ರಾಷ್ಟ್ರ ರಾಜಧಾನಿಯಲ್ಲಿ ಇವತ್ತು ಕೂಡ ಭಾರಿ ಮಳೆ ಸಾಧ್ಯತೆ
ಉತ್ತರ ರಾಜ್ಯಗಳಲ್ಲಿ ಮಳೆಯಿಂದ ಜನ-ಜೀವನ ಅಸ್ತವ್ಯಸ್ತ
ಸುಪ್ರೀಂ ಕೋರ್ಟ್ ಅಂಗಳಕ್ಕೂ ನುಗ್ಗಿದ ಯಮುನಾ ನದಿ
ಉತ್ತರ ಭಾರತದಲ್ಲಿ ಜಲರಾಯನ ಅಬ್ಬರ ಜೋರಾಗಿದೆ. ಇದುವರೆಗೂ ಜಲರಕ್ಕಸ ಸುಮಾರು 150ಕ್ಕೂ ಹೆಚ್ಚಿನ ಜನರ ಜೀವವನ್ನು ಆಪೋಷನ ತೆಗೆದುಕೊಂಡಿದ್ದಾನೆ. ಇದರಲ್ಲಿ ಯಮುನೆಯ ಆಕ್ರೋಶಕ್ಕಂತೂ ದೆಹಲಿ ತತ್ತರಿಸಿ ಹೋಗಿದೆ. ಕೇವಲ ದೆಹಲಿ ಮಾತ್ರವಲ್ಲ ಉತ್ತರ ರಾಜ್ಯಗಳ ಸ್ಥಿತಿ ಅಯೋಮಯವಾಗಿದೆ.
ದೆಹಲಿಯಲ್ಲಿ ‘ಯೆಲ್ಲೂ’ ಆಲರ್ಟ್ ಘೋಷಿಸಿದ ಐಎಂಡಿ
ದೆಹಲಿಯಲ್ಲಿ ಮಳೆ ನಿಂತ್ರೂ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸದ್ಯ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇವತ್ತೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಯೆಲ್ಲೂ ಅಲರ್ಟ್ ಘೋಷಿಸಿದೆ. ನಿನ್ನೆ ದೆಹಲಿಯ ಲಕ್ಷ್ಮೀನಗರ, ಅಯನಗರ, ಲೊದಿ ರಸ್ತೆ, ಮುಂಗೇಶ್ಪರ್ ಮತ್ತಿತರ ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ರೆ ಲುಟಿಯನ್ಸ್ ಸೇರಿದಂತೆ ಮತ್ತಿತರ ಕಡೆ ಮಳೆ ಅಬ್ಬರ ಜೋರಾಗಿತ್ತು.
ದೆಹಲಿಯಲ್ಲಿ ಪ್ರವಾಹ.. 25,478 ಮಂದಿ ಸ್ಥಳಾಂತರ
ದೆಹಲಿಯಲ್ಲಿ ಯಮುನಾ ನೀರಿನ ಮಟ್ಟದಲ್ಲಿ ನಿರಂತರ ಹೆಚ್ಚಾಗುತ್ತಿದೆ. ನಗರದ ಹಲವು ಪ್ರದೇಶಗಳಲ್ಲಿ ನೀರೋ ನೀರು ಎನ್ನುವಂತಾಗಿದ್ದು ಕೆಲವು ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರು ನುಗ್ಗುತ್ತಿರುವುದು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಇಂತಹ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ ಒಟ್ಟು 25,478 ಸಂತ್ರಸ್ಥರನ್ನು ಸ್ಥಳಾಂತರಿಸಿದ್ದು ಅವರಿಗೆ ಟೆಂಟ್, ಶೆಲ್ಟರ್‌ಗಳಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ನ 16 ತಂಡಗಳನ್ನು ಸರ್ಕಾರ ನಿಯೋಜನೆ ಮಾಡಿದೆ.
ಎನ್‌ಜಿಒ ಸಿಬ್ಬಂದಿಯಿಂದ ಬೀದಿನಾಯಿಗಳ ರಕ್ಷಣೆ
ದೆಹಲಿ ಪ್ರವಾಹ ಪೀಡಿತ ಪ್ರದೇಶವಾದ ಕೆಂಪುಕೋಟೆ ಮತ್ತು ಚಂದಗಿ ರಾಮ್ ಅಖಾಡಾದ ಬಳಿ ಸಿಲುಕಿದ್ದ ಬೀದಿನಾಯಿಗಳನ್ನು ಎನ್‌ಜಿಒ ಸಿಬ್ಬಂದಿ ರಕ್ಷಿಣೆ ಮಾಡಿದ್ದಾರೆ. ಕಾಶ್ಮೀರ್ ಗೇಟ್ ಪ್ರದೇಶದಲ್ಲಿ ಪ್ರವಾಹ ಮುಂದುವರಿದಿದೆ. ಚರಂಡಿಯಿಂದ ಉಕ್ಕಿ ಹರಿಯುತ್ತಿರುವ ಪ್ರವಾಹ ಸುಪ್ರೀಂ ಕೋರ್ಟ್‌ನ ಬಾಗಿಲು ತಲುಪಿ ಎನ್ನಲಾಗಿದೆ. ನೀರು ಇನ್ನು ಮುಂದಕ್ಕೆ ಹೋಗದಂತೆ ರಾತ್ರಿಯಿಂದ ಕೆಲಸ ಮಾಡಲಾಗುತ್ತಿದೆ.
ನಗರದ ಮಹಾತ್ಮ ಗಾಂಧಿ ಅವರ ಸಮಾಧಿ ರಾಜ್‌ಘಾಟ್‌ನ ಮುಖ್ಯದ್ವಾರಕ್ಕೆ ಯಮುನಾ ನದಿ ನೀರು ಬಂದಿದೆ. ದೆಹಲಿಯ ಹಲವು ಪ್ರದೇಶಗಳಿಗೆ ಪ್ರವಾಹದ ನೀರು ವೇಗವಾಗಿ ನುಗ್ಗುತ್ತಿದೆ. ಕೆಂಪು ಕೋಟೆಯ ಹಿಂಭಾಗದ ಸಲೀಂಘರ್ ಅಂಡರ್‌ಪಾಸ್‌ನಲ್ಲಿ ಪ್ರವಾಹ ಮಟ್ಟದಲ್ಲಿ ನೀರು ಹರಿಯುತ್ತಿದೆ. ಯಮುನಾ ಪ್ರವಾಹದ ನೀರು ITO ಕೆಂಪು ದೀಪವನ್ನು ತಲುಪಿದೆ. ಕಚೇರಿ, ಮಾರುಕಟ್ಟೆ, ರೈಲು ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.
ಮಳೆ ನೀರಿನಲ್ಲಿ ಮುಳುಗಿ ಮೂರು ಮಕ್ಕಳು ಸಾವು
ದೆಹಲಿಯ ಈಶಾನ್ಯ ಜಿಲ್ಲೆಯ ಮುಕುಂದಪುರ ಪ್ರದೇಶದಲ್ಲಿ ಮಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಮಕ್ಕಳು ನೀರು ಪಾಲಾಗಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಮಳೆಯ ನಂತರ ಶೇಖರಣೆಯಾದ ನೀರಿನಲ್ಲಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನು ದೆಹಲಿಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿ, ಪರಿಶೀಲನೆ ಮಾಡಿದರು. ಸಿಎಂ ಅರವಿಂದ್ ಕೇಜ್ರಿವಾಲ್ಗೆ ಹಲವು ಮಂತ್ರಿಗಳು ಸಾಥ್ ನೀಡಿದ್ದು, ಲೆಫ್ಟಿನೆಂಟ್ ಜನರಲ್ ಸಹ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದರು.
ಉತ್ತರ ಭಾರತದಲ್ಲಿ ಮಳೆ.. 150 ಕ್ಕೂ ಹೆಚ್ಚು ಮಂದಿ ಸಾವು
ಉತ್ತರ ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಮಳೆಯಿಂದ ಮತ್ತೆ 34 ಮಂದಿಯನ್ನು ಬಲಿ ಪಡೆದಿದೆ ಎನ್ನಲಾಗಿದೆ. 6 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 150ರ ಗಡಿ ದಾಟಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಾಗಿದೆ. ಹಿಮಾಚಲ ಪ್ರದೇಶ 91, ಉತ್ತರ ಪ್ರದೇಶ 18, ಹರಿಯಾಣ 16, ಪಂಜಾಬ್ನಲ್ಲಿ 11 ಮತ್ತು ಉತ್ತರಾಖಂಡದಲ್ಲಿ 16 ಮಂದಿ ಸೇರಿ ಒಟ್ಟು 150ಕ್ಕೂ ಹೆಚ್ಚು ಮಂದಿ ಮಳೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ತತ್ತರಿಸಿದ ಹಿಮಾಚಲದಲ್ಲಿ ಮಹಿಳೆಯರ ಸಹಾಯ ಅಸ್ತ
ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ ಸುರಿದು, ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿತ್ತು. ಅನೇಕ ಜನರು ಅದರಲ್ಲಿ ಸಿಲುಕಿಕೊಂಡು ಪರದಾಡಿದ್ರು. ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವತಿಯರು ಕೂಡ ರಕ್ಷಣೆ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಇತ್ತ ಬಿಹಾರ ರಾಜ್ಯದಲ್ಲೀ ಭಾರೀ ಮಳೆಯಾಗುತ್ತಿದ್ದು, ಪಾಟ್ನಾ ನಗರದಲ್ಲಿರುವ ವಿಧಾನಸಭೆಯ ಕೋಟೆಯ ಆವರಣ ಸಂಪೂರ್ಣ ಜಲಾವೃತವಾಗಿದೆ. ಪ್ರವಾಹದಿಂದಾಗಿ ಉತ್ತರದ ರಾಜ್ಯಗಳ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ನದಿ ಪಾತ್ರದಲ್ಲಿ ವಾಸಿಸುವ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ