ನಿನಗೆ ಪರ್ಮನೆಂಟ್ ಜಾಬ್ ಇಲ್ಲ ಎಂದು ರಿಜೆಕ್ಟ್ ಮಾಡಿದ್ದ ಹುಡುಗಿ
ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಫುಡ್ ಡೆಲಿವರಿ ಬಾಯ್
ಕಬ್ಬಿಣದ ರಾಡ್ ಹಿಡಿದು ಹೋದ ಯುವಕ ಪೊಲೀಸರಿಗೆ ಶರಣು
ನವದೆಹಲಿ: ಮದುವೆಯಾಗು, ಮದುವೆಯಾಗು ಎಂದು ಪೀಡಿಸುತ್ತಿದ್ದ ಸಂಬಂಧಿಕನೇ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಉದ್ಯಾನವನದಲ್ಲಿ ನಡೆದಿದೆ. 25 ವರ್ಷದ ನರ್ಗಿಸ್ ಮೃತ ಯುವತಿ. ಈಕೆ ಸೋದರ ಮಾವನ ಮಗ ಇರ್ಫಾನ್ ಪ್ರತಿ ದಿನ ನನ್ನನ್ನೇ ಮದುವೆಯಾಗು ಅಂತಾ ಪೀಡಿಸುತ್ತಿದ್ದ. ನರ್ಗಿಸ್, ನಿನಗೆ ಸರಿಯಾದ ಕೆಲಸ ಇಲ್ಲ, ನಾನು ಚೆನ್ನಾಗಿ ಓದಿ ಸರ್ಕಾರಿ ಕೆಲಸಕ್ಕೆ ಸೇರಬೇಕು. ನನಗೆ ಈಗಲೇ ಮದುವೆ ಇಷ್ಟವಿಲ್ಲ ಎಂದು ಹೇಳುತ್ತಿದ್ದಳು. ಮದುವೆ ನಿರಾಕರಿಸಿದ ಒಂದೇ ಕಾರಣಕ್ಕೆ ಇರ್ಫಾನ್ ಕಬ್ಬಿಣದ ರಾಡ್‌ನಲ್ಲಿ ಹಲ್ಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
25 ವರ್ಷದ ನರ್ಗೀಸ್, ಕಮಲ ನೆಹರೂ ಕಾಲೇಜಿನಲ್ಲಿ ಪದವಿ ಓದುತ್ತಿದ್ದಳು. ಪ್ರತಿ ನಿತ್ಯ ಮನೆಯಿಂದ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಳು. ನಿನ್ನೆ ಬೆಳಗ್ಗೆ ನರ್ಗೀಸ್ ಹೋಗುವಾಗ ಹಿಂಬಾಲಿಸಿದ ಇರ್ಫಾನ್ ಮದುವೆಯಾಗು ಅಂತಾ ಕೇಳಿಕೊಂಡಿದ್ದಾನೆ. ಆಗಲು ನರ್ಗಿಸ್ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಕೋಪದಿಂದ ಕಬ್ಬಿಣದ ರಾಡ್‌ನಲ್ಲಿ ಹಲ್ಲೆ ಮಾಡಿದ್ದಾನೆ. ಮೂರು ದಿನದ ಹಿಂದೆಯೇ ಇರ್ಫಾನ್ ಈ ಕೃತ್ಯಕ್ಕೆ ಪ್ಲಾನ್ ಮಾಡಿದ್ದಾನೆ. ನರ್ಗಿಸ್ ಪ್ರತಿನಿತ್ಯ ಪಾರ್ಕ್ ಮೂಲಕ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಳು. ಕಳೆದ ಶುಕ್ರವಾರ ನರ್ಗೀಸ್ ಹೋಗುವುದನ್ನೇ ಹಿಂಬಾಲಿಸಿ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ ಆಟಗಾರನ ಮುಗಿಸಲು ಹೋದ ರವಿಶಾಸ್ತ್ರಿ.. ಅಟ್ಟಾಡಿಸಿಕೊಂಡು ಡ್ರೆಸ್ಸಿಂಗ್ ರೂಮ್ಗೆ ಹೋದಾಗ ಏನಾಯ್ತು?
ಇರ್ಫಾನ್, ನರ್ಗೀಸ್‌ಳನ್ನು ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಆದ್ರೆ, ಇರ್ಫಾನ್‌ಗೆ ಸರಿಯಾದ ಕೆಲಸ ಇರಲಿಲ್ಲ. ಫುಡ್ ಡೆಲಿವರಿ ಏಜೆಂಟ್ ಕೆಲಸ ಮಾಡುತ್ತಿದ್ದ ಇರ್ಫಾನ್‌ಗೆ ಪರ್ಮನೆಂಟ್ ಜಾಬ್ ಇಲ್ಲ ಎಂದು ನರ್ಗೀಸ್ ರಿಜೆಕ್ಟ್ ಮಾಡಿದ್ದಳು. ಆದ್ರೆ, ಇರ್ಫಾನ್ ಮಾತ್ರ ನರ್ಗೀಸ್ ಮಾತು ಕೇಳಿರಲಿಲ್ಲ. ಕೊನೆಗೆ ಇರ್ಫಾನ್ ಮಾಡುತ್ತಿದ್ದ ಫೋನ್ ಕಾಲ್ ಅನ್ನು ನರ್ಗೀಸ್ ಕಟ್ ಮಾಡುತ್ತಿದ್ದಳು. ಮದುವೆಯಾಗಲು ಒಪ್ಪದೇ ದೂರ ಮಾಡಿದ ಕೋಪಕ್ಕೆ ಇರ್ಫಾನ್, ಕಬ್ಬಿಣದ ರಾಡ್‌ನಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ನಡೆದ ಒಂದು ಗಂಟೆಯೊಳಗೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ