newsfirstkannada.com

ಪರಭಾಷೆಯಲ್ಲೂ ಮೋಡಿ ಮಾಡಲು ಸಜ್ಜಾದ ಮತ್ತಿಬ್ಬರು ಕನ್ನಡ ಕಲಾವಿದರು; ಯಾವ ಸೀರಿಯಲ್​ ಗೊತ್ತಾ..?

Share :

02-08-2023

    ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​ ಮೂಲಕ ಖ್ಯಾತಿ ಪಡೆದ ದರ್ಶ್​​ ಚಂದ್ರಪ್ಪ

    ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡ ಖ್ಯಾತ ನಟಿ ದೀಪ್ತಿ ಮನ್ನೆ

    ತೆಲುಗು ಹೊಚ್ಚ ಹೊಸ ಸೀರಿಯಲ್​ ​​ಕನ್ನಡ ಕಿರುತೆರೆ ನಟ ಹಾಗೂ ನಟಿ ಎಂಟ್ರಿ..

ಕನ್ನಡ ಕಿರುತೆರೆಯ ಕಲಾವಿದರ ಪಯಣ ಬಾನೆತ್ತರಕ್ಕೆ ಬೆಳೆದು ನಿಂತಿದೆ. ಕನ್ನಡದ ಕಲಾವಿದರು ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ತಮ್ಮ ಪ್ರತಿಭೆಯನ್ನ ಈಗ ಪರಭಾಷೆಗಳಲ್ಲಿಯೂ ಮುಟ್ಟಿಸುತ್ತಿದ್ದಾರೆ. ಅಲ್ಲಿರೋ ಅಭಿಮಾನಿಗಳನ್ನ ಕೂಡ ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿದ್ದಾರೆ. ಸದ್ಯ ಈಗ ಅದೇ ಸಾಲಿನಲ್ಲಿ ಕನ್ನಡದ ನಟ ದರ್ಶ ಚಂದ್ರಪ್ಪ ಹಾಗೂ ನಟಿ ದೀಪ್ತಿ ಮನ್ನೆ ಲೀಡ್​ನಲ್ಲಿ ನಟಿಸುತ್ತಿರೋ ಜಗದ್ಧಾತ್ರಿ ಧಾರಾವಾಹಿಯು ಇದೇ ಶ್ರಾವಣಕ್ಕೆ ನಿಮ್ಮ ಮುಂದೆ ತೆಲುಗು ಭಾಷೆಯಲ್ಲಿ ಬರಲಿದೆ.

ಬಿಗ್​​ಬಾಸ್​ ಖ್ಯಾತಿಯ ನಟ ದರ್ಶ್​ ಚಂದ್ರಪ್ಪ ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್​ ಬಾಸ್​ ಮೂಲಕ ನಟ ದರ್ಶ್​ ಒಳ್ಳೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಂತರ ಅವಕಾಶಗಳು ದರ್ಶ್​ ಅವರನ್ನು ಹುಡುಕಿ ಬಂದವು. ಅದರಲ್ಲಿ ಈಗ ತೆಲುಗು ಸೀರಿಯಲ್​​​ ಜಗದ್ಧಾತ್ರಿ ಧಾರಾವಾಹಿಯ ನಾಯಕ ನಟನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ನಟ ದಶ್​​ ಚಂದ್ರಪ್ಪ. ಈ ಹೊಚ್ಚ ಹೊಸ ಧಾರಾವಾಹಿಗೆ ನಮ್ಮ ಕನ್ನಡ ಕಿರುತೆರೆಯ ನಟಿ ದೀಪ್ತಿ ಮನ್ನೆ ಆಯ್ಕೆ ಆಗಿದ್ದಾರೆ.

ಈ ಮುಂಚೆ ನಟಿ ದೀಪ್ತಿ ನಮ್ಮ ಕನ್ನಡದಲ್ಲಿ ಪದ್ಮಾವತಿ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ನಟಿಸಿ ಕನ್ನಡ ವೀಕ್ಷಕರ ಮನಸ್ಸನ್ನ ಗೆದ್ದಿದ್ದರು. ತುಳಸಿ ಅನ್ನೋ ಪಾತ್ರವನ್ನ ಅಚ್ಚು ಕಟ್ಟಾಗಿ ನಿಭಾಯಿಸಿದ್ದರು ನಟಿ ದೀಪ್ತಿ. ನಟಿ ದೀಪ್ತಿ ಅವರು ಕನ್ನಡ ಕಿರುತೆರೆಯಿಂದ ದೊಡ್ಡ ಬ್ರೇಕ್ ತೆಗೆದುಕೊಂಡು ತೆಲುಗಿನತ್ತ ಮುಖ ಮಾಡಿದ್ದರು. ಅಲ್ಲಿಯೂ ಕೆಲ ಧಾರಾವಾಹಿಗಳನ್ನ ಮಾಡಿ ಎಲ್ಲರ ಅಭಿಮಾನಗಳಿಸಿಕೊಂಡರು. ಇನ್ನು ನಟ ದರ್ಶ್​ ತೆಲುಗಿನ ವೀಕ್ಷಕರು ಹೊಸಬರು.

ಈ ಹೊಸ ಕತೆ ಹೇಗಿದೆ?

ಈ ಕತೆಯು ಕೂಡ ದೇವರ ಅಂಶವನ್ನ ಹೊಂದಿದೆ. ನಾಯಕ ನಟಿ ದೀಪ್ತಿ ಮನ್ನೆ ಇದರಲ್ಲಿ ಜೆಡಿ ಎಂಬ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಜೆಡಿಗೆ ಮನೆಯವರು ಅಂದ್ರೆ ಪಂಚ ಪ್ರಾಣ. ತುಂಬಾ ಶಕ್ತಿ ಹಾಗೂ ಯುಕ್ತಿ ಹೊಂದಿರೋ ಹೆಣ್ಣು ಇವಳು. ಜೆಡಿಗೆ ಅಮ್ಮ ಅಂದ್ರೆ ಪ್ರೀತಿ ಆದ್ರೆ ಅಮ್ಮನಿಗೆ ಇವಳನ್ನು ಕಂಡರೆ ಆಗೋದಿಲ್ಲ. ಆದರೂ ಕೂಡ ಜೆಡಿ ಅಮ್ಮನೆದುರು ಧ್ವನಿ ಎರಿಸೋಲ್ಲ. ಆದ್ರೆ ಮನೆಯಿಂದ ಆಚೆ ಇವಳು ದುರ್ಗಿ. ಕೆಟ್ಟದ್ದನ್ನ ಮಾಡೋರನ್ನು ಕಂಡರೆ ದುರ್ಗಿಯಂತೆ ಬೆನ್ನತ್ತಿ ಬುದ್ಧಿ ಕಲಿಸುತ್ತಾಳೆ. ಇದಕ್ಕೆ ಸಾಥ್ ನೀಡೋದು ನಾಯಕ ನಟ ದರ್ಶ್​ ಚಂದ್ರಪ್ಪ ಪಾತ್ರ.

ಒಟ್ಟಿನಲ್ಲಿ ಜಗದ್ಧಾತ್ರಿ ಕತೆಯು ಒಳ್ಳೆ ಎಳೆಯನ್ನ ಹೊಂದಿದ್ದು ವೀಕ್ಷಕರಿಗೆ ಇಷ್ಟು ಆಗುವುದರಲ್ಲಿ ಎರಡು ಮಾತಿಲ್ಲ. ನಮ್ಮ ಕನ್ನಡದ ಕಲಾವಿದರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರೋದು ನಿಜಕ್ಕೂ ಖುಷಿಯ ವಿಚಾರ. ಜಗದ್ಧಾತ್ರಿ ಇದೇ ಶ್ರಾವಣಕ್ಕೆ ನಿಮ್ಮ ಮುಂದೆ ಬರುತ್ತಿದೆ.

View this post on Instagram

A post shared by Zee Telugu (@zeetelugu)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪರಭಾಷೆಯಲ್ಲೂ ಮೋಡಿ ಮಾಡಲು ಸಜ್ಜಾದ ಮತ್ತಿಬ್ಬರು ಕನ್ನಡ ಕಲಾವಿದರು; ಯಾವ ಸೀರಿಯಲ್​ ಗೊತ್ತಾ..?

https://newsfirstlive.com/wp-content/uploads/2023/08/new-serial-2.jpg

Load More