newsfirstkannada.com

ಉತ್ತರಖಾಂಡ್​​ನಲ್ಲಿ 40 ಮಂದಿ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಟ.. ನೂರೆಂಟು ಸವಾಲ್​​

Share :

15-11-2023

    ಕಾರ್ಮಿಕರಿಗೆ ಸ್ಟೀಲ್ ಪೈಪ್ ಮೂಲಕ ಆಮ್ಲಜನಕ, ಆಹಾರ ಪೂರೈಕೆ

    ಸ್ವಲ್ಪ ಸ್ವಲ್ವವೇ ಮಣ್ಣನ್ನು ತೆರವುಗೊಳಿಸಿ ಮುಂದೆ ಹೋಗುವ ಕಾರ್ಯ

    ಕಾರ್ಮಿಕರ ಕಾರ್ಯಾಚರಣೆಯ ಮಾಹಿತಿ ಪಡೆದ ಪ್ರಧಾನಿ ಮೋದಿ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ರೆ ಅತ್ತ ದೇವಭೂಮಿ ಉತ್ತರಾಖಂಡ್​​ನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು 40 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಸುರಂಗದಲ್ಲಿ ಸಿಲುಕಿರೋ ಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ. ಅಷ್ಟಕ್ಕೂ ಈ ಸುರಂಗ ಕುಸಿದು ಬಿದ್ದಿದ್ದೇಕೆ?.

ಘಟನೆಯಿಂದ ಅವರ ಸಂಬಂಧಿಕರು ಆತಂಕಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರು ಕ್ಷಣ ಕ್ಷಣಕ್ಕೂ ಭಯವಾಗುತ್ತಿದೆ. ದೇಶದ ತುಂಬಾ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದರೇ, ದೇವಭೂಮಿ ಉತ್ತರಖಾಂಡ್​ನಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಮಹಾ ಅವಘಡ ಸಂಭವಿಸಿದೆ. ಹೆದ್ದಾರಿಗೆ ನಿರ್ಮಿಸಲಾಗುತ್ತಿದ್ದ ಸುರಂಗ ಕುಸಿದು 40 ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಉತ್ತರಾಖಂಡ್​ನ ಸುರಂಗದಲ್ಲಿ ಸಿಲುಕಿದ 40 ಕಾರ್ಮಿಕರು

ಉತ್ತರಾಖಂಡ್​​ನ ಉತ್ತರಕಾಶಿ ಬಳಿ ನಿರ್ಮಿಸಲಾಗುತ್ತಿದ್ದ 4.5 ಕಿಲೋ ಮೀಟರ್ ಉದ್ದದ ಚಾರ್​ದಾಮ್ ಸುರಂಗ ಮಾರ್ಗದಲ್ಲಿ ಸುಮಾರು 200 ಮೀಟರ್​​ಗಳಷ್ಟು ಕುಸಿತ ಸಂಭವಿಸಿತ್ತು. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಅಲ್ಲಿ ಕೆಲಸ ಮಾಡ್ತಿದ್ದ ಸುಮಾರು 40 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ. ಸದ್ಯ, ಸುರಂಗದೊಳಗೆ ಈ ಕಾರ್ಮಿಕರಿದ್ದು ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಟನಲ್​ನಲ್ಲಿ ಕಾರ್ಮಿಕರು ಸಿಲುಕಿ ಸುಮಾರು ಗಂಟೆಗಳು ಕಳೆದರೂ ರಕ್ಷಣಾ ಕಾರ್ಯವೇ ಸವಾಲಾಗಿದೆ.

ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ನೂರೆಂಟು ಸವಾಲು

ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಯಾಕಂದ್ರೆ 4.5 ಕಿಲೋ ಮೀಟರ್​ ಉದ್ದದ ಸುರಂಗದಲ್ಲಿ 200 ಮೀಟರ್​ಗಳಷ್ಟು ಕುಸಿತ ಸಂಭವಿಸಿದೆ. ಆದ್ರೆ ಡ್ರಿಲ್ ಮಾಡೋ ಮೂಲಕ ಸುರಂಗದೊಳಗೆ ಹೋಗಲು ಯತ್ನಿಸಲಾಗ್ತಿದೆ.. ಡ್ರಿಲ್ ಮಾಡಿದಷ್ಟು ಸುರಂಗದಲ್ಲಿ ಹೆಚ್ಚು ಮಣ್ಣು ಕುಸಿಯುತ್ತಿದೆ. ಹೀಗಾಗಿ 900 ಮೀಟರ್​ವರೆಗೂ ಸ್ಟೀಲ್ ಪೈಪ್ ಕಳಿಸೋಕೆ ಪ್ಲಾನ್ ಮಾಡಲಾಗಿದ್ದು, ಸ್ಟೀಲ್ ಪೈಪ್ ಮೂಲಕ ಕಾರ್ಮಿಕರನ್ನ ಹೊರ ತರೋ ಪ್ರಯತ್ನ ನಡೆಸಲಾಗ್ತಿದೆ.

ಇನ್ನು ಸುರಂಗದೊಳಗೆ ಸಿಲುಕಿರುವ ಎಲ್ಲ 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ, ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮೂಲದವರಾಗಿದ್ದು, ಅವರಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗ್ತಿದೆ. ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಅಂತ ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಸ್ವಲ್ಪ.. ಸ್ವಲ್ವವೇ ಮಣ್ಣನ್ನು ತೆರವುಗೊಳಿಸುತ್ತಾ ಮುಂದೆ ಹೋಗುವ ಕಾರ್ಯವನ್ನು ರಕ್ಷಣಾ ತಂಡಗಳು ನಡೆಸುತ್ತಿವೆ. ಹೀಗಾಗಿ ಸಂಫೂರ್ಣ ಕಾರ್ಯಾಚರಣೆ ಆಗೋದಕ್ಕೆ ಇನ್ನೂ 48 ಗಂಟೆಗಳು ಬೇಕಾಗಬಹುದು ಅಂತಾ ರಕ್ಷಣಾತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೈಪ್ ಮೂಲಕ ವಾಕಿ ಟಾಕಿಯಲ್ಲಿ ಒಳಗೆ ಸಿಲುಕಿರುವ ಕಾರ್ಮಿಕರ ಜೊತೆ ಸಂಪರ್ಕದಲ್ಲಿದ್ದೇವೆ. ಸುಮಾರು 600 ಮೀಟರ್​ವರೆಗೂ ಮಣ್ಣು ಕುಸಿದು ಬಿದ್ದಿದೆ. ನಾವು ಮಣ್ಣು ತೆಗೆದಂತೆ ಮತ್ತೆ ಮಣ್ಣು ಕುಸಿಯುತ್ತಿದೆ. ಸುಮಾರು 15 ರಿಂದ 20 ಮೀಟರ್​ನಷ್ಟು ಕ್ಲಿಯರ್ ಮಾಡಿದ್ದೀವಿ. ಇನ್ನೂ 30 ರಿಂದ 35 ಮೀಟರ್​ನಷ್ಟು ಹೋಗೋದು ಬಾಕಿ ಇದೆ.. ಇನ್ನು ಎಷ್ಟು ಸಮಯ ಬೇಕಾಗುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಇನ್ನೂ ಸ್ವಲ್ಪ ಸಮಯ ಬೇಕಾಗುತ್ತೆ.

ಸುರಂಗ ಕುಸಿತ ಜಾಗಕ್ಕೆ ಸಿಎಂ ಪುಷ್ಕರ್ ಸಿಂಗ್ ಭೇಟಿ

ಘಟನಾ ಸ್ಥಳಕ್ಕೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು 40 ಕಾರ್ಮಿಕರ ರಕ್ಷಣೆಗೆ ಬೇಕಾಗುವ ಎಲ್ಲ ಅಗತ್ಯ ನೆರವು ನೀಡಲಾಗುವುದು ಅಂತ ತಿಳಿಸಿದ್ದಾರೆ.

ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದೇನೆ. ಮಾನ್ಯ ಪ್ರಧಾನ ಮಂತ್ರಿಯವರು ಕೂಡ ನನ್ನಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಏನೆಲ್ಲ ನೆರವು ಬೇಕು ನೀಡೋದಾಗಿ ಹೇಳಿದ್ದಾರೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ಎಲ್ಲ ಏಜೆನ್ಸಿಯವರು ಇಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಸುರಂಗದೊಳಗೆ ಸಿಲುಕಿರುವ 40 ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಬರಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ್ ಸಿಎಂ

ಪ್ರಧಾನಿ ಮೋದಿ ಸಹ ಉತ್ತರಾಖಂಡ್​​ನಲ್ಲಿ ನಡೀತಿರೋ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದ್ರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಬಗ್ಗೆ ಮಾಹಿತಿ ಪಡೆದಿದ್ದು, ಕೇಂದ್ರ ಸರ್ಕಾರ ಅಗತ್ಯ ನೆರವು ನೀಡೋದಕ್ಕೆ ಸಿದ್ಧವಿದೆ ಅಂತಾ ತಿಳಿಸಿದ್ದಾರೆ. ಇನ್ನು, ಉತ್ತರಾಖಂಡ್​ನಲ್ಲಿ ಆಗಾಗ್ಗೆ ಭೂಕುಸಿತದಂತ ಪ್ರಕರಣಗಳು ನಡೆಯುತ್ತಲೇ ಇರುತ್ವೆ. ಅದಕ್ಕೆ ಕಾರಣ ಏನು ಅಂತಾ ಹುಡುಕುತ್ತಾ ಹೋದ್ರೆ ಭೂಲೋಕದ ಸ್ವರ್ಗದಲ್ಲಿ ಬದಲಾಗಿರೋ ವಾತಾವರಣ.

ಸುರಂಗ ಕುಸಿಯಲು ಕಾರಣ ಏನು?

  • ನೆಲದಡಿ ಮಣ್ಣಿನ ರಚನೆ ಬದಲಾಗುವುದರಿಂದ ಮಣ್ಣು ಅಸ್ಥಿರವಾಗುತ್ತೆ
  • ಇಂತಹ ಅಸ್ಥಿರವಾದ ನೆಲ ಯಾವುದೇ ಕಾಮಗಾರಿಗೆ ಯೋಗ್ಯವಾಗಿರಲ್ಲ
  • ಹಿಮಾಲಯದ ನೆಲ, ಪರ್ವತಗಳಲ್ಲಿರುವ ಕಲ್ಲುಗಳು ಅತ್ಯಂತ ದುರ್ಬಲ
  • ಕಲ್ಲುಗಳ ಧಾರಣಾ ಸಾಮರ್ಥ್ಯ ಕಡಿಮೆ, ಒಡೆದು ಹೋಗುವ ಅಪಾಯ
  • ಇಲ್ಲಿನ ಮಣ್ಣಿನಲ್ಲಿ ಒಡೆದ ಕಲ್ಲುಗಳು ಸಣ್ಣ ಹರಳುಗಳ ಪ್ರಮಾಣ ಹೆಚ್ಚು
  • ಮಣ್ಣಿನ ಕಣಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ
  • ನೆಲದಡಿ ನೀರು ಕಾಲುವೆಯಂತೆ ಹರಿಯುವುದರಿಂದ ಮಣ್ಣು ಸವಕಳಿ
  • ಈ ಎಲ್ಲ ಕಾರಣದಿಂದಲೇ ಇಲ್ಲಿ ಆಗಾಗ್ಗೆ ಭೂಕುಸಿತಗಳು ಸಂಭವಿಸುತ್ತೆ

ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ರೆ ಉತ್ತರಖಂಡ್​ನಲ್ಲಿ 40 ಕಾರ್ಮಿಕರು ಬದುಕಿನ ಹೋರಾಟ ನಡೆಸ್ತಿದ್ದಾರೆ. 54 ಗಂಟೆ ಕಳೆದ್ರೂ ರಕ್ಷಣಾ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು 40 ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಅನ್ನೋದು ನೆಮ್ಮದಿಯ ಸಂಗತಿ. ರಕ್ಷಣಾ ಕಾರ್ಯಾಚರಣೆ ಸಫಲವಾಗಿ 40 ಕಾರ್ಮಿಕರು ಸೇಫಾಗಿ ಆಚೆ ಬಂದ್ರೆ ಸಾಕು ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರಖಾಂಡ್​​ನಲ್ಲಿ 40 ಮಂದಿ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಟ.. ನೂರೆಂಟು ಸವಾಲ್​​

https://newsfirstlive.com/wp-content/uploads/2023/11/Jharkhand_1.jpg

Load More