3 ಸ್ಕಾರ್ಪಿನ್ ಜಲಂತರ್ಗಾಮಿ ನೌಕೆ ಖರೀದಿಗೂ ಒಪ್ಪಿಗೆ
ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
ಮೋದಿ ಭೇಟಿಯಿಂದ ಭಾರತ-ಫ್ರಾನ್ಸ್ ರಕ್ಷಣಾ ಒಪ್ಪಂದಕ್ಕೆ ಇನ್ನಷ್ಟು ಬಲ
ಫ್ರಾನ್ಸ್ನಿಂದ ಹೊಸದಾಗಿ 26 ರಫೆಲ್-ಎಂ (Rafale-M) ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದೆ. ಡಿಎಸಿ (Defense Acquisition Council) ಭಾರತದ ನೌಕಾ ಸೇನೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಈ ಬಗ್ಗೆ ಕೆಲವೇ ಗಂಟೆಗಳಲ್ಲಿ ಭಾರತ ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಇವತ್ತು ದೆಹಲಿಯಿಂದ ಫ್ರಾನ್ಸ್ನತ್ತ ಹೊರಟಿದ್ದಾರೆ. ಎರಡು ದಿನಗಳ ಪ್ರವಾಸದಲ್ಲಿ ಮೋದಿ ಅವರು, ಈ ಮೆಗಾ ಡೀಲ್ ಮಾಡಲಿದ್ದಾರೆ. ಈ ಎಲ್ಲಾ ಫೈಟರ್ ಜೆಟ್ಗಳನ್ನು ಭಾರತದ ನೌಕಾ ಸೇನೆ ಬಳಸಿಕೊಳ್ಳಲಿದೆ ಎಂದು ವರದಿಯಾಗಿದೆ.
26 Rafale ಫೈಟರ್ ಜೆಟ್ಗಳಲ್ಲಿ 22 ರಫೆಲ್ ಯುದ್ಧ ವಿಮಾನಗಳು ನಾಲ್ಕು ಟ್ವಿನ್-ಸೀಟರ್ ತರಬೇತು ಫೈಟರ್ಗಳು ಸೇರಲಿವೆ. ಮಹತ್ವದ ಈ ಒಪ್ಪಂದದ ಜೊತೆಗೆ 3 ಸ್ಕಾರ್ಪಿನ್ ಜಲಂತರ್ಗಾಮಿ ನೌಕೆ ಖರೀದಿಗೂ Defense Acquisition Council ಅನುಮತಿ ನೀಡಿದೆ. ಭಾರತ 2005ರಲ್ಲಿ 6 ಸ್ಕಾರ್ಪಿನ್ ಜಲಂತರ್ಗಾಮಿ ನೌಕೆಯನ್ನು ಖರೀದಿ ಮಾಡಿತ್ತು.
ಫ್ರಾನ್ಸ್ ಪ್ರವಾಸದ ಬಗ್ಗೆ ತಮ್ಮ ವೆಬ್ಸೈಟ್ನಲ್ಲಿ ಬರೆದುಕೊಂಡಿರುವ ಮೋದಿ, ಅಲ್ಲಿನ ಅಧ್ಯಕ್ಷ ಮ್ಯಾಕ್ರನ್ ಆಹ್ವಾನದ ಮೇರೆಗೆ ಹೋಗುತ್ತಿದ್ದೇನೆ. French National Day ಪರೇಡ್ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. 269 ಸದಸ್ಯರ ಭಾರತದ ಸೇನಾ ತಂಡ, ವಾಯುಪಡೆಯ ರಫೆಲ್ ಫೈಟರ್ ಜೆಟ್ಗಳು ಕೂಡ ಈ ಪರೇಡ್ನಲ್ಲಿ ಪಾಲ್ಗೊಳ್ಳಲಿವೆ. ಎರಡು ರಾಷ್ಟ್ರಗಳ ಜೊತೆ ಮಹತ್ವದ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ