ರಜನಿಕಾಂತ್ ಜೈಲರ್ ಸಿನಿಮಾಗೆ ಮಾಸ್ಟ್ರರ್ ಸ್ಟ್ರೋಕ್
ಜೈಲರ್ ವಿರುದ್ಧ ಕೋರ್ಟ್ಗೆ ಹೋಗಿದ್ದ ಆರ್ಸಿಬಿ ಟೀಂ
ಕೋರ್ಟ್ನಲ್ಲಿ ಜೈಲರ್ ಸಿನಿಮಾಗೆ ಭಾರೀ ಮುಖಭಂಗ!
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಜೈಲರ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೇವಲ ತಮಿಳುನಾಡು ಮಾತ್ರವಲ್ಲ ಕರ್ನಾಟಕ, ಆಂಧ್ರ, ಕೇರಳ ಸೇರಿದಂತೆ ಎಲ್ಲೆಡೆ ಅಬ್ಬರದ ಪ್ರದರ್ಶನ ಕಂಡಿದೆ. ಬಾಕ್ಸಾಫೀಸ್ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ತನ್ನ ಗೆಲುವಿನ ಓಟ ಮುಂದುವರಿಸಿದೆ. ಹೀಗಿರುವಾಗಲೇ ದೆಹಲಿ ಹೈಕೋರ್ಟ್ ಜೈಲರ್ ಸಿನಿಮಾ ತಂಡಕ್ಕೆ ಶಾಕ್ ನೀಡಿದೆ.
ಹೌದು, ಯಾವುದೇ ಕಾರಣಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ಇರೋ ಸೀನ್ ಪ್ರದರ್ಶನ ಮಾಡಬಾರದು. ಕೂಡಲೇ ಸಿನಿಮಾದಿಂದ ಆ ಸೀನ್ ತೆಗೆಯಬೇಕು ಎಂದು ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಸದ್ಯ ಕೋರ್ಟ್ ಆದೇಶಕ್ಕೆ ತಲೆ ಬಾಗಿದ ಜೈಲರ್ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಆರ್ಸಿಬಿ ಜೆರ್ಸಿ ಇರೋ ದೃಶ್ಯ ತೆಗೆದು ಹಾಕುತ್ತೇವೆ ಎಂದಿದ್ದಾರೆ.
ಕೋರ್ಟ್ ಮೊರೆ ಹೋಗಿದ್ದ ಆರ್ಸಿಬಿ..!
ಜೈಲರ್ ಸಿನಿಮಾದಲ್ಲಿ ಆರ್ಸಿಬಿ ಜೆರ್ಸಿ ಬಳಸಲಾಗಿತ್ತು. ವ್ಯಕ್ತಿಯೋರ್ವ ಆರ್ಸಿಬಿ ಜೆರ್ಸಿ ತೊಟ್ಟು ಮಹಿಳೆಯನ್ನು ನಿಂದಿಸಿದ್ದ. ಇದರ ವಿರುದ್ಧ ಆರ್ಸಿಬಿ ಕೋರ್ಟ್ ಮೆಟ್ಟಿಲೇರಿತ್ತು. ಅನುಮತಿ ಇಲ್ಲದೆ ಹೇಗೆ ಜೆರ್ಸಿಯನ್ನು ಬಳಸಿ ಕೆಟ್ಟದಾಗಿ ಬಿಂಬಿಸಿದ್ದೀರಿ? ಎಂದು ಆರ್ಸಿಬಿ ಪ್ರಶ್ನಿಸಿದೆ. ಹಾಗೆಯೇ ಕೂಡಲೇ ಈ ಸೀನ್ ತೆಗೆದು ಹಾಕಬೇಕು ಎಂದು ಡಿಮ್ಯಾಂಡ್ ಮಾಡಿದೆ.
ದೆಹಲಿ ಕೋರ್ಟ್ ಆದೇಶವೇನು..?
ಆರ್ಸಿಬಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ. ಸಿಂಗ್ ಸೆಪ್ಟೆಂಬರ್ 1ನೇ ತಾರೀಕಿನಿಂದ ಈ ಸೀನ್ ತೆಗೆದು ಹಾಕಿ ಎಂದು ಸೂಚಿಸಿದೆ. ಟಿವಿ, ಸ್ಯಾಟ್ಲೈಟ್, ಒಟಿಟಿಯಲ್ಲಿ ರಿಲೀಸ್ ಮಾಡೋ ಮುನ್ನ ದೃಶ್ಯಕ್ಕೆ ಕತ್ತರಿ ಹಾಕಿ ಎಂದು ಆದೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ