newsfirstkannada.com

40 ವರ್ಷದಲ್ಲೇ ದಾಖಲೆ ಮಳೆ; ನಾಳೆ ದೆಹಲಿಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ

Share :

Published July 9, 2023 at 8:06pm

Update July 9, 2023 at 8:08pm

    ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಭಾರೀ ಮಳೆ

    ದೆಹಲಿಯಲ್ಲಿ 40 ವರ್ಷದಲ್ಲೇ ದಾಖಲಾದ ಮಳೆ ಇದು!

    ನಾಳೆ ಶಾಲಾ- ಕಾಲೇಜುಗಳಿ ರಜೆ ಘೋಷಣೆ- ಕೇಜ್ರಿವಾಲ್​​

ದೆಹಲಿ: ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ವ್ಯಾಪಕ ಮಳೆಯಾಗುತ್ತಿರೋ ಕಾರಣ ನಾಳೆ ಶಾಲಾ- ಕಾಲೇಜುಗಳಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ರಜೆ ಘೋಷಿಸಿದ್ದಾರೆ.

ಈ ಸಂಬಂಧ ಮಾತಾಡಿದ ಕೇಜ್ರಿವಾಲ್​​, 48 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಇನ್ನೂ ಒಂದು ವಾರಗಳ ಕಾಲ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಶಾಲಾ- ಕಾಲೇಜಗಳಿಗೆ ರಜೆ ಘೋಷಣೆ ಮಾಡಿದ್ದೇವೆ ಎಂದರು.

ಪಾಶ್ಚಿಮಾತ್ಯ ಅಡಚಣೆಯಿಂದ ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ಮಳೆಯ ಅರ್ಭಟ ಜೋರಾಗಿದೆ. ದೆಹಲಿಯಲ್ಲಂತೂ 40 ವರ್ಷಗಳ ಇತಿಹಾಸದಲ್ಲೇ ದಾಖಲೆ ಮಳೆ ಆಗುತ್ತಿದೆ.

ಕಳೆದ 24 ಗಂಟೆಯಿಂದ ದೆಹಲಿಯಲ್ಲಿ 153 ಮಿಮೀ ಮಳೆ ದಾಖಲಾಗಿದೆ. ಇದು 40 ವರ್ಷಗಳಲ್ಲೇ ಅಂದರೆ 1982 ರಿಂದ ಇದುವರೆಗೂ ದಾಖಲಾದ ಅತಿ ಹೆಚ್ಚು ಮಳೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

40 ವರ್ಷದಲ್ಲೇ ದಾಖಲೆ ಮಳೆ; ನಾಳೆ ದೆಹಲಿಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ

https://newsfirstlive.com/wp-content/uploads/2023/07/Delhi-Rains.jpg

Load More