newsfirstkannada.com

ಕುಡಿಸಿದವನಿಗೆ ಪಂಗನಾಮ ಹಾಕಿ ಎಸ್ಕೇಪ್​​ ಆದ ಖತರ್ನಾಕ್​​ ಕಳ್ಳ.. ಆಮೇಲೇನಾಯ್ತು..?

Share :

12-06-2023

    2 ಸಾವಿರದ ವೈನ್​ ಬಾಟಲಿಗೆ 20 ಸಾವಿರ ಕೊಟ್ಟ ಕುಡುಕ

    ಅಪರಿಚಿತನಿಂದ ಈ ಆಸಾಮಿ ಏನೇನ್ ಕಳ್ಕೊಂಡ ಗೊತ್ತಾ?

    ಮದ್ಯದ ಅಮಲಿನಲ್ಲಿ ಕಾರಲ್ಲಿದ್ದ ಮಾಲೀಕನಿಗೆ ದೋಖಾ

ನವದೆಹಲಿ: ಮದ್ಯಪಾನ ಮಾಡಿ ಕುಡುಕರು ಏನೇನ್‌ ಕಳೆದುಕೊಳ್ಳುತ್ತಾರೆ ಎಂದು ಊಹಿಸುವುದೇ ಕಷ್ಟ. ಇಲ್ಲೊಬ್ಬ ಮದ್ಯಪ್ರಿಯ ತನ್ನ ಜೊತೆಗೆ ಕುಡಿಯಲು ಕಂಪನಿ ಕೊಟ್ಟ ಅಪರಿಚಿತನಿಂದ ಮೋಸ ಹೋಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಅಮಿತ್​ ಪ್ರಕಾಶ್ ಎನ್ನುವ ವ್ಯಕ್ತಿ ಅಪರಿಚಿತನಿಂದ ಮೋಸ ಹೋದವರು. ಈತನು ದೆಹಲಿಯ ಗ್ರೇಟರ್​ ಕೈಲಾಶ್ ಬಡಾವಣೆಯ ನಿವಾಸಿಯಾಗಿದ್ದು ಗುರುಗ್ರಾಮ ಗಾಲ್ಫ್ ಕೋರ್ಸ್ ರಸ್ತೆಯಲ್ಲಿನ ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದಾನೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದನು. ಈ ವೇಳೆ ಪ್ರಕಾಶ್​ ಕಂಠಪೂರ್ತಿ ಕುಡಿದಿದ್ದನು. ಹೀಗಿದ್ದರೂ ಇನ್ನು ಮದ್ಯಪಾನ ಸೇವಿಸಲೆಂದು ವೈನ್​​ ಶಾಪ್​ಗೆ ಹೋಗಿದ್ದಾನೆ. ಶಾಪ್​ನಲ್ಲಿ 2,000 ರೂ. ವೈನ್​ ಬಾಟಲ್​ಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕ್ಯಾಶಿಯರ್​ಗೆ ಕೊಟ್ಟಿದ್ದನು. ಆದ್ರೆ, ಕ್ಯಾಶಿಯರ್​ ವೈನ್​ ಬಾಟಲಿಗಿದ್ದ 2000 ಸಾವಿರ ರೂ. ಮಾತ್ರ ತೆಗೆದುಕೊಂಡು ಉಳಿದ 18,000 ರೂ.ಗಳನ್ನು ವಾಪಸ್​ ನೀಡಿದ್ದನು.

ಬಳಿಕ ವೈನ್​ ಶಾಪ್​ನಿಂದ ಹೊರ ಬಂದ ಪ್ರಕಾಶ್​ ತನ್ನ ಕಾರಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದನು. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಅಪರಿಚಿತನು ನಾನು ನಿನ್ನ ಜೊತೆ ಕಂಪನಿ ಕೊಡಲೇ ಎಂದು ಕೇಳಿದ್ದಾನೆ. ಇದಕ್ಕೆ ಪ್ರಕಾಶ್​ ಒಪ್ಪಿಕೊಂಡು ಅಪರಿಚಿತನೊಂದಿಗೆ ಮದ್ಯಪಾನ ಸೇವಿಸಿದ್ದಾನೆ. ಬಳಿಕ ಇಬ್ಬರು ಕಾರಿನಲ್ಲಿ ತೆರಳಿದ್ದಾರೆ. ದೆಹಲಿಯ ಸುಭಾಷ್​ ಚೌಕ್​ ಬಳಿ ಬರುತ್ತಿದ್ದಂತೆ ಪ್ರಕಾಶ್​ನನ್ನು ಕಾರಿನಿಂದ ಇಳಿಸಿ ಅಪರಿಚಿತ ಕಾರು, ಮೊಬೈಲ್, 18,000 ರೂ. ನಗದು ಹಾಗೂ ಲ್ಯಾಪ್​ಟಾಪ್​ ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

ಆದ್ರೆ ಇದನ್ನೆಲ್ಲ ಪ್ರಕಾಶ್ ನಶೆ ಕಡಿಮೆಯಾಗಿ ಬೆಳಗ್ಗೆ ಎದ್ದಾಗ ನೆನಪು ಮಾಡಿಕೊಂಡು ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಹಿಡಿಯಲು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಸಿದವನಿಗೆ ಪಂಗನಾಮ ಹಾಕಿ ಎಸ್ಕೇಪ್​​ ಆದ ಖತರ್ನಾಕ್​​ ಕಳ್ಳ.. ಆಮೇಲೇನಾಯ್ತು..?

https://newsfirstlive.com/wp-content/uploads/2023/06/DELHI_POLICE.jpg

Load More