newsfirstkannada.com

ದೆಹಲಿ ಸೇವಾ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ; ನಾಲ್ವರು ಸದಸ್ಯರ ಸಹಿ ಫೋರ್ಜರಿ ಆರೋಪ!

Share :

08-08-2023

    ದೆಹಲಿ ಸೇವಾ ಮಸೂದೆ ರಾಜ್ಯಸಭೆಯಲ್ಲೂ ಪಾಸ್

    ರಾಜ್ಯಸಭೆಯಲ್ಲೂ ದೆಹಲಿ ಸೇವಾ ಮಸೂದೆ ಅಂಗೀಕಾರ

    ತಡರಾತ್ರಿವರೆಗೂ ಸದನದಲ್ಲಿ ಸುದೀರ್ಘ ಚರ್ಚೆ

ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿದ್ದ ಕೇಂದ್ರದ ಸುಗ್ರೀವಾಜ್ಞೆ ಬದಲಾಯಿಸುವ ದೆಹಲಿ ಸೇವಾ ಮಸೂದೆ ಕೊನೆಗೂ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಬೆಂಬಲ ಇಲ್ಲದಿದ್ರೂ ಬಿಲ್ ಪಾಸ್ ಆಗಿದ್ದು ಕುತೂಹಲ ಮೂಡಿಸಿದೆ. ಈ ಮೂಲಕ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ಗೆ ಮೊದಲ ಪರೀಕ್ಷೆಯಲ್ಲೇ ಸೋಲುಂಟಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸುಗಮ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಉದ್ದೇಶದಿಂದ ಮಂಡಿಸಲಾಗಿದ್ದ ದೆಹಲಿ ಸೇವಾ ಮಸೂದೆ ಲೋಕಸಭೆಯಲ್ಲಿ ಕಳೆದ ಗುರುವಾರ ಅಂಗೀಕಾರ ಪಡೆದಿತ್ತು.. ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ಲೋಕಸಭೆಯಲ್ಲೂ ಧ್ವನಿಮತದ ಮೂಲಕ ಅಂಗೀಕರಿಸಲಾಗಿತ್ತು. ಸದ್ಯ ಮೇಲ್ಮನೆಯಲ್ಲೂ ಮಸೂದೆ ಪಾಸ್ ಆಗಿದೆ.

ಗೆದ್ದ ಮೋದಿ ಸರ್ಕಾರ, ‘ಇಂಡಿಯಾಗೆ ಮೊದಲ ಸೋಲು!

ಮಹತ್ವದ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ದೆಹಲಿ ಸೇವಾ ಮಸೂದೆ ಕೊನೆಗೂ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ. ನಿನ್ನೆ ತಡರಾತ್ರಿವರೆಗೂ ಸದನದಲ್ಲಿ ಸುದೀರ್ಘ ಚರ್ಚೆ ಬಳಿಕ ಬಿಲ್ ಪಾಸ್ ಆಯ್ತು.. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಮಸೂದೆ ಮಂಡಿಸಿದ್ರು.

ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಮಸೂದೆಗೆ ಸಂಬಂಧಿಸಿದ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಮಸೂದೆ ಏಕೆ ಅಗತ್ಯ ಎಂಬುದರ ಕುರಿತು ಸವಿಸ್ತಾರವಾದ ವಿವರಣೆ ನೀಡಿದ್ರು. ಮಸೂದೆಯನ್ನು ಅಂಗೀಕರಿಸುವಂತೆ ಸದನಕ್ಕೆ ಮನವಿ ಮಾಡಿದ್ರು. ಅಮಿತ್ ಶಾಗೆ ಧ್ವನಿಮತದ ಮೂಲಕ ಎನ್​ಡಿಎ ಸಂಸದರು ಸಮ್ಮತಿ ನೀಡಿದ್ರು.

ಅಂಗೀಕಾರ ಪಡೆದಿರುವ ದೆಹಲಿ ಸೇವಾ ಮಸೂದೆ ಯಾವುದೇ ರೀತಿಯಲ್ಲೂ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸುವುದಿಲ್ಲ. ಮಸೂದೆಯು ದೆಹಲಿಯಲ್ಲಿ, ಭ್ರಷ್ಟಾಚಾರ ಮುಕ್ತ ಆಡಳಿತ ಗುರಿಯನ್ನು ಹೊಂದಿದೆ. ಇದು ದೆಹಲಿ ಸರ್ಕಾರದ ಅಧಿಕಾರ ದುರುಪಯೋಗಕ್ಕೆ ಕಡಿವಾಣ ಹಾಕುವ ಗುರಿ ಹೊಂದಿದೆ

ದೆಹಲಿ ಸೇವಾ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ!

ಇನ್ನು ಅಮಿತ್ ಶಾ ಮಂಡಿಸಿದ ದೆಹಲಿ ಸೇವಾ ಮಸೂದೆಗೆ ಕಾಂಗ್ರೆಸ್​​ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ರು..  ಇದು ಸಂಪೂರ್ಣವಾಗಿ ಅಸಾಂವಿಧಾನಿಕ, ಇದು ಹಿಂಪಡೆಯುವ ಮಸೂದೆ ಅಂತ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಕಿಡಿಕಾರಿದ್ರು.

ದೆಹಲಿ ಸೇವಾ ಮಸೂದೆಗೆ ಬಿಜೆಪಿ ಸದಸ್ಯರ ಸಮರ್ಥನೆ!

ಮತ್ತೊಂದೆಡೆ, ಮಸೂದೆಯನ್ನು ಸಮರ್ಥಿಸಿಕೊಂಡ ಬಿಜೆಪಿಯ ಸುಧಾಂಶು ತ್ರಿವೇದಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೆಹಲಿಯ ಎಎಪಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದನ್ನು ಪರಿಗಣಿಸಿ ಸುಗ್ರೀವಾಜ್ಞೆ ಮತ್ತು ತರುವಾಯ ಮಸೂದೆ ಮಂಡಿಸಲಾಯಿತು ಅಂತ ಹೇಳಿದ್ರು.

131-102 ಮತಗಳ ಅಂತರದಲ್ಲಿ ಮಸೂದೆ ಪಾಸ್!

ಇನ್ನು ಸದನದಲ್ಲಿ ಮಸೂದೆ ಬಗ್ಗೆ ಭಾರಿ ಗದ್ದಲ, ಗಲಾಟೆ ಉಂಟಾಯ್ತು. ಮಸೂದೆಯನ್ನು ಮತಕ್ಕೆ ಹಾಕಲು ವಿಪಕ್ಷಗಳು ಆಗ್ರಹಿಸಿದ್ವು. ಬಳಿಕ ಉಪಸಭಾಪತಿ ಮಸೂದೆಯನ್ನು ಮತಕ್ಕೆ ಹಾಕಿದ್ರು. ಮಸೂದೆ ಬೆಂಬಲಿಸಿ 139 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 102 ಮತಗಳು ಚಲಾವಣೆಯಾದವು.. ಮತಗಳ ಆಧಾರದ ಮೇಲೆ ಮಸೂದೆ ಭವಿಷ್ಯ ನಿರ್ಣಯ ಆಯ್ತು.

ನಾಲ್ವರು ಸದಸ್ಯರ ಸಹಿ ಪೋರ್ಜರಿ ಆರೋಪ!

ಇನ್ನು ರಾಜ್ಯಸಭೆಯಲ್ಲಿ ನಿರ್ಣಯ ಮಂಡನೆಗೆ ನಾಲ್ವರು ಸದಸ್ಯರ ಸಹಿ ಪೋರ್ಜರಿ‌ ಆರೋಪ ಕೇಳಿಬಂತು.. ಆಪ್​ ಸದಸ್ಯ ರಾಘವ್ ಚಡ್ಡಾ ಮಂಡಿಸಿದ ನಿರ್ಣಯಕ್ಕೆ  ಎನ್​​ಡಿಎ ಸಂಸದರು ಸಹಿ ಪೋರ್ಜರಿ ಆರೋಪ ಮಾಡಿದ್ರು. ರಾಘವ ಚಡ್ಡಾ ಮಂಡಿಸಿದ ನಿರ್ಣಯಕ್ಕೆ ನಮ್ಮ ‌ಒಪ್ಪಿಗೆ ಇಲ್ಲ, ಆದರೆ ನಿರ್ಣಯದಲ್ಲಿ ನಮ್ಮ ಸಹಿ ಇದೆ.. ಈ ಬಗ್ಗೆ ತನಿಖೆಯಾಗಬೇಕು ಎಂದು‌ ರಾಜ್ಯಸಭಾ ಉಪಸಭಾಪತಿಗೆ ದೂರು ನೀಡಿದರು.. ಈ ಬಗ್ಗೆ ತನಿಖೆ ನಡೆಸುವುದಾಗಿ ಉಪಸಭಾಪತಿ ಹರಿವಂಶ್ ರಾಯ್ ಭರವಸೆ ನೀಡಿದ್ರು.

ದೆಹಲಿ ಸೇವಾ ಮಸೂದೆ ಬಗ್ಗೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗಿಯಾಗಿದ್ದರು.. ವ್ಹೀಲ್​​​ಚೇರ್ ಮೇಲೆ ಮೇಲೆ ಬಂದು ಸದನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಇನ್ನು ಸಂಸದನಾಗಿ ಕಮ್​ ಬ್ಯಾಕ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಭಾಷಣ ಮಾಡಲಿದ್ದಾರೆ. ಮಣಿಪುರ ಹಿಂಸಾಚಾರ ಸಂಬಂಧ ಪ್ರಧಾನಿ ಮೋದಿ ಹೇಳಿಕೆಗೆ ಆಗ್ರಹಿಸಿ ಕಳೆದ ವಾರ ವಿಪಕ್ಷಗಳು ಅವಿಶ್ವಾಸ ನಿರ್ಯಣ ಮಂಡಿಸಿದ್ದವು.

ಒಟ್ಟಾರೆ ಬಿಜೆಡಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಬೆಂಬಲ ನೀಡಿದ್ದರಿಂದ ರಾಜ್ಯಸಭೆಯಲ್ಲೂ ಮಸೂದೆ ಪಾಸ್‌ ಆಗಿದೆ. ಉಭಯ ಸದನಗಳಲ್ಲೂ ಅಂಗೀಕಾರ ಪಡೆದಿರುವ ಮಸೂದೆಯನ್ನ ರಾಷ್ಟ್ರಪತಿಗೆ ಕಳುಹಿಸಲಿದ್ದು ರಾಷ್ಟ್ರಪತಿ ಅಂಕಿತದ ಬಳಿಕ  ಕಾನೂನಿನ ರೂಪ ಪಡೆಯಲಿದೆ. ಮೇಲ್ಮನೆಯಲ್ಲೂ ಪ್ರಧಾನಿ ಮೋದಿ ಸರ್ಕಾರಕ್ಕೆ ಗೆಲುವಾಗಿದ್ದು ವಿಪಕ್ಷಗಳ ಒಕ್ಕೂಟ ಇಂಡಿಯಾಗೆ ಮೊದಲ ಪರೀಕ್ಷೆಯಲ್ಲೇ ಸೋಲುಂಟಾದಂತಾಗಿದೆ…

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಸೇವಾ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ; ನಾಲ್ವರು ಸದಸ್ಯರ ಸಹಿ ಫೋರ್ಜರಿ ಆರೋಪ!

https://newsfirstlive.com/wp-content/uploads/2023/08/Seva-masude.jpg

Load More