newsfirstkannada.com

ಮಹುವಾ ಮೊಯಿತ್ರಾ ವಿರುದ್ಧ FIR.. ಈ ಸಂಸದೆ ಮಾಡಿದ ತಪ್ಪು ಏನು ಗೊತ್ತಾ?

Share :

Published July 8, 2024 at 12:41pm

    ಪೊಲೀಸರೇ ಬನ್ನಿ ಅರೆಸ್ಟ್ ಮಾಡಿ ಎಂದು ಚಾಲೆಂಜ್ ಹಾಕಿದ ಸಂಸದೆ

    ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರ ಅಡಿ ಪ್ರಕರಣ ದಾಖಲು

    ವಿವಾದಿತ ಜನನಾಯಕಿ ಈ ಬಾರಿ ಮಾಡಿದ ತಪ್ಪು ಏನು..?

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ದೆಹಲಿ ಪೊಲೀಸರು ಹೊಸ ಕ್ರಿಮಿನಲ್ ಕೋಡ್, ಭಾರತೀಯ ನ್ಯಾಯ ಸಂಹಿತಾ (BNS) ಅಡಿ ಎಫ್​ಐಆರ್ ದಾಖಲು ಮಾಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಬಗ್ಗೆ ಅವಹೇಳನಾಕಾರಿ ಫೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸುಮಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಜುಲೈ 4 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ರೇಖಾ ಶರ್ಮಾ ಬರುತ್ತಿರುವ ವಿಡಿಯೋ ಫೋಸ್ಟ್ ಮಾಡಿದ್ದರು. ತನ್ನ ಬಾಸ್​ನ ಪೈಜಾಮಾ ಹಿಡಿದುಕೊಳ್ಳುವಲ್ಲಿ ನಿರತಳಾಗಿದ್ದಾರೆ ಎಂದು ಪೋಸ್ಟ್​ಗೆ ಅಡಿಲೈನ್​ ಬರೆದಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಫೋಸ್ಟ್​ ಡಿಲೀಟ್ ಮಾಡಿದ್ದರು. ಈ ಸಂಬಂಧ ಎಂಪಿ ಮೊಯಿತ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79ರ ಅಡಿ ದೆಹಲಿ ಪೊಲೀಸರು ಕೇಸ್​ ದಾಖಲಿಸಿದ್ದಾರೆ. ಇದು ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದ ಕೆಲಸ, ಸನ್ನೆ ಅಥವಾ ಕೃತ್ಯಕ್ಕೆ ಸಂಬಂಧಿಸಿದ್ದು ಆಗಿದೆ.

ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

ಎನ್‌ಸಿಡಬ್ಲ್ಯು ತನ್ನ ದೂರಿನಲ್ಲಿ, ಮೊಯಿತ್ರಾ ಅವರು ಮಾಡಿದ್ದು ಅಸಭ್ಯ ಟೀಕೆಗಳು ಅತ್ಯಂತ ಅತಿರೇಕವಾಗಿವೆ. ಘನತೆಯಿಂದ ಬದುಕುವ ಮಹಿಳೆಯರ ಹಕ್ಕ ಅನ್ನು ಉಲ್ಲಂಘನೆ ಆಗಿದೆ ಎಂದು ಪೋಸ್ಟ್ ಮಾಡಿದೆ. ಸದ್ಯ ಈ ಪೋಸ್ಟ್​ಗೆ ಎಕ್ಸ್​​ನಲ್ಲೇ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸುಮಟೋ ಕೇಸ್​ ಆಧಾರದ ಮೇಲೆ ನನ್ನನ್ನು ಅರೆಸ್ಟ್ ಮಾಡಲು ದೆಹಲಿ ಪೊಲೀಸರೇ ಬನ್ನಿ. ತಕ್ಷಣ ಕ್ರಮ ತೆಗೆದುಕೊಳ್ಳಲು ಮುಂದಿನ 3 ದಿನಗಳಲ್ಲಿ ನನ್ನನ್ನು ಅರೆಸ್ಟ್ ಮಾಡಲು ಆದಷ್ಟು ಬೇಗ ನಾಡಿಯಾಗೆ ಬನ್ನಿ. ನಾನೇ ಸ್ವತಃ ಕೊಡೆ ಹಿಡಿಯಬಲ್ಲೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹುವಾ ಮೊಯಿತ್ರಾ ವಿರುದ್ಧ FIR.. ಈ ಸಂಸದೆ ಮಾಡಿದ ತಪ್ಪು ಏನು ಗೊತ್ತಾ?

https://newsfirstlive.com/wp-content/uploads/2024/07/Mahua_Moitra_1.jpg

Load More