newsfirstkannada.com

ದೆಹಲಿಯಲ್ಲಿ ಮಳೆಯಿಂದಾದ ಅವಾಂತರಗಳು ಅಷ್ಟಿಷ್ಟಲ್ಲ.. ಹಿಮಾಚಲ ಪ್ರದೇಶದಲ್ಲಿ ಇನ್ನೂ ಎರಡು ದಿನ ವರುಣಾರ್ಭಟ

Share :

17-07-2023

  ರಾಜ್‌ಘಾಟ್‌, ಮಯೂರ್ ವಿಹಾರ್ ಇನ್ನೂ ಕೂಡ ಜಲಾವೃತ

  ಪ್ರವಾಹಕ್ಕೆ ತುತ್ತಾದ ಕುಟುಂಬಕ್ಕೆ ₹10 ಸಾವಿರ ರೂ. ಪರಿಹಾರ

  ಮತ್ತೆ ಮಳೆಯ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ..!

ಉತ್ತರ ಭಾರತದಲ್ಲಿ ಮಳೆ ಅಬ್ಬರ ಕಡಿಮೆಯಾದ್ರು, ಮಳೆಯಿಂದಾದ ಅವಾಂತರಗಳು ಮಾತ್ರ ಇನ್ನೂ ಕಡಿಮೆಯಾಗಿಲ್ಲ.. ಉತ್ತರದ ರಾಜ್ಯಗಳಿಗೆ ವರುಣಾಘಾತದ ಪೆಟ್ಟು ಬಿದ್ದಿದೆ. ಕಳೆದ ಕೆಲ ದಿನಗಳಿಂದ ಅಬ್ಬರಿಸ್ತಿರೋ ಮಹಾಮಳೆ, ಅವಾಂತರಗಳ ಸರಪಳಿಯೇ ನಿರ್ಮಿಸಿ ಬಿಟ್ಟಿದೆ.

ಉತ್ತರ ಭಾರತದಾದ್ಯಂತ ವಿನಾಶಕಾರಿ ಮಳೆ. ಭೀಕರ ಪ್ರವಾಹ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅದೆಷ್ಟೋ ಮಂದಿ ಮನೆ ಕಳೆದಕೊಂಡು ಒದ್ದಾಡುತ್ತಿದ್ದಾರೆ. ಮಳೆರಾಯ ದೊಡ್ಡ ದೊಡ್ಡ ನಗರಗಳಲ್ಲಿ ನಿರೀಕ್ಷಿಸಲಾಗದಷ್ಟು ಸಾವು ನೋವು ಸೃಷ್ಟಿಸಿದ್ದಾನೆ. ಮೂಲ ಸೌಕರ್ಯ ಇಲ್ಲದಂಥಹ ಪರಿಸ್ಥಿತಿಗೆ ಜನರನ್ನ ದೂಡಿದ್ದಾನೆ.

ದೆಹಲಿಯ ಯಮುನಾ ನದಿಯಿಂದ ಉಕ್ಕಿ ಹರಿಯುತ್ತಿರುವ ನೀರು ರಿಂಗ್ ರಸ್ತೆಯ ಕೆಂಪು ಕೋಟೆಯ ಗೋಡೆಗೆ ತಾಗಿದ್ದರಿಂದ ಸಮೀಪದ ಪ್ರದೇಶ ಜಲಾವೃತವಾಗಿದೆ. ನದಿ ನೀರಿನ ಮಟ್ಟ ಕಡಿಮೆಯಾಗ್ತಿದ್ದು ಐಟಿಒ ಪ್ರದೇಶ ಇನ್ನೂ ಪ್ರವಾಹದ ಪರಿಸ್ಥಿತಿಯಲ್ಲಿದೆ. ರಾಜ್‌ಘಾಟ್‌ ಬಳಿ ನೀರು ನಿಂತು ಕರೆಯಂತಾಗಿದೆ. ಮಯೂರ್ ವಿಹಾರ್ ಜಲಾವೃತವಾಗಿದ್ದು ಮಳೆ ಕಡಿಮೆ ಯಾದ್ರೂ ಇಲ್ಲಿನ ನೀರಿನ ಮಟ್ಟ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಮಳೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರ ಮಾಡಲಾಗಿದ್ದ ಜನರಿಗಾಗಿ ಮಯೂರ್ ವಿಹಾರ್ ಪ್ರದೇಶದಲ್ಲಿ ಪರಿಹಾರ ಶಿಬಿರ ಸ್ಥಾಪಿಸಲಾಗಿದೆ.

ದೆಹಲಿಯ ಲೋಹಾ ಪುಲ್ ಪ್ರದೇಶದಲ್ಲಿ ಹಳೆಯ ಯಮುನಾ ಸೇತುವೆಯಿಂದ ರೈಲು ಸೇವೆಗಳು ಪುನರಾರಂಭ ಗೊಂಡಿದೆ. ಪ್ರವಾಹಕ್ಕೆ ತುತ್ತಾದ ಕುಟುಂಬಗಳಿಗೆ ದೆಹಲಿ ಸಿಎಂ ಕೇಜ್ರಿವಾಲ್ ₹10 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಯಮುನಾ ನದಿಯ ಉದ್ದಕ್ಕೂ ತಗ್ಗು ಪ್ರದೇಶಗಳ ಬರುವ ಎಲ್ಲ ಶಾಲಾ-ಕಾಲೇಜುಗಳಿಗೆ ಇನ್ನೂ 2 ದಿನ ರಜೆ ವಿಸ್ತರಣೆ ಮಾಡಲಾಗಿದೆ.

ಮುಂದೆರಡು ದಿನ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ

ಹಿಮಾಚಲ ಪ್ರದೇಶದಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಲವಾರು ಭೂಕುಸಿತ ಪ್ರದೇಶಗಳು, ಅಪಾಯಕಾರಿ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಓಡಾಡದಂತೆ ಸೂಚನೆ ನೀಡಲಾಗಿದೆ. ಸುಮಾರು 80 ಗಂಟೆಗಳ ಕಾರ್ಯಾಚರಣೆ ನಂತರ ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದಾಗಿ ರಸ್ತೆ ಮಧ್ಯೆ ಸಿಲುಕಿಕೊಂಡಿದ್ದ 1,500 ಭಾರಿ ವಾಹನಗಳನ್ನು ತೆಗೆದು ಅನುವು ಮಾಡಿಕೊಡಲಾಗಿದೆ. ಇನ್ನು ನಿನ್ನೆಯಿಂದ ಹಿಮಾಚಲದ ಕೆಲ ಜಿಲ್ಲೆಗಳಲ್ಲಿ ಮಳೆ ಮತ್ತೆ ಆರಂಭವಾಗಿದ್ದು, ಬಿಲಾಸ್‌ಪುರದಿಂದ ಮಳೆಯ ಅಬ್ಬರದ ದೃಶ್ಯಗಳು ಮತ್ತೆ ಹಳೇ ನೆನೆಪನ್ನು ಮೆಲುಕು ಹಾಕುವಂತೆ ಮಾಡುತ್ತಿದೆ.

ಇತ್ತ ಹರಿಯಾಣ ರೇವಾರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆ, ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದು ಅವಾಂತರಗಳೇ ಸೃಷ್ಟಿಸಿದೆ.

ನೀರಲ್ಲೇ ಕುಳಿತು ಉತ್ತರಾಖಂಡದ ಮಾಜಿ ಸಿಎಂ ಪ್ರತಿಭಟನೆ

ಉತ್ತರಾಖಂಡದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಮಾಜಿ ಸಿಎಂ ಹರೀಶ್ ರಾವತ್ ನಿನ್ನೆ ಹರಿದ್ವಾರದ ರೂರ್​ಕೀಯ ಖಾನ್‌ಪುರ ಗ್ರಾಮದಲ್ಲಿ ಜಲಾವೃತವಾಗಿರುವ ರಸ್ತೆ ಮೇಲೆ ಚೇರ್​ ಹಕಿಕೊಂಡು ಕುಳಿತು ಆಡಳಿತ ಸರ್ಕಾರದ ವಿರುದ್ಧ ಗುಡುಗಿದರು. ತೆಹ್ರಿ ಡ್ಯಾಮ್​ನಿಂದ ನೀರು ಬಿಡುಗಡೆ ಮಾಡಲಾಗಿದ್ದು ಋಷಿಕೇಶದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ದಾಖಲೆ ಮಳೆಗೆ ಉತ್ತರ ಭಾರತ ನಲುಗಿ ಹೋಗಿದೆ. ಯಮುನೆಯ ಆರ್ಭಟಕ್ಕೆ ದೆಹಲಿಯಂತೂ ತತ್ತರಿಸಿ ಹೋಗಿದೆ. ಭಾರತೀಯ ಹವಾಮಾನ ಮತ್ತೆ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಈಗಲಾದ್ರೂ ಮುನ್ನೆಚ್ಚರಿಕೆ ವಹಿಸದಿದ್ರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಯಲ್ಲಿ ಮಳೆಯಿಂದಾದ ಅವಾಂತರಗಳು ಅಷ್ಟಿಷ್ಟಲ್ಲ.. ಹಿಮಾಚಲ ಪ್ರದೇಶದಲ್ಲಿ ಇನ್ನೂ ಎರಡು ದಿನ ವರುಣಾರ್ಭಟ

https://newsfirstlive.com/wp-content/uploads/2023/07/DELHI_FLOOD_1-1-1.jpg

Load More