newsfirstkannada.com

ಮಧ್ಯರಾತ್ರಿಲಿ.. ಹೈವೇ ರಸ್ತೇಲಿ..! ಪ್ರೇಮಿಗಳ ರಾಬರಿ ಮಾಡಲು ಬಂದು ಖರ್ಚಿಗೆ ಇಟ್ಕೊಳ್ಳಿ ಅಂತಾ ದುಡ್ಡು ಕೊಟ್ಟು ಹೋದ ಕಳ್ಳರು..!

Share :

26-06-2023

    ಇದೊಂದು ವಿಚಿತ್ರ ಕೇಸ್.. ತುಂಬಾನೇ ಮಜವಾಗಿದೆ

    ಪ್ರೇಮಿಗಳ ಕಂಡು ಕರಗಿತಾ ಕಳ್ಳರ ಮನಸ್ಸು..?

    ಜೋಡಿಗಳಿಗೆ ಕಳ್ಳರು ಕೊಟ್ಟ ಹಣವೆಷ್ಟು ಗೊತ್ತಾ..?

ಇದು ಕಲಿಯುಗ ಹಂಗಾಗಿ ಕಳ್ಳರು ಸಾಮಾನ್ಯ. ಕತ್ತಲಾದ್ರೆ ಕಳ್ಳರು ಌಕ್ಟೀವ್ ಆಗ್ಬಿಡ್ತಾರೆ. ಕೈಗೆ ಸಿಕ್ಕಿದ್ದು ದೋಚ್ತಾರೆ. ಜನರ ತಲೆಗಳೆನ್ನೇ ಒಡೆದು ಚಿನ್ನ ದೋಚೋ ಖತರ್ನಾಕ್ ಆಸಾಮಿಗಳ ಬಗ್ಗೆ ನೀವು ನೋಡಿರ್ತೀರಿ ಅಥವಾ ಕೇಳಿರ್ತೀರಿ. ಆದ್ರೆ, ಕಳ್ಳರೇ ಕದಿಯೋಕೆ ಬಂದು ಅವರೇ ಖರ್ಚಿಗೆ ಇಟ್ಕೊಳ್ಳಿ ಅಂತಾ ದುಡ್ಡು ಕೊಟ್ಟು ಹೋಗೋದನ್ನು ನೋಡಿದ್ದೀರಾ? ಕೇಳಿದ್ದೀರಾ? ಅಂತದ್ದೊಂದು ಕಿಲಾಡಿ ಜೋಡಿಯ ಕಥೆ ಇಲ್ಲಿದೆ.

ಹುಡುಗನ ಜೇಬಲ್ಲಿ ಕಳ್ಳರಿಗೆ ಸಿಕ್ಕಿದ್ದು ಬರೀ ₹20

ಇಂಥದ್ದೊಂದು ವಿಚಿತ್ರ ಕಳ್ಳತನದ ಘಟನೆ ದೆಹಲಿಯ ಶಹದಾರಾ ನಗರದಲ್ಲಿ ನಡೆದಿದೆ. ಇಬ್ಬರು ಕಳ್ಳರು ಬರೀ ಕಳ್ಳರಲ್ಲ, ಫುಲ್ ಟೈಟ್ ಆಗಿರೋ ಕುಡುಕ ಕಳ್ಳರು ದೆಹಲಿಯ ಬೀದಿಯಲ್ಲಿ ಕಳ್ಳತನಕ್ಕೆ ಮುಂದಾಗಿದ್ರು. ಸ್ಕೂಟಿಯಲ್ಲಿ ಬಂದು ರಸ್ತೆಯಲ್ಲಿ ಹೋಗ್ತಿದ್ದ ಜೋಡಿಯನ್ನ ಅಡ್ಡಗಿಟ್ಟಿದ್ರು. ಬಳಿಕ ಇಬ್ಬರ ಬಳಿ ಏನೇನಿದೆ ಅಂತಾ ಹುಡುಕಾಡಿದ್ದಾರೆ. ಆಗ ಜಸ್ಟ್ 20 ರೂಪಾಯಿ ಸಿಕ್ಕಿದೆ. ಕಳ್ಳರಿಗೆ ಏನ್ ಮಾಡಬೇಕು ಗೊತ್ತಿಲ್ಲ. ತಮ್ಮ ಜೇಬಿಂದ 100 ರೂಪಾಯಿ ತೆಗೆದು, ಆ ಜೋಡಿಗೆ ಕೊಟ್ಟು ಅಲ್ಲಿಂದ ಸ್ಕೂಟಿಯಲ್ಲಿ ಹೊರಟೇ ಬಿಡ್ತಾರೆ. ಈ ಘಟನೆ ನಡೆದಿರೋದು ಜೂನ್ 21ರ ಮಧ್ಯರಾತ್ರಿ.

ಈ ವಿಚಾರ ಏನಂದರೆ ಆ ಜೋಡಿ ಬಳಿ ಹಣ, ಒಡವೆ ಕದಿಯದೇ, ತಾವೇ 100 ರೂಪಾಯಿ ಕೊಟ್ಟೋದ್ರೂ ಈ ಕಳ್ಳರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 100 ರೂಪಾಯಿ ಆಸಾಮಿಗಳಲ್ಲಿ ಒಬ್ಬನ ಹೆಸರು ಹರ್ಷ ರಜಪೂತ್. ಇನ್ನೊಬ್ಬ ದೇವ್ ವರ್ಮಾ. ಇವರಿಬ್ಬರು ಪೊಲೀಸರ ಕೈಗೆ ಲಾಕ್ ಆಗಿದ್ದು ಹೇಗೆ ಅನ್ನೋದೇ ಇಂಟರೆಸ್ಟಿಂಗ್ ಕಹಾನಿ.

ಈ ಕಳ್ಳರ ಬಗ್ಗೆ ಪೊಲೀಸರಿಗೆ ಬಂದಿದ್ವು 3 ದೂರು

ಜೂನ್ 21 ರಂದು ದೆಹಲಿಯ ಪೊಲೀಸ್ ಠಾಣೆಗೆ ಸರಣಿ ಕಳ್ಳತನದ ಫೋನ್ ಬಂದಿತ್ತು. ಒಂದಲ್ಲ ಎರಡಲ್ಲ ಒಟ್ಟು 3 ಬ್ಯಾಕ್ ಟು ಬ್ಯಾಕ್ ಕಾಲ್ ಬಂದಿತ್ತು. ಮೊದಲ ಕರೆ ದಂಪತಿ ಮಾಡಿದ್ದು, ಯಾರೋ ಇಬ್ಬರು ಬಂದು ಚಿನ್ನಾಭರಣ ದೋಚೋಕೆ ಯತ್ನಿಸಿದ್ರು ಅಂತಾ ಕಂಪ್ಲೆಂಟ್ ಕೊಡ್ತಾರೆ. ಸೆಕೆಂಡ್ ಕಾಲ್​ನಲ್ಲಿ ಪಿಸ್ತೂಲ್ ತೋರಿಸಿ, ದರೋಡೆಗೆ ಯತ್ನಿಸಿರೋ ಬಗ್ಗೆ ದೂರು ನೀಡಲಾಗಿದೆ. 3ನೇ ಕರೆಯಲ್ಲೂ ಕಳ್ಳತನಕ್ಕೆ ಯತ್ನಿಸಿರೋ ಬಗ್ಗೆ ಕಂಪ್ಲೆಂಟ್ ಬರುತ್ತೆ. ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಕಳ್ಳತನದ ಕಂಪ್ಲೆಂಟ್ ಬರ್ತಿದ್ದಂತೆ ಅಲರ್ಟ್ ಆಗೋ ಪೊಲೀಸರು ಕಾರ್ಯಾಚರಣೆ ಶುರು ಮಾಡ್ತಾರೆ.

ಸುಮಾರು 200 ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲಿಸಿದ ಪೊಲೀಸರು, ಆರೋಪಿಗಳ ಚಲನವಲನ ಗಮನಿಸ್ತಾರೆ. ಕೊನೆಗೂ ಇಬ್ಬರೂ ಆರೋಪಿಗಳನ್ನ ಹಿಡಿದೇ ಬಿಡ್ತಾರೆ. ಇಬ್ಬರು ಖದೀಮರಿಂದ ಒಂದು ಪಿಸ್ತೂಲ್, ಸ್ಕೂಟರ್, ಮೊಬೈಲ್ ಹಾಗೂ ಒಂದಷ್ಟು ನಗದನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕಿಲಾಡಿ ಜೋಡಿಯನ್ನ ಪೊಲೀಸರು ಹಿಡಿಯಲು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಓರ್ವ ಮೊಬೈಲ್ ಶಾಪ್ ಇಟ್ಕೊಂಡಿದ್ದು, ಯೂಟ್ಯೂಬ್ ನೋಡಿ ನೀರಜ್ ಬವಾನಿಯಾ ಗ್ಯಾಂಗ್​ನಿಂದ ಇನ್​ಸ್ಟೈರ್​ ಆಗಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ರು ಅನ್ನೋದು ಬಯಲಾಗಿದೆ. ವಿಚಾರಣೆ ವೇಳೆ ಈ ಇಬ್ಬರು ಇನ್ನಷ್ಟು ಕ್ರಿಮಿನಲ್ ಕೆಲಸಗಳು ಬಯಲಾಗಿದ್ದು, ಪೊಲೀಸರು ಆ ನಿಟ್ಟಿನಲ್ಲೂ ತನಿಖೆ ಶುರು ಮಾಡಿದ್ದಾರೆ. ಎಣ್ಣೆ ಹಾಕ್ಕೊಂಡು ಕಳ್ಳತನಕ್ಕೆ ಹೋಗಿ ಇವ್ರಿಬ್ಬರು ಸಿಕ್ಕಾಕೊಂಡಿದ್ದಾರೆ. ಕಿಕ್ ಕೊಡೋ ಮದ್ಯ ಕಂಬಿ ಮಧ್ಯ ಕೂರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯರಾತ್ರಿಲಿ.. ಹೈವೇ ರಸ್ತೇಲಿ..! ಪ್ರೇಮಿಗಳ ರಾಬರಿ ಮಾಡಲು ಬಂದು ಖರ್ಚಿಗೆ ಇಟ್ಕೊಳ್ಳಿ ಅಂತಾ ದುಡ್ಡು ಕೊಟ್ಟು ಹೋದ ಕಳ್ಳರು..!

https://newsfirstlive.com/wp-content/uploads/2023/06/DELHI_LOVERS_2-300x169-1.jpg

Load More