newsfirstkannada.com

Breaking News: ದೆಹಲಿ ಕೋಚಿಂಗ್ ಸೆಂಟರ್​ನಲ್ಲಿ ಅಗ್ನಿ ಅವಘಡ; ವಿಂಡೋ ಒಡೆದು ಬಿಲ್ಡಿಂಗ್​ನಿಂದ ಹಾರಿದ ವಿದ್ಯಾರ್ಥಿಗಳು

Share :

15-06-2023

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು, ರಕ್ಷಣಾ ಕಾರ್ಯ

    ಭಯಾನಕವಾಗಿದೆ ರಕ್ಷಣಾ ಕಾರ್ಯಾಚರಣೆ, ಹೆಚ್ಚಿದ ಆತಂಕ

    ಹೆಣ್ಮಕ್ಕಳು ಸೇರಿ ಜೀವ ಸಂಕಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು

ನವದೆಹಲಿ: ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ದೆಹಲಿಯ ಮುಖರ್ಜಿ ನಗರದಲ್ಲಿರುವ ಕೋಚಿಂಗ್​ ಸೆಂಟರ್​ವೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಭಯ ಬೀತರಾಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಗಳು 4ನೇ ಮಹಡಿಯಿ ಕಿಟಕಿಯಿಂದಲೇ ಪಾರಾಗಿ ಕೆಳಕ್ಕೆ ಇಳಿಯುತ್ತಿದ್ದಾರೆ.

ಇನ್ನು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅಗ್ನಿಶಾಮಕ ಸಿಬ್ಬಂದಿ ಕಾಪಾಡಿದ್ದಾರೆ. ಅಲ್ಲದೇ ಇದಕ್ಕೂ ಮೊದಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು 4ನೇ ಮಹಡಿಯಿಂದಲೇ ಹಗ್ಗದ ಸಹಾಯದಿಂದ ಕೇಳಕ್ಕೆ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಇನ್ನು ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ರಕ್ಷಣೆಯಲ್ಲಿ ತೊಡಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ದೆಹಲಿ ಕೋಚಿಂಗ್ ಸೆಂಟರ್​ನಲ್ಲಿ ಅಗ್ನಿ ಅವಘಡ; ವಿಂಡೋ ಒಡೆದು ಬಿಲ್ಡಿಂಗ್​ನಿಂದ ಹಾರಿದ ವಿದ್ಯಾರ್ಥಿಗಳು

https://newsfirstlive.com/wp-content/uploads/2023/06/DELHI.jpg

Load More