newsfirstkannada.com

ಮೇಘದೂತನ ಭಾರೀ ಅವಾಂತರ.. ಕೆರೆಗಳಂತಾದ ರಸ್ತೆಗಳು

Share :

09-07-2023

    ನದಿಯಂತೆ ರಸ್ತೆಗಳಲ್ಲಿ ಹರಿಯುತ್ತಿರೋ ಮಳೆ ನೀರು

    ಕೆರೆಯಂತಾಗಿರೋ ರಸ್ತೆಗಳಲ್ಲಿ ವಾಹನಗಳ ಪರದಾಟ

    ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರ ರಂಪಾಟ

ದೇಶದಲ್ಲಿ ಹಲವು ರಾಜ್ಯಗಳಲ್ಲಿ ಮಳೆರಾಯನ ಮೊರೆತ ಜೋರಾಗಿದೆ. ದಿನದ 24 ಗಂಟೆಯೂ ಧಾರಾಕಾರವಾಗಿ ವರುಣ ಸುರಿಯುತ್ತಿದ್ದಾನೆ. ಅದರಲ್ಲೂ ಉತ್ತರ ಭಾರತದಲ್ಲಿ ಮೇಘರಾಜ ಬಿಟ್ಟು ಬಿಡದೇ ಕಾಡುತ್ತಿದ್ದಾನೆ. ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ಮೇಘಧೂತ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ. ವರುಣನ ಅಬ್ಬರಕ್ಕೆ ದೆಹಲಿಯ ರಸ್ತೆಗಳೆಲ್ಲಾ ನದಿಗಳಂತಾಗಿಬಿಟ್ಟಿವೆ.

ಮಹಾಮಳೆಯ ಅವಾಂತರ.. ರಸ್ತೆಗಳೆಲ್ಲಾ ಜಲಾವೃತ

ದೆಹಲಿ ಮತ್ತು ಎನ್‌ಸಿಆರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಮಳೆರಾಯ ಭಾರೀ ಆರ್ಭಟಿಸಿದ್ದಾನೆ. ವಾಡಿಕೆಗಿಂತ ಅಧಿಕ ಮಳೆ ಸುರಿದಿದ್ದು ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ದೆಹಲಿಯ ಬಹುತೇಕ ರಸ್ತೆಗಳು ಕೆರೆಗಳಾಗಿ ಬದಲಾಗಿವೆ. ಹರಿಯೋ ನೀರಿನಲ್ಲಿ ಸಿಲುಕಿ ಜನಜೀವನ ಅಸ್ತವ್ಯಸ್ತವಾಗಿದೆ. ಹರಿಯೋ ನೀರಿನಲ್ಲೇ ಬಸ್‌ಗಳು, ವಾಹನಗಳು ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿವೆ. ನಗರದ ಛೋಟಾ ಹರಿದ್ವಾರದಲ್ಲಿ ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಭೋರ್ಗರೆದು ಹರಿದಿದೆ.

ನಗರದ ಶೋರೂಮ್‌ಗಳಿಗೆ ನುಗ್ಗಿದ ಮಳೆನೀರು

ಭಾರೀ ಮಳೆಯಿಂದ ದೆಹಲಿಯ ಹಲವು ಅಂಗಡಿಗಳಿಗೆ ನೀರು ನುಗ್ಗಿತ್ತು. ಅದರಲ್ಲೂ ಬಟ್ಟೆ ಅಂಗಡಿಗಲು ಸೇರಿದಂತೆ ಅನೇಕ ಶಾಪ್‌ಗಳಿಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು.

ದೆಹಲಿಯ ಲೋಧಿ ಕಾಲೋನಿ ಮನೆಗಳು ಜಲಾವೃತ

ದೆಹಲಿಯ ಪ್ರಮುಖ ನಗರಗಳಲ್ಲಿ ಒಂದಾದ ಲೋಧಿ ಕಾಲೋನಿಯ ಮನೆಗಳು ಜಲಾವೃತಗೊಂಡಿದ್ವು. ಇಡೀ ಏರಿಯಾದ ರಸ್ತೆಗಳು ಜಲಮಯವಾಗಿದ್ವು. ಹರಿಯೋ ನೀರಿನಲ್ಲೇ ಜನರು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಮಳೆಯಲ್ಲೇ ಮಕ್ಕಳ ಆಟ.. ಹಾಸ್ಟೆಲ್ ಹುಡುಗರ ತಕಧಿಮಿತ

ಮಳೆಯಿಂದಾಗಿ ಕೆರೆಯಂತಾಗಿರೋ ರಸ್ತೆಗಳಲ್ಲಿ ಮಕ್ಕಳು ಖುಷಿಯಿಂದ ಆಟ ಆಡಿದ ಸನ್ನಿವೇಶ ನಡೀತು.. ಅಲ್ಲದೇ ದೆಹಲಿಯ ಹಾಸ್ಟೆಲ್‌ವೊಂದರ ಮುಂದೆ ವಿದ್ಯಾರ್ಥಿಗಳು ಡ್ಯಾನ್ಸ್‌ ಮಾಡಿದ್ದಾರೆ. ಹರಿಯೋ ನೀರಿನಲ್ಲಿ ಕುಣಿಯುತ್ತಾ ಎಂಜಾಯ್ ಮಾಡಿದ್ದಾರೆ.

ರಸ್ತೆಯಲ್ಲಿ ತುಂಬಿದ ನೀರು.. ಬೋಟ್‌ನಲ್ಲಿ ವ್ಯಕ್ತಿಯ ಆಟ

ಮಳೆ ಬಂದು ಇಡೀ ನಗರವೇ ಜಲಾವೃತವಾಗಿದೆ. ಇದ್ರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಬೋಟ್‌ ತಂದು ಅದರಲ್ಲಿ ಕೂತು ಆಟವಾಡಿದ ದೃಶ್ಯ ನಗರದಲ್ಲಿ ಕಂಡು ಬಂದಿದೆ. ಚಿಕ್ಕ ಬೋಟ್‌ನಲ್ಲಿ ಕೂತು ರಸ್ತೆಯಲ್ಲಿ ವ್ಯಕ್ತಿ ಸಂಚಾರ ಮಾಡ್ತಿದ್ರೆ. ಆತನ ಹಿಂದೆ ಮಕ್ಕಳು ಎಂಜಾಯ್ ಮಾಡುತ್ತಾ ಕುಣಿದಾಡಿವೆ.

ನೀರಲ್ಲಿ ಮುಳುಗಿದ ಬೈಕ್‌ಗಾಗಿ ಸವಾರನ ಗೋಳಾಟ

ಮಳೆಯ ಮಧ್ಯೆಯೂ ಹೇಗೋ ಮನೆ ಸೇರೋಣ ಅಂತ ಹೊರಟಿದ್ದ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿದ್ದ.. ಹೀಗೆ ರಸ್ತೆಯಲ್ಲಿ ಬರುತ್ತಿರುವಾಗ ದಿಢೀರ್ ಹೆಚ್ಚಾದ ನೀರಿನಲ್ಲಿ ಬೈಕ್ ಮುಳುಗಿ ಕಂಗಾಲಾಗಿದ್ದ.. ನೀರಲ್ಲಿ ಮುಳುಗಿ ಮುಳುಗಿ ಬೈಕ್‌ನ ಎತ್ತರ ಹರಸಾಹಸ ಪಟ್ಟಿದ್ದಾನೆ.

ಭಾರೀ ಮಳೆಯ ಎಫೆಕ್ಟ್‌.. ದೆಹಲಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌

ಒಂದ್ಕಡೆ ಮಳೆರಾಯ ಅಬ್ಬರಿಸ್ತಿದ್ರೆ, ಮತ್ತೊಂದೆಡೆ ವಾಹನಗಳು ಮುಂದೆ ಸಾಗದೇ ಫುಲ್ ಟ್ರಾಪಿಕ್ ಜಾಮ್ ಉಂಟಾಗಿತ್ತು. ದೆಹಲಿಯ ಬಹುತೇಕ ರಸ್ತೆಗಳಲ್ಲಿ ವಾಹನಗಳು ಕಿಕ್ಕಿರಿದು ನಿಂತಿದ್ವು.. ವಾಹನಗಳ ರೆಡ್‌ಲೈಟ್‌ಗಳಿಂದ ರಸ್ತೆಯೇ ಕೆಂಪು ಬಣ್ಣಕ್ಕೆ ತಿರುಗಿತ್ತು. ಭಾರೀ ಮಳೆಯಿಂದ ಬೈಕ್ ಸವಾರರು ಸಂಕಷ್ಟಕ್ಕೆ ಸಿಲುಕಿದ್ರು.. ಮಳೆಯಲ್ಲೇ ಬೈಕ್ ಓಡಿಸಿಕೊಂಡು ಹೋಗುವ ಪ್ರಮೇಯ ಎದುರಾಗಿತ್ತು.

ಇನ್ನೂ ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ಮಾರ್ಚ್‌ನಲ್ಲಿ ಸಾಮಾನ್ಯ ಮಳೆಯ ಪ್ರಮಾಣ 17.4 ಮಿಮೀ ಇದ್ದು, ಈ ಬಾರಿ 53.2 ಮಿಮೀ ಮಳೆಯಾಗಿದೆ. ಏಪ್ರಿಲ್‌ನಲ್ಲಿ ಸರಾಸರಿ 16.3 ಮಿಮೀ ಇದ್ದು 20.1 ಮಿಮೀ, ಮೇನಲ್ಲಿ ಸಾಮಾನ್ಯ 30.7 ಮಿಮೀ ಇದ್ದು 111 ಮಿಮೀ ಮಳೆಯಾಗಿದೆ. ಜೂನ್‌ನಲ್ಲಿ 74.1 ಮಿಮೀ ಬದಲಿಗೆ 101.7 ಮಿಮೀ ಮಳೆಯಾಗಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.

ಇನ್ನೂ ದೆಹಲಿಯಲ್ಲಿ ಇವತ್ತೂ ಕೂಡಾ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಿದೆ. ಒಟ್ಟಾರೆ, ಉತ್ತರ ಭಾರತದಲ್ಲಿ ಮಳೆರಾಯನ ಆಟಾಟೋಪ ಮಿತಿಮೀರಿದೆ. ಧೋ ಎಂದು ಸುರಿಯುತ್ತಾ ಜನರನ್ನ ಗೋಳಾಡುವಂತೆ ಮಾಡಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಘದೂತನ ಭಾರೀ ಅವಾಂತರ.. ಕೆರೆಗಳಂತಾದ ರಸ್ತೆಗಳು

https://newsfirstlive.com/wp-content/uploads/2023/07/Delhi-rain.jpg

Load More