newsfirstkannada.com

ಮದುವೆಗೆ ಅಡ್ಡಿ; ಪ್ರಿಯಕರನಿಗಾಗಿ ಮಗು ಜೀವವನ್ನೇ ತೆಗೆದ ಮಹಿಳೆ ಅರೆಸ್ಟ್​​!

Share :

16-08-2023

    ಪ್ರಿಯಕರನಿಗಾಗಿ ಮಗುವನ್ನೇ ಕೊಂದಿದ್ದ ಹಂತಕಿ

    ಮಹಿಳೆಗೆ ಮದುವೆ ಆಗುತ್ತೇನೆ ಎಂದಿದ್ದ ಭೂಪ..!

    ಹೆಂಡತಿಗೆ ಡಿವೋರ್ಸ್​​ ನೀಡಲು ಹಿಂದೇಟು ಹಾಕಿದ್ದ

ನವದೆಹಲಿ: ಅಪ್ರಾಪ್ತ ಬಾಲಕನ ದಾರುಣ ಹತ್ಯೆ ಕೇಸ್​​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಮದುವೆಗೆ ಅಡ್ಡಿಯಾಗಿದ್ದ ಎಂದು 24 ವರ್ಷದ ಮಹಿಳೆ ಒಬ್ಬಳು ತನ್ನ ಪ್ರಿಯಕರನ ಮಗನನ್ನು ಕೊಂದು ಹಾಕಿದ್ದಾಳೆ. ಪೂಜಾ ಕುಮಾರಿ ಎಂಬಾಕೆ ಹಂತಕಿ ಎಂದು ತಿಳಿದು ಬಂದಿದೆ.

ತನ್ನ ಬಾಯ್​ ಫ್ರೆಂಡ್​ ಭೇಟಿಗಾಗಿ ಪೂಜಾ ಮನೆಗೆ ತೆರಳಿದ್ದಳು. ಈ ವೇಳೆ ಬಾಯ್​ ಫ್ರೆಂಡ್​ ಮಗ ಅಲ್ಲೇ ನಿದ್ರಿಸುತ್ತಿದ್ದ. ತನ್ನ ಮದುವೆಗೆ ಮಗನೇ ಅಡ್ಡಿ ಎಂದು ಭಾವಿಸಿ ಪೂಜಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಶವವನ್ನು ಬೆಡ್ ಬಾಕ್ಸ್‌ನಲ್ಲಿ ಮುಚ್ಚಿ ಎಸ್ಕೇಪ್​ ಆಗಿದ್ದಾಳೆ. ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನೇ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಏನಿದು ಕೇಸ್​..?

ಪೂಜಾ ಜಿತೇಂದರ್ ಎಂಬಾತನೊಂದಿಗೆ ಲಿವ್ ಇನ್ ರಿಲೇಶನ್​ಶೀಪ್​​ನಲ್ಲಿ ಇದ್ದಳು. ತನ್ನನ್ನು ಮದುವೆ ಆಗು ಎಂದು ಜಿತೇಂದರ್ ಬೆನ್ನು ಬಿದ್ದಿದ್ದಳು ಪೂಜಾ. ಆಗ​ ಹೆಂಡತಿಗೆ ಡಿವೋರ್ಸ್​​ ನೀಡಲು ಜಿತೇಂದರ್​​​ ಹಿಂದೆ ಮುಂದೆ ನೋಡಿದ್ದ. ಇದಕ್ಕೆ ಜಿತೇಂದರ್​​ ಮಗ ಕಾರಣ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾಳೆ.

ಪೂಜಾಗೆ ಕೈ ಕೊಟ್ಟಿದ್ದ ಜಿತೇಂದರ್!

ಮೂರು ವರ್ಷಗಳ ಕಾಲ ಜಿತೇಂದರ್​ ಮತ್ತು ಪೂಜಾ ಲಿವ್​ ಇನ್​​ ಸಂಬಂಧದಲ್ಲಿ ಇದ್ದರು. ಹೆಂಡತಿಗೆ ಡಿವೋರ್ಸ್​ ಕೊಟ್ಟು ಮದುವೆ ಆಗುತ್ತೇನೆ ಎಂದು ಜಿತೇಂದರ್​​ ಭರವಸೆ ನೀಡಿದ್ದ. ಕೊನೆಗೂ ಕಳೆದ ವರ್ಷ ಡಿಸೆಂಬರ್​​​ ತಿಂಗಳಲ್ಲಿ ಪೂಜಾಗೆ ಕೈಕೊಟ್ಟು ಜಿತೇಂದರ್​​ ತನ್ನ ಹೆಂಡತಿ, ಮಗು ಜತೆ ವಾಸವಾಗಿದ್ದ. ಇದರಿಂದ ಸಿಟ್ಟಿಗೆದ್ದ ಪೂಜಾ ಈ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಗೆ ಅಡ್ಡಿ; ಪ್ರಿಯಕರನಿಗಾಗಿ ಮಗು ಜೀವವನ್ನೇ ತೆಗೆದ ಮಹಿಳೆ ಅರೆಸ್ಟ್​​!

https://newsfirstlive.com/wp-content/uploads/2023/08/Pooja-4.jpg

Load More