ಕಳೆದ ಜುಲೈನಲ್ಲಿ ಉದ್ಘಾಟನೆಯಾಗಿದ್ದ ‘ಮೆಲ್ಬರ್ನ್ ಕನ್ನಡ ಭವನ’
ಆಸ್ಟ್ರೇಲಿಯಾ ಸಂಸತ್‌ನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಮೆಚ್ಚುಗೆ
ಸಮಸ್ತ ಕನ್ನಡಿಗರಿಗೆ ಸಂತಸ ತಂದ ಈ ಸಂಸದೆಯ ಮಾತುಗಳು
ಮೆಲ್ಬರ್ನ್: ಸಾಗರದಾಚೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಚರಣೆಗಳು ನಿಜಕ್ಕೂ ಶ್ಲಾಘನೀಯವಾದದ್ದು. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಆಗಾಗ ಕನ್ನಡ ರಾಜ್ಯೋತ್ಸವ, ನುಡಿ ಹಬ್ಬ ಹೀಗೆ ವಿವಿಧ ಉತ್ಸವಗಳನ್ನ ಆಚರಿಸಿ ಸಂಭ್ರಮ ಪಡುತ್ತಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಕನ್ನಡಿಗರು ಮೆಲ್ಬರ್ನ್‌ನಲ್ಲಿ ಮಾತೃಭಾಷೆ ಮೇಲಿನ ಅಭಿಮಾನಕ್ಕೆ, ನಾಡು, ನುಡಿಯ ಪ್ರೇಮಕ್ಕಾಗಿ ಕನ್ನಡ ಭವನವನ್ನೇ ನಿರ್ಮಿಸಿದ್ದರು. ಕಳೆದ ಜುಲೈ 08ರಂದು ಇದರ ಉದ್ಘಾಟನೆಯ ಕಾರ್ಯ ಬಹಳ ಸಂಭ್ರಮದಿಂದ ನಡೆದಿದ್ದು, ಕನ್ನಡಿಗರ ಅಪಾರ ಸಂತೋಷಕ್ಕೆ ಕಾರಣವಾಗಿತ್ತು. ಕನ್ನಡಿಗರ ಈ ಭಾಷಾಪ್ರೇಮ ಇದೀಗ ಆಸ್ಟ್ರೇಲಿಯಾ ಸಂಸತ್‌ನಲ್ಲೂ ಕಂಪಿಸಿದೆ. ಆಸ್ಟ್ರೇಲಿಯಾದ ಫೆಡರಲ್ ಮೆಂಬರ್ ಕ್ಯಾಸೆಂಡ್ರಾ ಫರ್ನಾಂಡೊ ಅವರು ಆಸ್ಟ್ರೇಲಿಯಾ ಸಂಸತ್‌ನಲ್ಲಿ ಕನ್ನಡ ಭವನ ಉದ್ಘಾಟನೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗ ಕನ್ನಡಿಗರ ಭಾಷೆ, ಸಂಸ್ಕೃತಿ, ಆಚರಣೆಯನ್ನು ಮುಕ್ತಕಂಠದಲ್ಲಿ ಹೊಗಳಿದ್ದಾರೆ.
ಆಸ್ಟ್ರೇಲಿಯಾ ಸಂಸತ್‌ನಲ್ಲಿ ಕನ್ನಡ ಭವನವನ್ನುದ್ದೇಶಿಸಿ ಮಾತನಾಡಿದ ಕ್ಯಾಸೆಂಡ್ರಾ ಫರ್ನಾಂಡೊ ಅವರು, ಇತ್ತೀಚೆಗೆ ನನಗೆ ಮೆಲ್ಬರ್ನ್ ಕನ್ನಡ ಭವನ ಉದ್ಘಾಟಿಸುವ ಸೌಭಾಗ್ಯ ಸಿಕ್ಕಿತ್ತು. ಇದು ಕನ್ನಡಿಗರಿಗಾಗಿ ಆಸ್ಟ್ರೇಲಿಯಾದಲ್ಲಿ ನಿರ್ಮಾಣವಾಗಿರುವ ಮೊಟ್ಟ ಮೊದಲ ಭವನವಾಗಿದೆ. ಕನ್ನಡ ಭಾಷಿಗರ ಜೊತೆ ಇದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು ಒಂದು ಮೈಲಿಗಲ್ಲು. ಕನ್ನಡ ಭಾಷೆಯನ್ನು ದಕ್ಷಿಣ ಭಾರತದ ಕರ್ನಾಟಕದಲ್ಲಿ ಕೋಟ್ಯಾಂತರ ಜನ ಮಾತನಾಡುತ್ತಾರೆ. ಆಸ್ಟ್ರೇಲಿಯಾದಲ್ಲೂ ಅಷ್ಟೇ ಕನ್ನಡಿಗರು ನಮ್ಮ ಸಮಾಜದ ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಮೆಲ್ಬೋರ್ನ್ ಕನ್ನಡ ಭವನ ಒಂದು ಕಟ್ಟಡವಲ್ಲ. ಇದು ಏಕತೆ, ಗೌರವ, ಪ್ರೀತಿಯ ಪ್ರತೀಕವಾಗಿದೆ ಎಂದು ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಹಾಡಿ ಹೊಗಳಿದ್ದಾರೆ. ಆಸ್ಟ್ರೇಲಿಯಾ ಸಂಸತ್‌ನಲ್ಲಿ ಕ್ಯಾಸೆಂಡ್ರಾ ಫರ್ನಾಂಡೊ ಅವರ ಈ ಮಾತುಗಳು ಮೆಲ್ಬರ್ನ್ ಕನ್ನಡ ಸಂಘಕ್ಕೆ, ಆಸ್ಟ್ರೇಲಿಯಾದ ಸಮಸ್ತ ಕನ್ನಡಿಗರಿಗೆ ಬಹಳ ಸಂತಸ ತಂದಿದೆ.
ಕ್ಯಾಸೆಂಡ್ರಾ ಫರ್ನಾಂಡೊ ಅವರು ಶ್ರೀಲಂಕಾ ಮೂಲದವರಾಗಿದ್ದಾರೆ. ಆಸ್ಟ್ರೇಲಿಯಾ ಸಂಸತ್‌ಗೆ ಆಯ್ಕೆಯಾದ ಶ್ರೀಲಂಕಾ ಮೂಲದ ಮೊಟ್ಟ ಮೊದಲ ಮಹಿಳೆ ಇವರಾಗಿದ್ದಾರೆ. ಆಸ್ಟ್ರೇಲಿಯಾ ಸಂಸತ್ ಭವನದಲ್ಲಿ ಮಾತನಾಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮೆಲ್ಬರ್ನ್ ಕನ್ನಡ ಸಂಘದ ಉತ್ತಮ ಕೆಲಸವನ್ನು ಎತ್ತಿ ಹಿಡಿಯುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ