲು ಹಿಡಿದು ಎಳೆದಾಡಿದ್ರು. ಈ ವೇಳೆ ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ರು. ಬಳಿಕ ಶಾಸಕ ಯತ್ನಾಳ್ರನ್ನ ಫೋರ್ಟೀಸ್ ಆಸ್ಪತ್ರೆಗೆ ರವಾನಿಸಲಾಯ್ತು.

ಅಬ್ಸರ್ವೇಶನ್​ನಲ್ಲಿ ಯತ್ನಾಳ್​

ಸದ್ಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್​ನಿಂದ ತೀವ್ರ ನಿಗಾ ಘಟಕಕ್ಕೆ ಯತ್ನಾಳ್ರನ್ನ ಶಿಫ್ಟ್ ಮಾಡಲಾಗಿದೆ. ಸ್ಟ್ರೆಚರ್ ಮೂಲಕ ICUಗೆ ಯತ್ನಾಳ್ರನ್ನ ಶಿಫ್ಟ್ ಮಾಡಲಾಗಿದೆ. 24 ಗಂಟೆಗಳ ಕಾಲ ಅಬ್ಸರ್ವೇಶನ್​ನಲ್ಲಿ ಇಡಲಾಗಿದೆ.

ಯತ್ನಾಳ್ ಆರೋಗ್ಯ ಹೇಗಿದೆ?

ಇನ್ನು ತಡರಾತ್ರಿ ಫೋರ್ಟೀಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್, ಸಚಿವ ಎಂಬಿ ಪಾಟೀಲ್ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ರು. ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್ ಯತ್ನಾಳ್ ಗುಣಮುಖರಾಗಿದ್ದಾರೆ ಅಂತಾ ತಿಳಿಸಿದ್ರು.

ಬಿಎಸ್ ಯಡಿಯೂರಪ್ಪ ಭೇಟಿ

ಇನ್ನು ಬಿಜೆಪಿ ನಾಯಕರೂ ಕೂಡ ತಡರಾತ್ರಿ ಫೋರ್ಟೀಸ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಯತ್ನಾಳ್ ಆರೋಗ್ಯ ವಿಚಾರಿಸಿದ್ರು. ಬಳಿಕ ಅಮಾನತ್ತು ಮಾಡಿದ ಸ್ಪೀಕರ್ ನಡೆ ವಿರುದ್ಧ ಕಿಡಿ ಕಾರಿದ್ರು.

ಇನ್ನು 10 ಮಂದಿ ಬಿಜೆಪಿ ಶಾಸಕರನ್ನ ಸಸ್ಪೆಂಡ್ ಮಾಡಿದ ನಡೆ ಖಂಡಿಸಿ ಇವತ್ತು ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಇಷ್ಟೆಲ್ಲಾ ಆದ್ರೂ ಇವತ್ತೂ ಕೂಡ ಸದನದಲ್ಲಿ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಗುಡುಗಲು ಸಜ್ಜಾಗಿದ್ದಾರೆ. ಇವತ್ತೂ ಕೂಡ ಸದನದಲ್ಲಿ ಸಮರದ ಕಹಳೆ ಮೊಳಗೋದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕರ ಸಸ್ಪೆಂಡ್​​ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ; ಇಂದು ಕೂಡ ಹೋರಾಟಕ್ಕಿಳಿಯಲಿರುವ ಬಿಜೆಪಿ ನಾಯಕರು

https://newsfirstlive.com/wp-content/uploads/2023/07/Protest.jpg

Load More