ಗಾಬರಿ ಹುಟ್ಟಿಸಿದ ಪ್ರಧಾನಿ ಮನೆ ಮೇಲೆ ಡ್ರೋನ್ ಹಾರಾಟ
ಡ್ರೋನ್ ಹಾರಾಟವನ್ನು ಮೊದಲು ನೋಡಿದ್ದು ಯಾರು ಗೊತ್ತಾ?
ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ ಸಂಪರ್ಕಿಸಿದ ಪೊಲೀಸರು
ನವದೆಹಲಿ: ಇಂದು ಬೆಳಗಿನ ಜಾವ ಪ್ರಧಾನಿ ಮೋದಿ ಅವರ ನಿವಾಸದ ಮೇಲೆ ಅಪರಿಚಿತ ಡ್ರೋನ್ವೊಂದು ಹಾರಾಟ ನಡೆಸಿರುವುದು ಆತಂಕವುನ್ನುಂಟು ಮಾಡಿದೆ. ಪ್ರಧಾನಿಯವರನ್ನು ರಕ್ಷಿಸುವ ಗಣ್ಯ ಪಡೆಯಾದ ವಿಶೇಷ ರಕ್ಷಣಾ ಗುಂಪಿನ ಅಧಿಕಾರಿಗಳು ಡ್ರೋನ್ ನೋಡಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.
ನವದೆಹಲಿಯಲ್ಲಿನ ಪ್ರಧಾನಿ ಮೋದಿ ಅವರ ನಿವಾಸದ ಮೇಲೆ ಯಾವುದೇ ವಸ್ತುಗಳನ್ನು ಹಾರಾಟ ನಡೆಸದಂತಹ ನಿಷೇಧಿತ ಸ್ಥಳವಾಗಿದೆ. ಹೀಗಾಗಿ ದಿನದ 24 ಗಂಟೆಯು ರಕ್ಷಣೆ ಪಡೆಗಳು ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿರುತ್ತಾರೆ. ಆದ್ರೆ ಇಂದು ಬೆಳಗಿನ ಜಾವದ ವೇಳೆ ಡ್ರೋನ್ವೊಂದು ಪ್ರಧಾನಿ ಮನೆ ಮೇಲೆ ಅನುಮಾನವಾಗಿ ಹಾರಾಟ ಮಾಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ದೆಹಲಿ ಪೊಲೀಸರು ಬೆಳಗ್ಗೆಯಿಂದಲೇ ಡ್ರೋನ್ ಬಗ್ಗೆ ಹುಡುಕಾಟ ನಡೆಸಿದ್ದು ವಿಚಾರಣೆ ಕೈಗೊಂಡಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ (ATC) ಅನ್ನು ಸಂಪರ್ಕಿಸಲಾಗಿದೆ. ಇನ್ನುವರೆಗೂ ಯಾವುದೆ ಡ್ರೋನ್ ಪತ್ತೆಯಾಗಿಲ್ಲ. ಇದರಿಂದ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ