newsfirstkannada.com

ಊಟದಲ್ಲಿ ಜಾಸ್ತಿ ಆಯ್ತು ಉಪ್ಪು.. ರೆಸ್ಟೋರೆಂಟ್ ಸಿಬ್ಬಂದಿನ ಕೇಳಿದ್ದೇ ತಪ್ಪು.. ಆಮೇಲೆ ಏನಾಯ್ತು? ವಿಡಿಯೋ ನೋಡಿ

Share :

20-08-2023

    ಊಟದಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಕೋಪಗೊಂಡ ಗ್ರಾಹಕ ಮಾಡಿದ್ದೇನು..?

    ಗಲಾಟೆ ಬಿಡಿಸಲು ಬಂದವರ ಮೇಲೂ ರೆಸ್ಟೋರೆಂಟ್ ಸಿಬ್ಬಂದಿ ಹಲ್ಲೆ

    ಫೈಟಿಂಗ್‌ನಲ್ಲಿ ಮೂಕ ಪ್ರೇಕ್ಷಕರಂತೆ ನಿಂತುಕೊಂಡ ಪೊಲೀಸ್​​ ಸಿಬ್ಬಂದಿ

ನವದೆಹಲಿ: ಊಟದಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಗ್ರಾಹಕ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿರೋ ಘಟನೆ ದೆಹಲಿ ರೆಸ್ಟೋರೆಂಟ್​ವೊಂದರಲ್ಲಿ ನಡೆದಿದೆ. ಊಟದಲ್ಲಿ ಉಪ್ಪು ಜಾಸ್ತಿ ಆಗಿದ್ದಕ್ಕೆ ಆಕ್ರೋಶಗೊಂಡ ಗ್ರಾಹಕನೊಬ್ಬ ಅಲ್ಲಿನ ಸಿಬ್ಬಂದಿಗೆ ಮನಬಂದಂತೆ ಥಳಿಸಿರೋ ವಿಡಿಯೋ ವೈರಲ್​ ಆಗಿದೆ.

ಉಪ್ಪಿನ ವಿಚಾರಕ್ಕೆ ಗ್ರಾಹಕ ಹಾಗೂ ಹೋಟೆಲ್​ ಸಿಬ್ಬಂದಿ ಮಧ್ಯೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಗ್ರಾಹಕ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ಹೊಡೆದಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ದೌಡಾಯಿಸಿದ್ದಾರೆ. ಆದರೆ ಗಲಾಟೆ ಬಿಡಿಸಲು ಬಂದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಪೊಲೀಸರು ಕೂಡ ಮೂಕ ಪ್ರೇಕ್ಷಕರಂತೆ ನಿಂತುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟದಲ್ಲಿ ಜಾಸ್ತಿ ಆಯ್ತು ಉಪ್ಪು.. ರೆಸ್ಟೋರೆಂಟ್ ಸಿಬ್ಬಂದಿನ ಕೇಳಿದ್ದೇ ತಪ್ಪು.. ಆಮೇಲೆ ಏನಾಯ್ತು? ವಿಡಿಯೋ ನೋಡಿ

https://newsfirstlive.com/wp-content/uploads/2023/08/fight-1.jpg

Load More