ಕೆಲಸಕ್ಕೆ ರಿಸೈನ್.. ಕತ್ತೆ ಕಾಯೋಕೆ ಶುರು ಮಾಡಿದ್ರು ಜನ.. ಯಾಕೆ?
ಕತ್ತೆ ಕಾಯೋದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಇದರ ಲಾಭಗಳೇನು?
ಹಸು, ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರು
ವಿಜಯನಗರ: ಅತ್ತೆಗೊಂದು ಕಾಲ ಸೊಸೆಗೆ ಒಂದು ಕಾಲ ಅನ್ನೋ ಗಾದೆ ಮಾತಿದೆ. ಹಾಗೆ ಈಗ ಕತ್ತೆಗೂ ಒಂದು ಕಾಲ ಬಂದು ಬಿಟ್ಟಿದೆ. ವಿಜಯನಗರ ಜಿಲ್ಲೆಯಲ್ಲಿ ಕತ್ತೆಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಕೈ ತುಂಬ ಬರೋ ಸಂಬಳದ ಕೆಲಸ ಬಿಟ್ಟು ಜನ ಕತ್ತೆ ಕಾಯೋಕೆ ಮುಗಿಬೀಳುತ್ತಿದ್ದಾರೆ.
ಶಾಲೆಗೆ ಹೋಗದ ಮಕ್ಕಳಿಗೆ, ಕೆಲಸಕ್ಕೆ ಹೋಗದ ಹುಡುಗರಿಗೆ ಕತ್ತೆ ಕಾಯೋಕೆ ಹೋಗು ಅಂತ ನಮ್ಮ ದೊಡ್ಡೋರು ಹೇಳುತ್ತಿದ್ದರು. ಆದ್ರೆ ಈಗ ಕತ್ತೆಗೂ ಒಂದು ಕಾಲ ಬಂದ್ಬಿಟ್ಟಿದೆ. ಹಾಲು ಅಂದಾಕ್ಷಣ ಮೊದಲು ನೆನಪಿಗೆ ಬರೋದು ಹಸು ಹಾಲು. ಇಲ್ಲಾ ಎಮ್ಮೆ ಹಾಲು, ಆದ್ರೆ ಹಸು ಎಮ್ಮೆ ಹಾಲಿಗಿಂತ ಕತ್ತೆ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು, ರಾಜ್ಯದಲ್ಲಿಗ ಕತ್ತೆದೇ ಹವಾ ಶುರುವಾಗಿ ಬಿಟ್ಟಿದೆ.
ಇದನ್ನೂ ಓದಿ: ದುಡ್ಡಿಗಾಗಿ ಕತ್ತೆಗಳ ಮಾರಾಟಕ್ಕೆ ಮುಂದಾದ ಪಾಕಿಸ್ತಾನ.. ಅಯ್ಯೋ! ಇದೆಂಥಾ ದುಸ್ಥಿತಿ!
ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದು, ಜನ ಕತ್ತೆ ಕಾಯೋದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹೊಸಪೇಟೆಯ ಸಾಕಷ್ಟು ಜನ, ಕತ್ತೆ ಸಾಕೋದ್ರಿಂದ ಪ್ರತಿ ತಿಂಗಳು 70 ಸಾವಿರಕ್ಕಿಂತಲೂ ಹೆಚ್ಚಿನ ಆದಾಯ ಬರ್ತಿದೆಯಂತೆ. ಜೊತೆಗೆ ಈ ಸುದ್ದಿ ಕೇಳಿ ಕೆಲವರು ಮಾಡ್ತಿದ್ದ ಕೆಲಸ, ವ್ಯಾಪಾರವನ್ನೆಲ್ಲಾ ಬಿಟ್ಟು ಕತ್ತೆ ಕಾಯೋದೇ ಬ್ಯುಸಿನೆಸ್ ಮಾಡಿಕೊಳ್ಳೋ ತಯಾರಿ ನಡೆಸಿದ್ದಾರೆ.
ಈ ರೀತಿ ಕತ್ತೆ ಕಾಯೋದಕ್ಕೆ ಜನ ಮುಗಿಬಿಳುತ್ತಿರೋದಕ್ಕೂ ಒಂದು ಕಾರಣ ಇದೆ. ಅದೇನಂದ್ರೆ ಹೊಸಪೇಟೆಯ ಹಂಪಿ ರಸ್ತೆಯಲ್ಲಿ ಜೆನ್ನಿ ಮಿಲ್ಕ್ ಕಂಪನಿ ಮೂಲತಃ ಆಂಧ್ರಪ್ರದೇಶದ ಅನಂತಪುರದ ಸಂಸ್ಥೆ. ರಾಜ್ಯದ ಹಲವೆಡೆ ಈ ಕಂಪನಿಯ ಬ್ರಾಂಚ್ಗಳಿದೆ.
ಕತ್ತೆ ಸಾಕಿ ಬ್ಯುಸಿನೆಸ್ ಮಾಡೋರಿಗೆ 3 ಲಕ್ಷ ರೂಪಾಯಿ ಹಣ ಜೆನ್ನಿ ಸಂಸ್ಥೆಗೆ ಕೊಟ್ಟಾಗ ಕತ್ತೆಗಳನ್ನ ಸಪ್ಲೈ ಮಾಡುತ್ತೆ. 3 ವರ್ಷ ಅಗ್ರಿಮೆಂಟ್ ಮಾಡ್ಕೊಂಡು 3 ಹೆಣ್ಣು ಕತ್ತೆ ಕೊಟ್ಟು, ಬಾಂಡ್ ಮಾಡಿಸಿದ 20 ದಿನಗಳ ನಂತರ 3 ಮರಿ ಕತ್ತೆಗಳನ್ನ ಕೊಡ್ತಾರೆ. ಕತ್ತೆ ಸಾಕೋದಕ್ಕೆ ಅಂತ ಕೊಟ್ಟು, ಆಮೇಲೆ ಅವರಿಂದ ಹಾಲನ್ನ ಕಲೆಕ್ಟ್ ಮಾಡ್ತಾರೆ. ಪ್ರತಿ ಲೀಟರ್ ಕತ್ತೆ ಹಾಲಿಗೆ ಬರೋಬ್ಬರಿ 2,300 ರೂಪಾಯಿನಂತೆ ಕಂಪನಿ ಖರೀದಿ ಮಾಡುತ್ತೆ. ಕತ್ತೆ ಸಾಕಿದವರು ತಿಂಗಳಿಗೆ ಏನಿಲ್ಲ ಅಂದ್ರೂ 80 ರಿಂದ 90 ಸಾವಿರ ರೂಪಾಯಿಗಳಿಗೂ ಹೆಚ್ಚಾಗಿ ಆದಾಯ ಬರ್ತಿದೆ ಅಂತ ಕತ್ತೆ ಸಾಕುತ್ತಾ ಇರೋರು ಹೇಳ್ತಿದ್ದಾರೆ.
‘ಕಾಯಿಲೆವಾಸಿ ಕತ್ತೆ ಹಾಲು ಕುಡಿ’
ಚಿಕ್ಕಮಕ್ಕಳು, ಅಸ್ತಮಾ ರೋಗಿಗಳಿಗೆ ಕತ್ತೆ ಹಾಲು ರಾಮಬಾಣ ಎನ್ನಲಾಗುತ್ತೆ
ಕತ್ತೆ ಹಾಲಿನ ವಿಟಮಿನ್, ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯಕ್ಕೆ ಉತ್ತಮ
ಇತರೆ ಡೈರಿ ಹಾಲುಗಳಿಗಿಂತ ಕತ್ತೆ ಹಾಲು ತಾಯಿಯ ಎದೆ ಹಾಲನ್ನು ಹೋಲುತ್ತದೆ
ಹಾಲಿನಲ್ಲಿರುವ ಲ್ಯಾಕ್ಟೋಸ್ ಕ್ಯಾಲ್ಸಿಯಂನಿಂದ ಮೂಳೆಗಳ ಬಲ ಹೆಚ್ಚಿಸುತ್ತದೆ
ಸೋಪ್, ಕ್ರೀಮ್, ವಿವಿಧ ಪ್ರಾಡಕ್ಟ್ಗಳ ತಯಾರಿಕೆಗೂ ಬಳಕೆ ಮಾಡಲಾಗುತ್ತದೆ
ದೇಹದ ಕೆಟ್ಟ ಬ್ಯಾಕ್ಟೀರಿಯಗಳನ್ನು ನಿವಾರಿಸಿ, ಆರೋಗ್ಯ ವೃದ್ಧಿಸಲು ಸಹಕಾರಿ
ಭಾರತದ ಮಾತ್ರವಲ್ಲ ವಿದೇಶಗಳಲ್ಲೂ ಕತ್ತೆಯ ಹಾಲಿಗೆ ಭಾರೀ ಬೇಡಿಕೆ ಇದೆ
ದೇಶದ ಹಲವಡೆ ಕತ್ತೆ ಹಾಲಿಗೆ ಭಾರೀ ಬೇಡಿಕೆ ಇದ್ದು, ಇದೇ ಕಾರಣಕ್ಕೆ ಜೆನ್ನಿ ಕಂಪನಿ ಜನರಿಗೆ ಕತ್ತೆಗಳನ್ನ ಕೊಟ್ಟು, ಹಾಲನ್ನ ಕಲೆಕ್ಟ್ ಮಾಡ್ತಿದೆ. ವೈಜ್ಞಾನಿಕವಾಗಿ ಕತ್ತೆ ಹಾಲನ್ನ ಜನ ಬಳಕೆ ಮಾಡ್ತಿದ್ದಾರೆ. ಚಿಕ್ಕಮಕ್ಕಳು ಅಥವಾ ಅಸ್ತಮಾ ರೋಗಿಗಳಿಗೆ ಕತ್ತೆ ಹಾಲು ರಾಮಬಾಣವಾಗಿದೆ. ಔಷಧಿ ತಯಾರಿಕೆಗೂ ಕತ್ತೆ ಹಾಲು ಬಳಕೆ ಮಾಡ್ತಾರಂತೆ. ಸೋಪ್, ಕ್ರೀಮ್ ಸೇರಿದಂತೆ ಹಲವೂ ಪ್ರಾಡಕ್ಟ್ಗಳನ್ನ ತಯಾರಿ ಮಾಡೋದಕ್ಕೆ ಕತ್ತೆ ಹಾಲು ಬಳಕೆ ಆಗುತ್ತೆ. ಹೀಗಾಗಿ ಲಕ್ಷ, ಲಕ್ಷ ಹಣ ಪಡೆದು ಅಗ್ರಿಮೆಂಟ್ ಮಾಡಿಕೊಂಡು, ಕತ್ತೆ ಹಾಲನ್ನ ಸ್ಟೋರ್ ಮಾಡೋಕೆ ಫ್ರಿಡ್ಜ್, ಹಾಲಿನ ಬಾಟಲ್ ಗಳನ್ನ ಕಂಪನಿ ಕೊಡ್ತಿದೆ. ಕತ್ತೆ ಸಾಕಿದವರಿಂದ ನೇರವಾಗಿ ನಾವೇ ಹೋಗಿ ಪ್ರತಿ ನಿತ್ಯವೂ ಕತ್ತೆ ಹಾಲನ್ನು ಕಲೆಕ್ಟ್ ಮಾಡುತ್ತೆ ಅಂತ ಕಂಪನಿ ಮ್ಯಾನೇಜರ್ ಕವಿತಾ ಹೇಳಿದ್ದಾರೆ.
ಇದರ ನಡುವೆ ಜೆನ್ನಿ ಕಂಪನಿ ಜನರನ್ನ ಮೋಸ ಮಾಡೋಕೆ ಈ ಕೆಲಸ ಮಾಡ್ತಿದೆ ಅಂತ ಅನುಮಾನಗೊಂಡು ಕೆಲ ರೈತ ಸಂಘಟನೆಗಳು ವಿಜಯನಗರ ಜಿಲ್ಲಾಡಳಿತಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಕೊಟ್ಟ ಡಿಸಿ ಎಂ.ಎಸ್ ದಿವಾಕರ್, ಟ್ರೇಡ್ ಲೈಸನ್ಸ್ ಇಲ್ಲ. ಕಂಪನಿಯ ಡಾಂಕ್ಯುಮೆಂಟ್ಸ್ ಚೆಕ್ ಮಾಡ್ತಾ ಇದ್ದೇವೆ. ರೈತರು ಹಾಗೂ ಜನರು ಎಚ್ಚರಿಕೆಯಿಂದ ಇರಬೇಕು ಅಂತ ಹೇಳಿದ್ದಾರೆ.
ಓದದೇ ರೋಡಲ್ಲಿ ಆಟ ಆಡುತ್ತಾ ಇದ್ರೆ, ಕೆಲಸ ಮಾಡದೇ ಅಲೆದಾಡ್ತಾ ಇದ್ರೆ ಕತ್ತೆ ಕಾಯೋಕೆ ಹೋಗು ಅಪ್ಪ ಅಮ್ಮನೋ ಅಥವಾ ದೊಡ್ಡೋರು ಹೇಳ್ತಾರೆ. ಆದ್ರೆ ಈಗ ಓದನ್ನೂ ಬಿಟ್ಟು, ಕೆಲಸಕ್ಕೂ ಗುಡ್ಬೈ ಹೇಳಿ ಕತ್ತೆ ಸಾಕೋದಕ್ಕೆ ಜನರು, ರೈತರು ಮುಂದಾಗ್ತಿದ್ದಾರೆ. ಕತ್ತೆ ಹಾಲಿಗೆ ಡಿಮ್ಯಾಂಡ್ ಹೆಚ್ಚಾಗ್ತಾ ಇರೋದ್ರಿಂದ ಜನ ಕತ್ತೆ ಸಾಕಲು ಮುಂದಾಗಿದ್ದು, ಇನ್ಮುಂದೆ ನೀವು ಯಾರಿಗಾದ್ರೂ ಕತ್ತೆ ಕಾಯೋಕೆ ಹೋಗು ಅಂತ ಬೈಯೋ ಮುಂಚೆ ಯೋಚನೆ ಮಾಡಿ. ಇಂತಹ ಕಂಪನಿ ಬಗ್ಗೆನೂ ಯಾವುದಕ್ಕೂ ಎಚ್ಚರದಿಂದಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ