newsfirstkannada.com

19 ವರ್ಷದ ಯುವಕನಿಂದ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ?; ದೆಹಲಿ ಪೊಲೀಸರಿಂದ ವಿಚಾರಣೆ

Share :

15-11-2023

    ಬೇರೆಯವರ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖ ಹೊಂದಿಸಿದ ವಿಡಿಯೋ

    ರಶ್ಮಿಕಾ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ಎಫ್‌ಐಆರ್ ದಾಖಲು

    ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಮೊದಲಿಗೆ ಡೀಪ್ ಫೇಕ್ ವಿಡಿಯೋ ಅಪ್ಲೋಡ್

ನವದೆಹಲಿ: ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಪ್ರಕರಣದ ವಿಚಾರಣೆಯಲ್ಲಿ ದೆಹಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಬೇರೆ ಯುವತಿಯ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಅಂಟಿಸಿ ವಿಡಿಯೋ ವೈರಲ್ ಮಾಡಲಾಗಿತ್ತು. ಈ ವಿಡಿಯೋವನ್ನ ಮೊದಲು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದು ಯಾರು ಅನ್ನೋದು ಈಗ ಪತ್ತೆಯಾಗಿದೆ.

ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ. ಈ ಯುವಕನ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಮೊದಲಿಗೆ ಡೀಪ್ ಫೇಕ್ ವಿಡಿಯೋ ಅಪ್ಲೋಡ್‌ ಆಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಪೊಲೀಸರು ನೊಟೀಸ್ ನೀಡಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ಝರಾ ಪಟೇಲ್ ಅನ್ನೋರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖ ಹೋಲುವಂತ ಡೀಪ್ ಫೇಕ್ ವಿಡಿಯೋ ಸೃಷ್ಟಿಸಲಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಬಾಲಿವುಡ್‌ನ ಹಲವು ನಟ, ನಟಿಯರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಕೂಡ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಡೀಪ್ ಫೇಕ್ ವಿಡಿಯೋ ಅವಾಂತರ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಮೇಲೆ ನವೆಂಬರ್ 10 ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಬಿಹಾರದ ಯುವಕನಿಗೆ ನೊಟೀಸ್ ನೀಡಲಾಗಿದೆ. ಸದ್ಯ 19 ವರ್ಷದ ಯುವಕ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ವಿಡಿಯೋ ಡೌನ್ ಲೋಡ್ ಮಾಡಿಕೊಂಡಿದ್ದಾಗಿ ಹೇಳಿದ್ದಾನೆ. ಆದರೆ ಪೊಲೀಸರ ವಿಚಾರಣೆ ಬಳಿಕ ಅಸಲಿ ವಿಷಯ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

19 ವರ್ಷದ ಯುವಕನಿಂದ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ?; ದೆಹಲಿ ಪೊಲೀಸರಿಂದ ವಿಚಾರಣೆ

https://newsfirstlive.com/wp-content/uploads/2023/11/RASHMIKA_MANDANNA-3.jpg

Load More