ಮಹಿಳೆಯನ್ನು ಆಕೆಯ ಮನೆ ಬಳಿ ಗುಂಡಿಕ್ಕಿ ಹತ್ಯೆ
ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಆರೋಪಿ
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯಿತು ಕೊಲೆಯ ದೃಶ್ಯ
ನವದೆಹಲಿ: ಯುವಕನೊರ್ವ ಮಹಿಳೆಯೊಬ್ಬರನ್ನು ಆಕೆ ಮನೆಯ ಬಳಿಯೇ ಗುಂಡಿಕ್ಕಿ ಹತ್ಯೆ ಮಾಡಿರೋ ಘಟನೆ ದಾಬ್ರಿ ಪ್ರದೇಶದಲ್ಲಿ ನಡೆದಿದೆ. ರೇಣು ಗೋಯಲ್ (42) ಮೃತ ಮಹಿಳೆ.
ಆರೋಪಿ ಆಶೀಸ್ (23) ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತನ್ನ ಮನೆಗೆ ಹೋಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಆಶೀಸ್ ಎಂಬುವುದು ತಿಳಿದು ಬಂದಿದೆ. ಕೂಡಲೇ ಆತನ ಬೆನ್ನತ್ತಿದ್ದ ಪೊಲೀಸರಿಗೆ ಆರೋಪಿ ಆಶೀಸ್ ಶವವಾಗಿ ಪತ್ತೆಯಾಗಿದ್ದಾನೆ.
ಸದ್ಯ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹರಿನಗರದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ಕುರಿತು ಸ್ಥಳೀಯ ದ್ವಾರಕಾ ಡಿಸಿಪಿ ಎಂ.ಹರ್ಷವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ. ಮೃತ ಇಬ್ಬರ ನಡುವೆ ತುಂಬಾ ಹಳೆಯ ಸ್ನೇಹವಿತ್ತು. ಜಿಮ್‌ನಲ್ಲಿ ಪರಸ್ಪರ ಭೇಟಿಯಾಗುತ್ತಿದ್ದರು. ಒಟ್ಟಿಗೆ ಜಿಮ್‌ಗೆ ಹೋಗುತ್ತಿದ್ದರು. ಯಾವುದೋ ಕಾರಣಕ್ಕೆ ಅವರಲ್ಲಿ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಆರೋಪಿಯು ಮಹಿಳೆ ಮನೆಯ ಬಳಿ ಬಂದು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಮನೆಗೆ ತೆರಳಿ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ