ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ತಯಾರಿ
ಪಟಾಕಿಯಿಂದ ಗಾಯವಾಗಿ ಬರುವ ಮಕ್ಕಳಿಗೆ ಪ್ರತ್ಯೇಕ ವಾರ್ಡ್
ಆಸ್ಪತ್ರೆಯಿಂದ ಸಹಾಯವಾಣಿ - 9481740137, 08026707176
ಬೆಂಗಳೂರು: ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ದೀಪ, ಪಟಾಕಿಗಳನ್ನ ಒಟ್ಟು ಮಾಡಿ ಜೋರಾಗಿ ಆಚರಿಸೋದೊಂದೇ ಬಾಕಿ ಇದೆ. ವಿಪರ್ಯಾಸ ಏನಂದ್ರೆ, ವರ್ಷದಿಂದ ವರ್ಷಕ್ಕೆ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿರೋರ ಸಂಖ್ಯೆ ಕೂಡ ಜಾಸ್ತಿಯಾಗ್ತಿದೆ.
ಇದನ್ನೂ ಓದಿ: ಮೊದಲ ದೀಪಾವಳಿ ಆಚರಣೆಯ ಸಂಭ್ರಮದಲ್ಲಿ ಅಯೋಧ್ಯಾ ರಾಮಮಂದಿರ; ಎಷ್ಟು ಲಕ್ಷ ದೀಪಗಳು ಬೆಳಗಲಿವೆ ಗೊತ್ತಾ?
ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ತಯಾರಿ!
ದೀಪಾವಳಿ ಸಮಯದಲ್ಲಿ 24/7 ಚಿಕಿತ್ಸೆ ನೀಡಲು ಆಸ್ಪತ್ರೆ ಸಜ್ಜು!
ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಮಿಂಟೋ ಆಸ್ಪತ್ರೆ ಸಕಲ ರೀತಿಯಲ್ಲೂ ತಯಾರಿ ಮಾಡಿಕೊಂಡಿದೆ. ದೀಪಾವಳಿಯಂದು ದಿನದ 24 ಗಂಟೆಯೂ ಚಿಕಿತ್ಸೆ ನೀಡಲು ಸಜ್ಜಾಗಿದೆ. ಆಸ್ಪತ್ರೆಯಿಂದ ಸಹಾಯವಾಣಿ – 9481740137, 08026707176 ಶುರು ಮಾಡಲಾಗಿದೆ.
‘ಪಟಾಕಿ’ ದುರಂತಕ್ಕೆ ಸಿದ್ಧತೆ..!
ಮಿಂಟೋ ಆಸ್ಪತ್ರೆಯಲ್ಲಿ ಮಕ್ಕಳಿಗೂ ಸೇರಿ 15ಕ್ಕೂ ಅಧಿಕ ಬೆಡ್ಗಳಿರುವ ಪ್ರತ್ಯೇಕ ವಾರ್ಡ್ ರೆಡಿ ಮಾಡಲಾಗಿದೆ. ಯುವಕರಿಗೆ 15 ಬೆಡ್ ಹಾಗೂ ಮಹಿಳೆಯರಿಗೆ 15 ಬೆಡ್ಗಳು ಮೀಸಲಿಡಲಾಗಿದೆ. ಮುಖ್ಯವಾಗಿ ಆಸ್ಪತ್ರೆಯಲ್ಲಿ ಔಷಧಿಗಳು & ಐ ಡ್ರಾಪ್ಸ್ ಎಲ್ಲವನ್ನು ವಾರ್ಡ್ನಲ್ಲಿ ಶೇಖರಣೆ ಮಾಡಲಾಗಿದೆ. ಜನರಿಗೆ ಟ್ರಬಲ್ ಆಗಬಾರದೆಂದು ರಜೆ ತೆಗೆದುಕೊಳ್ಳದೇ ಸಿಬ್ಬಂದಿ ಕೆಲಸ ಮಾಡ್ತಿರೋದು ಉತ್ತಮ.
ಎಚ್ಚರಿಕೆ ಇಂದ ಇರೋದು ಬಹಳ ಮುಖ್ಯ. ಪಟಾಕಿ ಹಚ್ಚುವವರಷ್ಟೇ ಹುಷಾರಾಗಿರಬೇಕು ಅಂತಲ್ಲ ಹತ್ತಿರದಲ್ಲಿ ನಿಂತುಕೊಂಡು ನೋಡುವವರು ಅಪಾಯಕ್ಕೆ ಸಿಲುಕುತ್ತಾರೆ. ಪಟಾಕಿ ಹೊಡೆಯೋದನ್ನು ಹತ್ತಿರದಲ್ಲಿ ನೋಡುವವರು ಹುಷಾರಾಗಿರಬೇಕು.
– ಡಾ. ನಾಗರಾಜು ಜಿ. ನಿರ್ದೇಶಕ, RIO ಮಿಂಟೋ ಕಣ್ಣಾಸ್ಪತ್ರೆ
ಮತ್ತೊಂದು ವಿಪರ್ಯಾಸದ ಸುದ್ದಿ ಏನಂದ್ರೆ, ಹಬ್ಬ ಶುರುವಾಗೋ ಮುನ್ನವೇ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತ ಪ್ರಕರಣ ದಾಖಲಾಗಿದೆ. 18 ವರ್ಷದ ಯುವಕ ಬಿಜಿಲಿ ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಹಾನಿ ಮಾಡ್ಕೊಂಡಿದ್ದು, ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಾವು ಹಚ್ಚೋ ಪಟಾಕಿ ಬೆಳಕು ಮೂಡಿಸಬೇಕು ಹೊರತು ಬೇರೆಯವರ ಬಾಳಲ್ಲಿ ಕತ್ತಲೆ ಆವರಿಸುವಂತೆ ಮಾಡಬಾರದು. ಹೀಗಾಗಿ ತಮ್ಮ ಹಾಗೂ ಬೇರೆಯವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಬ್ಬ ಆಚರಿಸೋದು ಉತ್ತಮ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ