newsfirstkannada.com

5 ದರೋಡೆಕೋರರನ್ನ ಹಿಡಿಯೋಕೆ 1,600 ಮಂದಿ ಚೇಸ್ ಮಾಡಿದ ಪೊಲೀಸ್; ಲೈವ್ ರಾಬರಿ ತನಿಖೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

Share :

27-06-2023

    ಹಾಡಹಗಲೇ ದೆಹಲಿ ಪ್ರಗತಿ ಮೈದಾನ್ ರಸ್ತೆಯಲ್ಲಿ ಲೈವ್ ರಾಬರಿ

    ಬಂದೂಕು ತೋರಿಸಿ ಕಾರಲ್ಲಿದ್ದ ಬ್ಯಾಗ್‌ ದೋಚಿಕೊಂಡು ಹೋದರು

    ಗವರ್ನರ್ ರಾಜೀನಾಮೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಆಗ್ರಹ

ನವದೆಹಲಿ: ಹಾಡಹಗಲೇ ಬೈಕ್‌ನಲ್ಲಿ ಚೇಸ್ ಮಾಡಿದ ದರೋಡೆಕೋರರು ಬಂದೂಕು ತೋರಿಸಿ ಕಾರಿನಲ್ಲಿದ್ದ ಬ್ಯಾಗ್‌ ದೋಚಿಕೊಂಡು ಹೋಗಿದ್ದರು. ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನ್ ರಸ್ತೆಯಲ್ಲಿ ನಡೆದಿದ್ದ ಈ ಲೈವ್ ರಾಬರಿ ಇಡೀ ದೆಹಲಿಯನ್ನೇ ಬೆಚ್ಚಿ ಬೀಳಿಸಿತ್ತು. ದೆಹಲಿ ಸುರಕ್ಷತೆಯನ್ನೇ ಪ್ರಶ್ನಿಸಿದ್ದ ಈ ಲೈವ್‌ ರಾಬರಿ ಪೊಲೀಸರಿಗೆ ತಲೆನೋವಾಗಿದ್ದು, ಕೊನೆಗೂ ದರೋಡೆ ಮಾಡಿದ್ದ ಐವರು ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಪ್ಪಿಸಿಕೊಂಡಿದ್ದ 5 ದರೋಡೆಕೋರರನ್ನ ದೆಹಲಿ ಪೊಲೀಸರು ಹಗಲು ರಾತ್ರಿ ಹುಡುಕಿ ಬಂಧಿಸಿದ್ದು ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕಳೆದ ಜೂನ್ 24ರಂದು ದೆಹಲಿಯ ಪ್ರಗತಿ ಮೈದಾನ್ ರಸ್ತೆಯಲ್ಲಿ ಈ ದರೋಡೆ ನಡೆದಿತ್ತು. ಎರಡು ಬೈಕ್‌ನಲ್ಲಿ ಬಂದ ಕಿರಾತಕರು ಬಂದೂಕಿನಲ್ಲಿ ಬೆದರಿಸಿ ದೋಚಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ವೈರಲ್ ಆಗ್ತಿದ್ದಂತೆ ದೆಹಲಿ ಪೊಲೀಸರ ಮೇಲೆ ಬಹಳಷ್ಟು ಒತ್ತಡ ಹಾಕಲಾಗಿತ್ತು. ಈ ರಾಬರಿಯನ್ನು ಸವಾಲಾಗಿ ಸ್ವೀಕರಿಸಿದ ದೆಹಲಿ ಪೊಲೀಸರು ಘಟನೆ ನಡೆದು 48 ಗಂಟೆ ಕಳೆಯುವುದರೊಳಗೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಇಂದು ಮತ್ತೆ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಐವರನ್ನ ದೆಹಲಿ ಪೊಲೀಸರು ಹುಡುಕಿದ ತನಿಖೆಯೇ ರಣ ರೋಚಕವಾಗಿದೆ.

ಲೈವ್ ರಾಬರಿಗೆ ಸಿನಿಮೀಯ ಸ್ಟೈಲ್‌ ತನಿಖೆ!

ದೆಹಲಿಯಲ್ಲಿ ನಡೆದ ಲೈವ್ ರಾಬರಿಯೇ ಒಂದು ಸಿನಿಮೀಯ ಮಾದರಿಯಲ್ಲಿದೆ. ಎರಡು ಬೈಕ್ ನಲ್ಲಿ ಬಂದ ದರೋಡೆಕೋರರು ಬಂದೂಕು ತೋರಿಸಿ ಪರಾರಿ ಆಗ್ತಾರೆ. ಇವರನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದ ದೆಹಲಿ ಪೊಲೀಸರು ಭರ್ಜರಿ ಆಪರೇಷನ್ ನಡೆಸಿದ್ದಾರೆ. ಇಡೀ ದೆಹಲಿಯ ಮೂಲೆ, ಮೂಲೆಯನ್ನು ಜಾಲಾಡಿರುವ ದೆಹಲಿ ಪೊಲೀಸರು ಬರೋಬ್ಬರಿ 1600 ಜನರನ್ನ ವಶಕ್ಕೆ ಪಡೆದಿದ್ದಾರೆ. 1600 ಶಂಕಿತರಲ್ಲಿ ಈ ಐವರು ದರೋಡೆಕೋರರನ್ನು ಪತ್ತೆ ಹಚ್ಚಲಾಗಿದೆ. 5 ದರೋಡೆಕೋರರು ಬ್ಯಾಗ್‌ನಲ್ಲಿ ಹೊತ್ತೊಯ್ದಿದ್ದ 2 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಈ ಲೈವ್ ರಾಬರಿ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯ ಸುರಕ್ಷತೆಯನ್ನೇ ಪ್ರಶ್ನಿಸುವಂತಿತ್ತು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಪೊಲೀಸರ ಮೇಲೆ ಕಿಡಿಕಾರಿದ್ದು, ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆ ನೀಡಲು ಒತ್ತಾಯಿಸಿದ್ದರು. ರಾಬರಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ ಉನ್ನತ ಮಟ್ಟದ ಸಭೆ ನಡೆಸಿ ಕೂಡಲೇ ದರೋಡೆಕೋರರನ್ನು ಬಂಧಿಸಲು ಖಡಕ್ ಸೂಚನೆ ನೀಡಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿರುವ ದೆಹಲಿ ಪೊಲೀಸರು ಕೊನೆಗೂ 5 ದರೋಡೆಕೋರರನ್ನ ಕಂಬಿ ಹಿಂದೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

5 ದರೋಡೆಕೋರರನ್ನ ಹಿಡಿಯೋಕೆ 1,600 ಮಂದಿ ಚೇಸ್ ಮಾಡಿದ ಪೊಲೀಸ್; ಲೈವ್ ರಾಬರಿ ತನಿಖೆಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

https://newsfirstlive.com/wp-content/uploads/2023/06/Delhi-Robbery.jpg

Load More