ಸೋಲಿನ ಬೆನ್ನಲ್ಲೇ ರೋಹಿತ್ ಕಣ್ಣಲ್ಲಿ ನೀರು
ಒಂಭತ್ತು ಗೆಲುವಿನ ಮುಂದೆ ಒಂದು ದೊಡ್ಡ ಸೋಲು
ರೋಹಿತ್ ನಾಯಕತ್ವಕ್ಕೆ ಹ್ಯಾಂಡ್ಅಪ್ ಹೇಳಲೇಬೇಕು
ಟೀ ಇಂಡಿಯಾದ ವಿಶ್ವಕಪ್ ಫೈನಲ್ನಲ್ಲಿ ಸೋಲುಂಡಿದೆ. ಆಸ್ಟ್ರೇಲಿಯಾಗೆ 6 ವಿಕೆಟ್ಗಳ ಜಯವನ್ನು ನೀಡಿದೆ. ಆದರೆ ಕ್ರಿಕೆಟ್ ಫ್ಯಾನ್ಸ್ಗಂತೂ ಈ ವಿಚಾರ ಬೇಸರ ತರಿಸಿದೆ. ನಾಯಕ ರೋಹಿತ್ ಶರ್ಮಾ ಕೂಡ ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರು ಸುರಿಸಿದ್ದಾರೆ. ಆದರೀಗ ವಿಶ್ವಕಪ್ ಫೈನಲ್ ಸೋಲಿನಿಂದ ನೊಂದ ರೋಹಿತ್ ನಾಯಕತ್ವದಿಂದ ಕೆಳಗಿಳಿಯಲಿದ್ದಾರಾ ಎಂಬ ದೊಡ್ಡ ಪ್ರಶ್ನೆಯೊಂದು ಉದ್ಭವವಾಗಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ನಾಯಕತ್ವ ಅನ್ನೋದು ಅಷ್ಟೊಂದು ಸುಲಭದ ಮಾತಲ್ಲ. ಇದರ ಮುಂದೆ ದೊಡ್ಡ ಸವಾಲಿದೆ. ತಂಡವನ್ನ ಸರಿಯಾದ ದಿಕ್ಕಿನಲ್ಲಿ ಮುಂದುವರಿಸಬೇಕಾದ ಚಾಕಚಕ್ಯತೆ ಬೇಕಿದೆ. ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಅದ್ಭುತವಾಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದರು. ಆದರೆ ವಿಶ್ವಕಪ್ ಫೈನಲ್ನಲ್ಲಿ ಮಾತ್ರ ಎಡವಿದರು. ಆದರೂ ಟೀಂ ಇಂಡಿಯಾ ಇಲ್ಲಿಯವರೆಗೆ ದಿ ಬೆಸ್ಟ್ ಆಟವನ್ನು ನೀಡುತ್ತಾ ಬಂದಿದೆ.
ಭಾರತ ಈ ಬಾರಿ ವಿಶ್ವಕಪ್ ಗೆಲ್ಲುತ್ತೆ ಅನ್ನೋದು ಬಹುತೇಕರ ಕನಸಾಗಿತ್ತು. 12 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿಗೆ ಟೀಂ ಇಂಡಿಯಾ ಆಟಗಾರರು ಮುತ್ತಿಕ್ಕುತ್ತಾರೆ ಎಂಬುದು ಬಹುತೇಕ ಖಚಿತದ ಮಾತಾಗಿತ್ತು. ಆದರೆ ಫೈನಲ್ನಲ್ಲಿ ನಡೆದಿದ್ದೇ ಬೇರೆ. ಆಸೀಸ್ ಬೌಲಿಗರ ದಾಳಿಗೆ ವಿಕೆಟ್ ಒಪ್ಪಿಸುತ್ತಾ ಬಂದ ಆಟಗಾರರು ಅತ್ತ ಆಸೀಸ್ ಬ್ಯಾಟ್ಸ್ಮನ್ಗಳನ್ನು ಹಿಡಿದಿಡಲು ಕಷ್ಟಪಟ್ಟರು.
ಇನ್ನು ಆಸೀಸ್ ವಿಶ್ವಕಪ್ಗೆ ಮುತ್ತಿಕ್ಕಿದಾಗಲಂತೂ ರೋಹಿತ್ ಕಣ್ಣಲ್ಲಿ ನೀರಿತ್ತು. ಮಾತ್ರವಲ್ಲ, ಟೀಂ ಇಂಡಿಯಾದ ಬಹುತೇಕ ಆಟಗಾರರು ನೊಂದರು. ಆದರೆ ಇಷ್ಟು ವರ್ಷಗಳ ಶತತ ಪ್ರತಿಶ್ರಮಕ್ಕೆ ಸರಿಯಾದ ಬೆಲೆ ಸಿಗದಕ್ಕೆ ಬೇಸರಗೊಂಡರು.ಆದರೆ ಮುಂಬರುವ ವಿಶ್ವಕಪ್ಗೂ ಮುನ್ನ ರೋಹಿತ್ ನಾಯಕತ್ವದಿಂದ ಕೆಳಗಿಳಿಯುವುದು ಬಹುತೇಕ ಖಚಿತ. ಹಾಗಂದ ಮಾತ್ರಕ್ಕೆ ಈ ಬಾರಿಯ ಸೋಲಿನಿಂದ ರೋಹಿತ್ ನಾಯಕತ್ವವನ್ನು ಕೊನೆಗೊಳಿಸುತ್ತಿದ್ದಾರೆ ಎಂದಲ್ಲ.
ಧೋನಿ ನಾಯಕತ್ವದ ಹೇಗಿತ್ತು?
ಧೋನಿ 2007 ರಿಂದ 2017ರವರೆಗೆ ಮಾತ್ರ ನಾಯಕತ್ವ ಜವಾಬ್ದಾರಿ ಹೊತ್ತರು. ಮೊದಲೇ ಹೇಳಿದಂತೆ ನಾಯಕತ್ವ ಹೂವಿನ ಹಾಸಿಗೆಯಂತೂ ಖಂಡಿತಾ ಅಲ್ಲ. ಸಾಕಷ್ಟು ಟೆನ್ಶನ್ ಇರುತ್ತದೆ. ಆದರೂ 2011ರಲ್ಲಿ ಧೋನಿ ವಿಶ್ವಕಪ್ ತಂದುಕೊಟ್ಟಿರೋದನ್ನು ನೆನಪಿಸಿಕೊಳ್ಳಲೇಬೇಕು.
ಕೊಹ್ಲಿಗೂ ಸಾಕಯ್ತು ನಾಯಕತ್ವ ಪಟ್ಟ!
ಕೊಹ್ಲಿ ಕೂಡ ಟೀಂ ಇಂಡಿಯಾದ ನಾಯಕನಾಗಿದ್ದರು. 2014ರಿಂದ 2022ರವರೆಗೆ ನಾಯಕತ್ವ ಮುಂದುವರಿಸಿದರು. ಬಳಿಕ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಈ ಪಟ್ಟವನ್ನು ರೋಹಿತ್ ಶರ್ಮಾಗೆ ವಹಿಸಿದರು. ಆದರೂ ಕೊಹ್ಲಿ ಸಾಧನೆಯ ದಾರಿಯನ್ನು ಮರೆಯಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ