ಸೆಪ್ಟೆಂಬರ್ 9 ಮತ್ತು 10 ರಂದು ದಿಲ್ಲಿಯಲ್ಲಿ G20 ಶೃಂಗಸಭೆ
ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್
ರಸ್ತೆಗಳಲ್ಲಿ ರಾರಾಜಿಸುತ್ತಿವೆ ದೊಡ್ಡ, ದೊಡ್ಡ ಲಾಂಗೂರ್‌ಗಳು
ನವದೆಹಲಿ: ವಿಶ್ವದ ಪ್ರಮುಖ ರಾಷ್ಟ್ರಗಳ G20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಂಪೂರ್ಣವಾಗಿ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಗೆ ವಿಶ್ವದ ಅತಿರಥರು ನಾಯಕರು ಆಗಮಿಸುತ್ತಿದ್ದಾರೆ. ವಿದೇಶಿ ಅತಿಥಿಗಳ ಸ್ವಾಗತಕ್ಕೆ ನವದೆಹಲಿಯಲ್ಲಿ ಸಿದ್ಧತೆಗಳು ಜೋರಾಗಿದೆ. ಈ ತಯಾರಿಯ ಮಧ್ಯೆ ದೆಹಲಿ ಮಹಾನಗರ ಪಾಲಿಕೆಗೆ ಮಂಗಗಳ ಭಯ ಶುರುವಾಗಿದೆ. ಮಂಗಗಳ ಕಾಟದಿಂದ ಮರ್ಯಾದೆ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದೆ. ದೆಹಲಿಯ ಪ್ರಮುಖ ರಸ್ತೆಗಳಲ್ಲಿ ದೊಡ್ಡ, ದೊಡ್ಡ ಲಾಂಗೂರ್‌ಗಳ ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.
G20 ಶೃಂಗಸಭೆಯ ಹಿನ್ನೆಲೆ ವಿದೇಶದಿಂದ ಹಲವು ಅತಿಥಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅತಿಥಿಗಳ ಸತ್ಕಾರಕ್ಕಾಗಿ ದೆಹಲಿಯ ಪ್ರಮುಖ ರಸ್ತೆಗಳು ಸಜ್ಜಾಗಿವೆ. ದೆಹಲಿಯ ಫೈವ್ ಸ್ಟಾರ್ ಹೋಟೆಲ್‌ಗಳು ಅತಿಥಿಗಳ ಆಶ್ರಯಕ್ಕೆ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡಿವೆ. G20 ಶೃಂಗಸಭೆಯ ಬಾವುಟಗಳು ರಸ್ತೆ ಬದಿಗಳಲ್ಲಿ ರಾರಾಜಿಸುತ್ತಿವೆ. ಈ ಎಲ್ಲಾ ತಯಾರಿಯ ಮಧ್ಯೆ ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ಗೆ ಒಂದು ಆತಂಕ ಎದುರಾಗಿತ್ತು. ಅದುವೇ ಮಂಗಗಳ ಹಿಂಡು. ದೆಹಲಿಯ ಬೀದಿ, ಬೀದಿಯಲ್ಲೂ ಇರುವ ಮಂಗಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತವೆ. ಇದೇ ರೀತಿ ವಿದೇಶದಿಂದ ಆಗಮಿಸಿದ ಅತಿಥಿಗಳ ಮೇಲೂ ದಾಳಿ ಮಾಡಿದ್ರೆ ಮುಜುಗರ ಆಗೋದು ಪಕ್ಕಾ.
ದೆಹಲಿಯ ಕಟ್ಟಡದ ಮೇಲೆಲ್ಲಾ ರಾಜಾರೋಷವಾಗಿ ಓಡಾಡುವ ಮಂಗಗಳು ವಿದೇಶದಿಂದ ಆಗಮಿಸುವ ಅತಿಥಿಗಳ ಮೇಲೂ ದಾಳಿ ಮಾಡುವ ಆತಂಕವಿತ್ತು. ಹೀಗಾಗಿ ನವದೆಹಲಿಯ ಮುನ್ಸಿಪಾಲ್ ಕೌನ್ಸಿಲ್ ಲಾಂಗೂರ್‌ಗಳ ಮೊರೆ ಹೋಗಿದೆ. ರಸ್ತೆಗಳಲ್ಲಿ ದೊಡ್ಡ, ದೊಡ್ಡ ಲಾಂಗೂರ್‌ಗಳ ಕಟೌಟ್‌ಗಳನ್ನ ನಿಲ್ಲಿಸಿ ಮಂಗಗಳು ಹೆದರುವಂತೆ ಮಾಡಿದೆ. ಈ ಮೂಲಕ ಅತಿಥಿಗಳು ಓಡಾಡುವ ರಸ್ತೆಯಲ್ಲಿ ಲಾಂಗೂರ್‌ಗಳ ಹಲವಾರು ಕಟೌಟ್‌ಗಳನ್ನ ನಿಲ್ಲಿಸಲಾಗಿದೆ. ಇದ್ರಿಂದ ಅತಿಥಿ ದೇವೋ ಭವ ಅನ್ನೋ ಹಾಗೇ ವಿದೇಶದಿಂದ ಆಗಮಿಸೋ ಅತಿಥಿಗಳ ರಕ್ಷಣೆಗೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ. ಲಾಂಗೂರ್‌ಗಳ ಈ ಕಟೌಟ್‌ಗಳ ಜೊತೆಗೆ ತರಬೇತಿ ಪಡೆದ 40 ಸಿಬ್ಬಂದಿಯನ್ನು ಸಹ ಇದಕ್ಕಾಗಿ ನಿಯೋಜಿಸಲಾಗಿದೆ. ಆ ಸಿಬ್ಬಂದಿ ಲಾಂಗೂರ್‌ಗಳಿಂದ ಮಾಡಿದ ಶಬ್ದಗಳನ್ನು ಅನುಕರಿಸಿ ಮಂಗಗಳನ್ನು ಹೆದರಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ