newsfirstkannada.com

Rain News: ಉತ್ತರ ಭಾರತದಲ್ಲಿ ಮಳೆರಾಯನ ಅನಾಹುತ.. ಅಪಾಯದ ಮಟ್ಟ ಮೀರಿದ ಯಮುನಾ, ಗಂಗಾ; ಆತಂಕದಲ್ಲಿ ಜನರು..!

Share :

Published July 14, 2023 at 9:31am

    ದೆಹಲಿ, ಪಂಜಾಬ್​ ಸೇರಿ 10 ರಾಜ್ಯಗಳಿಗೆ ಮಳೆಯಿಂದ ಹಾನಿ

    ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆ

    ದೆಹಲಿಯಲ್ಲಿ ಪ್ರವಾಹ, ಜುಲೈ 16ರವರೆಗೆ ಶಾಲಾ-ಕಾಲೇಜು ರಜೆ

ಭಾರತದಲ್ಲಿ ಮಳೆಯ ಜೂಟಾಟ ನಡೆಯುತ್ತಿದೆ. ದಕ್ಷಿಣ ರಾಜ್ಯಗಳಲ್ಲಿ ಕಡೆ ಮಳೆಯ ಕೊರತೆ ಎದುರಿಸುತ್ತಿವೆ. ಆದ್ರೆ ಉತ್ತರ ರಾಜ್ಯಗಳಲ್ಲಿ ಮಳೆ.. ಪ್ರವಾಹ.. ಸಾವು.. ನೋವು.. ಆತಂಕ.. ಯಾವಾಗ ಏನ್ ಆಗುತ್ತೋ ಅನ್ನೋ ಭಯದಲ್ಲೇ ಬದುಕುವ ಪರಿಸ್ಥಿತಿ ಇದೆ.

ಮಳೆ.. ಭಾರೀಶ್​.. ಈ ಪದ ಉತ್ತರದ ರಾಜ್ಯಗಳಲ್ಲಿ ಜನ ನಿದ್ದೆಯಲ್ಲೂ ಬೆಚ್ಚಿ ಬೀಳವಂತೆ ಮಾಡಿದೆ. ಅದಕ್ಕೆ ಸಾಕ್ಷಿ ಕಳೆದೊಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆ. ವರುಣ ದೇವನ ರುದ್ರ ನರ್ತನಕ್ಕೆ ಹಿಮಾಚಲ ಪ್ರದೇಶ. ಉತ್ತರಾಖಂಡ್​, ಹರಿಯಾಣ, ದೆಹಲಿ, ಪಂಜಾಬ್, ರಾಜಸ್ಥಾನ, ಪಂಜಾಬ್​ ಹಾಗೆ 10 ರಾಜ್ಯಗಳು ಭಾರೀ ಪ್ರವಾಹಕ್ಕೆ ತುತ್ತಾಗಿವೆ. ಡ್ಯಾಂಗಳು ತುಂಬಿವೆ. ನದಿಗಳು ಉಕ್ಕಿ ಹರಿಯುತ್ತಿವೆ. ಬಿಟ್ಟ ಗುಡ್ಡಗಳು. ಪರ್ವತಗಳು ಕುಸಿತಾ ಇವೆ. ವಾಹಗಳು ನೀರಿನಲ್ಲಿ ಕೊಚ್ಚಿ ಹೋಗ್ತಾ ಇವೆ. ನದಿಗಳು ಅಕ್ಕ ಪಕ್ಕದ ಭೂಮಿಗಳನ್ನೆಲ್ಲ ಆಪೋಷಣ ತಗೊಳ್ತಾ ಇವೆ.

ಮಳೆಗೆ ಹಿಂದೆಂದೂ ಕಂಡು ಕೇಳರಿಯದ ರೀತಿ ದೆಹಲಿ ತತ್ತರ

ರಾಜಧಾನಿ ದಿಲ್ಲಿ ಅಕ್ಷರಶಃ ಮುಳುಗಿದೆ. ಯಮುನಾ ನದಿಯ ಪ್ರವಾಹ ಮತ್ತಷ್ಟು ಹೆಚ್ಚಿದ್ದು, ಅನೇಕ ಮನೆಗಳು ಹಾಗೂ ರಸ್ತೆಗಳು ಜಲಾವೃತವಾಗಿವೆ. ಇದರಿಂದ ರಕ್ಷಣೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡುವುದನ್ನು ಮುಂದುವರಿಸಲಾಗಿದೆ. ಇದರಿಂದ ಬೆಳಿಗ್ಗ 8 ಗಂಟೆ ಸುಮಾರಿಗೆ ಯಮುನಾ ನದಿ ನೀರಿನ ಮಟ್ಟ 208.48 ಮೀಟರ್‌ಗೆ ತಲುಪಿದೆ. ಈಗಿನ ನೀರಿನ ಮಟ್ಟವು ಅಪಾಯದ ಗುರುತಿಗಿಂತ ಮೂರು ಮೀಟರ್ ಅಧಿಕವಿದೆ.

ದೆಹಲಿಯಲ್ಲಿ ಪ್ರವಾಹ.. ಜುಲೈ 16ರವರೆಗೆ ಶಾಲಾ-ಕಾಲೇಜು ರಜೆ

ಕಳೆದ ಕೆಲವು ದಿನಗಳಿಂದ ಉತ್ತರ ಭಾರತದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ವರುಣನ ಆರ್ಭಟ ತಗ್ಗಿದ್ದರೂ, ಪ್ರವಾಹದ ಮಟ್ಟ ಮಾತ್ರ ಏರುತ್ತಲೇ ಇದೆ. ಯಮುನಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ಶಾಲಾ-ಕಾಲೇಜುಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಜುಲೈ 16ರವರೆಗೂ ರಜೆ ಘೋಷಿಸಲಾಗಿದೆ. ಲೆಫ್ಟಿನೆಂಟ್​ ಗವರ್ನರ್​ ಹಾಗೂ ದೆಹಲಿ ವಿಪತ್ತು ನಿರ್ವಹಣಾ ಮಂಡಳಿ ಸಭೆ ಬಳಿಕ ನಿರ್ಧಾರವನ್ನು ಪ್ರಕಟಿಸಲಾಗಿದ್ದು, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಜುಲೈ 16ರವರೆಗೂ ವರ್ಕ್​ ಫ್ರಮ್​ ಹೋಮ್​ ಮಾಡುವಂತೆ ಸೂಚಿಸಲಾಗಿದೆ.

ಮಳೆಯ ಅಬ್ಬರ.. ದೆಹಲಿಯ ಹಲವೆಡೆ ಟ್ರಾಫಿಕ್​ ಜಾಮ್

ದೆಹಲಿಯ ವಿವಿಧ ಭಾಗಗಳಲ್ಲಿ ಜಲಾವೃತಗೊಂಡ ಪರಿಣಾಮ ಸಂಚಾರ ವ್ಯತ್ಯಯದಿಂದಾಗಿ ಸರಾಯ್ ಕಾಲೇ ಖಾನ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್​ ನಿರ್ಮಾಣವಾಗಿತ್ತು. ಯಮುನಾ ನದಿಯಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟವು ನವದೆಹಲಿಯ ಕೆಂಪು ಕೋಟೆಯ ಗಡಿ ಗೋಡೆಯನ್ನು ಮುಟ್ಟಿದೆ. ದೆಹಲಿಯ ಹಲವಾರು ಪ್ರದೇಶಗಳು ತತ್ತರಿಸುತ್ತಿವೆ. ನಗರದಲ್ಲಿ ನದಿ ನೀರು ಪ್ರವೇಶಿಸಿದ ಕಾರಣ ಟ್ರಕ್‌ಗಳು, ಬಸ್ ನೀರಿನಲ್ಲಿ ಮುಳುಗಿವೆ. ಕಾಶ್ಮೀರ ಗೇಟ್ ಬಳಿಯೂ ನೀರು ತುಂಬಿದೆ. ನದಿಯ ನೀರಿನಲ್ಲಿ ದೆಹಲಿ ಮುಳುಗಿರುವುದಕ್ಕೆ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಟ್ವೀಟ್​ ಅಸ್ತ್ರ ಪ್ರಯೋಗಿಸಿದ್ದಾರೆ.

ಮಳೆ ನೀರಲ್ಲೇ ಬಾರ್​ಗೆ ಬಂದು ಪೆಗ್​ ಸೇವಿಸಿದ ಭೂಪ

ಮಳೆ ಅಂತ ದೆಹಲಿ ಜನ ತತ್ತರಿಸುತ್ತಿದ್ದರೇ, ಇಲ್ಲೊಬ್ಬ ಮಾತ್ರ ಸಿಡಿಲೇ ಬರಲಿ, ಚಂಡಮಾರುತವೇ ಬರಲಿ, ಜಗತ್ತೇ ಮುಳುಗಿ ಹೋಗಲಿ ನಾನು ಯಾವ ಕಾರಣಕ್ಕೂ ಈ ಕೆಲಸ ತಪ್ಪಿಸಿಲ್ಲ ಎಂದು ಮಳೆ ನೀರಲ್ಲೇ ಮರದ ದಿಮ್ಮಿ ಮೇಲೆ ಕುಳಿತು ಹುಟ್ಟು ಹಾಕುತ್ತ ಬಾರ್​ಗೆ ಬಂದಿದ್ದಾನೆ. ಅಲ್ಲಿ ಹಣ ಕೊಟ್ಟು ಮದ್ಯ ಸೇವಿಸಿ ಮತ್ತೆ ರಿಟರ್ನ್​ ಆ ಮರದ ದಿಮ್ಮಿ ಮೇಲೆ ಹೋಗಿದ್ದಾನೆ. ಈ ಘಟನೆಯು ಕಾಶ್ಮೀರ ಗೇಟ್​ನ ಯಮುನಾ ದಂಡೆಯ ಮೆಟ್ರೋ ನಿಲ್ದಾಣ ಬಳಿ ನಡೆದಿದೆ.

ಪಂಜಾಬ್, ಹರಿಯಾಣದಲ್ಲಿ ಮಳೆಯ ರೋಷಾಗ್ನಿ

ಪಂಜಾಬ್‌ನಲ್ಲಿ ಭಾರೀ ಮಳೆಯಿಂದ 14 ಜಿಲ್ಲೆಗಳು ಹಾನಿಗೊಳಗಾಗಿದ್ದರೆ, ಹರಿಯಾಣದ 7 ಜಿಲ್ಲೆಗಳು ಸಹ ತೀವ್ರ ಹಾನಿಗೊಳಗಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈವರೆಗೆ ಪಂಜಾಬ್‌ನಲ್ಲಿ 11, ಹರಿಯಾಣದಿಂದ 10 ಜನರು ಸೇರಿ ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ. ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಎರಡು ರಾಜ್ಯದ ಸರ್ಕಾರಗಳು ಸಂತ್ರಸ್ಥರಿಗೆ ಪರಿಹಾರ ನೀಡಿವೆ.

ಉತ್ತರ ಪ್ರದೇಶದಲ್ಲಿ ಮಳೆ ಅಬ್ಬರಕ್ಕೆ 14ಕ್ಕೂ ಹೆಚ್ಚು ಸಾವು

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ. ಹಲವು ನದಿಗಳು ಅಪಾಯದ ಗಡಿ ದಾಟಿದೆ. ಮಳೆಯ ಅಬ್ಬರಕ್ಕೆ ಸಿಲುಕಿ ಸುಮಾರು 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯೂ ಉತ್ತರ ಪ್ರದೇಶ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬುದೌನ್ ಜಿಲ್ಲೆಯ ಕಛ್ಲಾ ಸೇತುವೆಯಲ್ಲಿ ಗಂಗಾನದಿ ಅಪಾಯ ಮಟ್ಟ ತಲುಪಿದೆ ಎಂದು ಕೇಂದ್ರ ಜಲ ಆಯೋಗದ ತಿಳಿಸಿದೆ.

ಧೋ ಅಂತ ಸುರಿದಿದ್ದ ಮಳೆರಾಯ ಹಿಮಾಚಲ ಪ್ರದೇಶದಲ್ಲಿ ಕೊಂಚ ಗ್ಯಾಪ್​ ಕೊಟ್ಟಿದ್ದಾನೆ. ಉತ್ತರ ಭಾರತದ ಜನರಿಗೆ ಮಳೆ ಅಂತ ಹೇಳಿದ್ರೆ ಸಾಕು ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದು ಯಾವಾಗ ಏನ್ ಆಗುತ್ತೋ ಅನ್ನೋ ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain News: ಉತ್ತರ ಭಾರತದಲ್ಲಿ ಮಳೆರಾಯನ ಅನಾಹುತ.. ಅಪಾಯದ ಮಟ್ಟ ಮೀರಿದ ಯಮುನಾ, ಗಂಗಾ; ಆತಂಕದಲ್ಲಿ ಜನರು..!

https://newsfirstlive.com/wp-content/uploads/2023/07/DELHI_RAIN_2.jpg

Load More