ಸದ್ಯದಲ್ಲಿಯೇ ತಂದೆ-ತಾಯಿಯಾಗಲಿದ್ದಾರೆ ರಣವೀರ್-ದೀಪಿಕಾ ಜೋಡಿ
ಸೆ.28 ರಂದು ದಂಪತಿಯ ಬಾಳಲ್ಲಿ ಶುರುವಾಗಲಿದೆ ಹೊಸ ಅಧ್ಯಾಯ
ಸೆಪ್ಟೆಂಬರ್ 28ಕ್ಕೂ ನಟ ರಣವೀರ್ ಸಿಂಗ್ಗೂ ಇದೆ ಒಂದು ಕನೆಕ್ಷನ್!
ಮುಂಬೈ: ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿಯೂ ಒಂದು. ಈ ಮುದ್ದಾದ ಜೋಡಿ ಈಗ ಅಪ್ಪ ಅಮ್ಮ ಆಗಿ ಪ್ರಮೋಷನ್ ಆಗುವ ಸಮಯ. ಕಳೆದ ಫೆಬ್ರವರಿಯಲ್ಲಿಯೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿತ್ತು. ಮನೆಗೆ ಮರಿ ದೀಪಿಕಾ ಇಲ್ಲವೇ ತುಂಟ ರಣವೀರ್ ಬರಲಿದ್ದಾನೆ ಅಂತ.
ಈಗಾಗಲೇ ದೀಪಿಕಾ ಪಡುಕೊಣೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬೇಬಿ ಬಂಪ್ ಫೋಟೋಗಳನ್ನ ಶೇರ್ ಮಾಡಿ ಸದ್ಯದಲ್ಲಿಯೇ ನಾವು ಎರಡರಿಂದ ಮೂರಾಗಲಿದ್ದೇವೆ ಅಂತ ತಿಳಿಸಿದ್ದರು.
ಇದನ್ನೂ ಓದಿ: ರಿಷಬ್ ಶೆಟ್ಟಿಗೆ ಜೈ ಅಂದ Jr. NTR.. ಕಾಂತಾರ ಪ್ರೀಕ್ವೆಲ್ನಲ್ಲಿ ತೆಲುಗು ನಟ ಕಾಣಿಸಿಕೊಳ್ಳಲು ಬಿಗ್ ಪ್ಲಾನ್?
ಸದ್ಯ ದೀಪಿಕಾ ಅವರು ಸಿನಿಮಾ ಶೂಟಿಂಗ್ಗೆ ಬ್ರೇಕ್ ಕೊಟ್ಟು ಹೆರಿಗೆ ರಜೆಯಲ್ಲಿದ್ದಾರೆ. ಅದು ಮುಂದಿನ ವರ್ಷ ಅಂದ್ರೆ 2025ರವರೆಗೂ ಕೂಡ ನಡೆಯಲಿದೆ. ತುಂಬು ಗರ್ಭಿಣಿಯಿದ್ದಾಗಲೇ ಅವರು ಪ್ರಭಾಸ್ ಅಮಿತಾಬ್ ಬಚ್ಚನ ನಟನೆಯ ಕಲ್ಕಿ ಸಿನಿಮಾದಲ್ಲಿ ಅಭಿನಯಿಸಿದರು. ಅದರ ಸಿಕ್ವೇಲ್ನಲ್ಲಿ ಅಭಿನಯಿಸಲು ಈಗ ಅವರು ಮುಂದಿನ ವರ್ಷದವರೆಗೂ ಕಾಯಬೇಕಿದೆ. ಸದ್ಯ ದೀಪಿಕಾ ಹಾಗೂ ರಣವೀರ್ ಮಾತ್ರ ಸೆಪ್ಟಂಬರ್ 28ನೇ ದಿನಾಂಕಕ್ಕೆ ಕಾಯುತ್ತಿದ್ದಾರೆ. ಯಾಕಂದ್ರೆ ಅದೇ ದಿನ ಅವರ ಮುದ್ದಿನ ಮಗು ಬರಲಿದೆ.
ಇದನ್ನೂ ಓದಿ: ಪ್ರೆಗ್ನೆನ್ಸಿ ಆದ್ರೂ ನ್ಯೂ ಲುಕ್ನಲ್ಲಿ ನಟಿ ಪ್ರಣಿತಾ.. ಈ ಫೋಟೋ ಕ್ಲಿಕ್ ಮಾಡಿದ್ದು ಯಾರು?
ಸೆಪ್ಟಂಬರ್ 28 ಏನು ವಿಶೇಷ ದಿನ ಗೊತ್ತಾ..?
ಸದ್ಯ ದೀಪಿಕಾ ಹಾಗೂ ರಣವೀರ್ ತಮ್ಮ ಬದುಕಿನ ಮತ್ತೊಂದು ಅಧ್ಯಾಯಕ್ಕೆ ಕಾಯುತ್ತಿದ್ದಾರೆ. ಹೊಸ ಚಾಪ್ಟರ್ ಅವರ ಬದುಕಿನಲ್ಲಿ ಇದೇ ತಿಂಗಳು ಬರಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ದೀಪಿಕಾ ಸೆಪ್ಟಂಬರ್ 28 ರಂದೇ ತಮ್ಮ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ದಿನಾಂಕಕ್ಕೂ ರಣವೀರ್ ಸಿಂಗ್ಗೂ ಒಂದು ಕನೆಕ್ಷನ್ ಇದೆ. ಸೆಪ್ಟಂಬರ್ 28 ರಂದು ರಣವೀರ್ ಸಿಂಗ್ ಅವರ ಬರ್ತ್ಡೇ.
ಇದನ್ನೂ ಓದಿ: ಭರ್ಜರಿ ರೋಸ್ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್ ರೆಡಿ; ಎಲ್ಲಿ?
ರಣವೀರ್ ಹುಟ್ಟಿದ ದಿನವೇ ಮಗು ಬರಲಿ ಎಂಬ ಬಯಕೆ ದಂಪತಿಯದ್ದು, ಹೀಗಾಗಿ ಅದೇ ದಿನ ಮಗು ಪಡೆಯಲು ಈಗ ಎಲ್ಲ ತಯಾರಿಯಲ್ಲಿದ್ದಾರೆ ಬಾಲಿವುಡ್ನ ಬ್ಯೂಟಿಫುಲ್ ಜೋಡಿ. 2018ರಲ್ಲಿ ಮದುವೆಯಾದ ಈ ಜೋಡಿ ಬರೊಬ್ಬರಿ 6 ವರ್ಷಗಳ ನಂತರ ಮಗುವನ್ನು ಹೊಂದಲು ಸಜ್ಜಾಗಿದ್ದರು. ಈಗ ಅಂದುಕೊಂಡಂತೆ ಎಲ್ಲವೂ ಆದ್ರೆ ರಣವೀರ್ ಸಿಂಗ್ ಹಾಗೂ ಅವರ ಮುದ್ದು ಮಗು ಒಂದೇ ದಿನ ಹುಟ್ಟು ಹಬ್ಬ ಆಚರಿಸಿಕೊಳ್ಳುವ ದಿನಗಳು ಭವಿಷ್ಯದಲ್ಲಿ ಬರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ