newsfirstkannada.com

ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ಸಂಸತ್​​ನಲ್ಲಿ ನಿರ್ಣಯ ಕೈಗೊಳ್ಳಿ- ಪ್ರಧಾನಿ ಮೋದಿಗೆ ಸ್ವಾಮಿ ಚಕ್ರಪಾಣಿ ಆಗ್ರಹ..!

Share :

28-08-2023

    ‘ಶಿವ ಶಕ್ತಿ’ಯನ್ನು ರಾಜಧಾನಿಯಾಗಿ ಘೋಷಿಸಿ, ಅಭಿವೃದ್ಧಿ ಮಾಡಿ

    ಜಿಹಾದಿಗಳು, ಉಗ್ರರು ಅಲ್ಲಿಗೆ ತಲುಪುವ ಮೊದಲೇ ಆಗಬೇಕು

    ಮೋದಿಗೆ ಸ್ವಾಮಿ ಚಕ್ರಪಾಣಿ ಇಟ್ಟ ಬೇಡಿಕೆಗಳು ಏಷ್ಟು ಗೊತ್ತಾ?

ಚಂದ್ರಯಾನ ಸಕ್ಸಸ್ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ವಿಕ್ರಂ ಇಳಿದಿರುವ ಸ್ಥಳವನ್ನು ‘ಶಿವ ಶಕ್ತಿ’ ಎಂದು ನಾಮಕರಣ ಮಾಡಿದ್ದಾರೆ. ‘ಶಿವ ಶಕ್ತಿ’ ಎಂದು ನಾಮಕರಣ ಮಾಡುತ್ತಿದ್ದಂತೆಯೇ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಇಸ್ರೋದ ಅಧ್ಯಕ್ಷ ಎಸ್..ಸೋಮನಾಥ್ ‘ಎಲ್ಲರೂ ಆ ಸ್ಥಳವನ್ನು ‘ಶಿವ ಶಕ್ತಿ’ ಎಂದು ಕರೆಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಲೇಟೆಸ್ಟ್ ವಿಚಾರ ಏನಂದರೆ.. ಹಿಂದೂ ಧರ್ಮದ ಸ್ವಾಮೀಜಿ ಒಬ್ಬರು, ಚಂದ್ರನನ್ನು ‘ಹಿಂದೂ ಸನಾತನ ರಾಷ್ಟ್ರ’ ಎಂದು ಕರೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ‘ಆಲ್​ ಇಂಡಿಯಾ ಹಿಂದೂ ಮಹಾಸಭಾ’ದ ರಾಷ್ಟ್ರೀಯ ಅಧ್ಯಕ್ಷ, ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು, ‘ಬೇರೆ ಧರ್ಮದವರು, ಬೇರೆ ದೇಶದವರು ಚಂದ್ರನ ಮೇಲೆ ಹಕ್ಕು ಸಾಧಿಸುವ ಮೊದಲೇ ಅದಕ್ಕೆ ‘ಹಿಂದೂ ರಾಷ್ಟ್ರ’ ಎಂದು ಘೋಷಣೆ ಮಾಡಬೇಕು. ಈ ಸಂಬಂಧ ಸಂಸತ್​​ನಲ್ಲಿ ನಿರ್ಣಯವನ್ನು ಮಂಡಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸ್ವಾಮೀಜಿಗಳು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಎಂದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಚಂದ್ರನ ಅಂಗಳದಲ್ಲಿ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಹೆಸರಿಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿರುವಂತೆ, ‘ಚಂದ್ರನ ಅಂಗಳಕ್ಕೆ ವಿಕ್ರಂ ಕಾಲಿಟ್ಟ ಸ್ಥಳವನ್ನು ‘ಶಿವ ಶಕ್ತಿ’ ಎಂದು ಹೆಸರಿಡಲಾಗಿದೆ. ಕೇವಲ ಹೆಸರನ್ನು ಇಟ್ಟರೆ ಮಾತ್ರ ಸಾಲದು, ಆ ಸ್ಥಳವನ್ನು ಅಭಿವೃದ್ಧಿ ಮಾಡಬೇಕು. ಜೊತೆಗೆ ಚಂದ್ರನನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಿ, ‘ಶಿವ ಶಕ್ತಿ’ಯನ್ನು ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು. ಜೊತೆಗೆ ಶಿವ-ಪಾರ್ವತಿಯನ್ನೂ ಅಲ್ಲಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕೆಲಸ ಮೊದಲು ಸಂಸತ್​​​ನಲ್ಲಿ ಆಗಬೇಕಿದೆ. ಯಾಕಂದ್ರೆ ಉಗ್ರರು ಮತ್ತು ಜಿಹಾದಿ ಮನಸ್ಸುಳ್ಳವರು ತಲುಪುವ ಮೊದಲೇ ಕೆಲಸ ಆಗಬೇಕಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ, ಸಂಸತ್​​ನಲ್ಲಿ ನಿರ್ಣಯ ಕೈಗೊಳ್ಳಿ- ಪ್ರಧಾನಿ ಮೋದಿಗೆ ಸ್ವಾಮಿ ಚಕ್ರಪಾಣಿ ಆಗ್ರಹ..!

https://newsfirstlive.com/wp-content/uploads/2023/08/CHANDRA-3.jpg

Load More