Advertisment

ರಶ್ಮಿಕಾ ಮಂದಣ್ಣ, ಕಾಜೋಲ್ ಡೀಪ್ ಫೇಕ್ ಬಳಿಕ ಎಚ್ಚೆತ್ತ ಬೆಂಗಳೂರು ಪೊಲೀಸರು; ಹೆಲ್ಪ್‌ಲೈನ್​ ನಂಬರ್ ಬಿಡುಗಡೆ

author-image
Veena Gangani
Updated On
ರಶ್ಮಿಕಾ ಮಂದಣ್ಣ, ಕಾಜೋಲ್ ಡೀಪ್ ಫೇಕ್ ಬಳಿಕ ಎಚ್ಚೆತ್ತ ಬೆಂಗಳೂರು ಪೊಲೀಸರು; ಹೆಲ್ಪ್‌ಲೈನ್​ ನಂಬರ್ ಬಿಡುಗಡೆ
Advertisment
  • ಡೀಪ್ ಫೇಕ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ದೂರು ನೀಡಿ
  • ಡೀಪ್ ಫೇಕ್ ವಿಡಿಯೋ ಬಗ್ಗೆ ಬೆಂಗಳೂರು ಪೊಲೀಸರಿಂದ ಜಾಗೃತಿ
  • 1930ಗೆ ಕರೆ ಮಾಡುವಂತೆ ಮನವಿ ಮಾಡಿದ ಬೆಂಗಳೂರು ಪೊಲೀಸರು

ಬೆಂಗಳೂರು: ಡೀಪ್​ ಫೇಕ್​ ವಿಡಿಯೋಗಳ ಹಾವಳಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದಕ್ಕೆ ದೇಶದ್ಯಾಂತ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಬಳಸಿ ಮಾಡಲಾದ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಆದರೂ ಕಿಡಿಗೇಡಿಗಳ ಡೀಪ್ ​ಫೇಕ್​ ವಿಡಿಯೋ ಮಾಡುವ ಹುಚ್ಚಾಟ ಮಾತ್ರ ನಿಂತಿಲ್ಲ.

Advertisment

publive-image

ನಟಿ ರಶ್ಮಿಕಾ ಮಂದಣ್ಣ ಬಳಿಕ ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಅವರ ವಿಡಿಯೋವನ್ನು ಕೂಡ ಫೇಕ್ ಮಾಡಿದ್ದರು. ಅಷ್ಟೇ ಯಾಕೆ ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್‌ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. AI ಟೆಕ್ನಾಲಜಿ ಬಳಸಿ ಮೋದಿಯವರ ಗರ್ಭಾ ನೃತ್ಯ ಮಾಡುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಈ ಬಗ್ಗೆ ಪ್ರಧಾನಿ ಮೋದಿ ಅವರು ಇದು ದೇಶಕ್ಕೆ ಎದುರಾಗಲಿರುವ ಬಹುದೊಡ್ಡ ಬೆದರಿಕೆ ಅಂತಾ ಕಳವಳ ವ್ಯಕ್ತಪಡಿಸಿದ್ದರು.

publive-image


">November 18, 2023

ಈ ಡೀಪ್ ಫೇಕ್ ಹಾವಳಿ ಜೋರಾಗುತ್ತಿದ್ದಂತೆ ಬೆಂಗಳೂರಿನ ಪೊಲೀಸರು ಫುಲ್​ ಅಲರ್ಟ್ ಆಗಿದ್ದಾರೆ. ಡೀಪ್ ಫೇಕ್ ವಿಡಿಯೋ ಸಮಸ್ಯೆಯಾಗಿದ್ದಲ್ಲಿ ಹೆಲ್ಪ್ ಲೈನ್​ಗೆ ಕರೆ ಮಾಡಿ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದವಾದ X ಬೆಂಗಳೂರು ನಗರ ಪೊಲೀಸ್‌ ಖಾತೆಯಲ್ಲಿ ಒಂದು ಮನವಿ ಮಾಡಿದ್ದಾರೆ. ಹಿಂಜರಿಯಬೇಡಿ, ಜಾಗೃತರಾಗಿ! ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್​ಗೆ ಒಳಗಾಗಿದ್ದಲ್ಲಿ, 1930 ಗೆ ಕರೆ ಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ. ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಾರಾದರೂ ಡೀಪ್ ಫೇಕ್​ಗೆ ಒಳಗಾಗಿದ್ದೇ ಆದಲ್ಲಿ ಕೂಡಲೇ 1930ಗೆ ಕರೆ ಮಾಡಿ. ಡೀಪ್ ಫೇಕ್ ವಿಡಿಯೋಗಳನ್ನ ಶೇರ್ ಮಾಡೋ ಮುನ್ನ ಹುಷಾರಾಗಿರಿ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment