newsfirstkannada.com

₹2000 ನೋಟಿನಿಂದ ಚಿನ್ನಕ್ಕೆ ಡಿಮ್ಯಾಂಡ್‌; ಬಂಗಾರ ಕೊಳ್ಳಲು ಜನ ಮುಗಿಬಿದ್ದಿದ್ದು ಯಾಕೆ?

Share :

22-05-2023

    ಮನೆಯಲ್ಲಿದ್ದರೆ ಚಿನ್ನ ಚಿಂತೆಯು ಏತಕೆ ಇನ್ನ

    ಗರಿ ಗರಿ ನೋಟು ಕೊಟ್ಟು ಬಂಗಾರ ಖರೀದಿ

    ಚಿನ್ನದ ಅಂಗಡಿ ಖಜಾನೆಗೆ ₹2000 ನೋಟ್‌

2000 ರೂಪಾಯಿ ನೋಟನ್ನು ವಾಪಸ್ ಪಡೆದ ಬಳಿಕ ದೇಶಾದ್ಯಂತ ಚಿನ್ನಕ್ಕೆ ಭರ್ಜರಿ ಬೇಡಿಕೆ ಬಂದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್ 2000 ನೋಟ್ ಅನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆ. ಅಲ್ಲದೇ ನೋಟುಗಳನ್ನ ಬದಲಾಯಿಸಿಕೊಳ್ಳಲು ಬಹಳಷ್ಟು ಸಮಾಯಾವಕಾಶವನ್ನು ನೀಡಿದೆ. ಈ ನಡುವೆ ಜನರಿಗೆ ಹಳದಿ ಲೋಹದ ಮೇಲೆ ವ್ಯಾಮೋಹ ಹೆಚ್ಚಾಗಿದೆ.

2000 ರೂಪಾಯಿ ನೋಟ್ ಇದ್ದವರು ಬ್ಯಾಂಕ್‌ಗಳಿಗೆ ಹೋಗಿ ತಕ್ಷಣವೇ ಬೇರೆ ನೋಟುಗಳನ್ನ ಪಡೆಯಬಹುದು. ಅಥವಾ ತಮ್ಮ ಖಾತೆಗೆ ಆ ಹಣವನ್ನು ಜಮೆ ಮಾಡಿಸಿಕೊಳ್ಳಬಹುದು. RBI ಈ ನೋಟು ವಿನಿಮಯಕ್ಕೆ ಯಾರೋ ಚಿಂತೆ ಮಾಡಬೇಡಿ. ನೀವು ಆರಾಮಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಭರವಸೆ ನೀಡಿದೆ.

ಬ್ಯಾಂಕ್‌ಗಳಲ್ಲಿ ಪಿಂಕ್ ನೋಟ್ ಕೊಟ್ಟು ಬೇರೆ ನೋಟ್ ಪಡೆಯಲು ಸಾಕಷ್ಟು ಅವಕಾಶಗಳಿವೆ. ಆದರೆ ಜನರು 2000 ರೂಪಾಯಿ ನೋಟು ಕೊಟ್ಟು ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಚಿನ್ನದ ಅಂಗಡಿಗಳಿಗೆ ಕರೆ ಮಾಡಿ 2000 ನೋಟು ತಂದು ಚಿನ್ನ ಖರೀದಿಸುವಂತೆ ಎಂದು ಎನ್‌ಕ್ವೈರಿ ಮಾಡುತ್ತಿದ್ದಾರೆ. ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಂತೂ ಚಿನ್ನಕ್ಕೆ ಭರ್ಜರಿ ಬೇಡಿಕೆ ಬಂದಿದೆ. ಬ್ಯಾಂಕ್‌ಗೆ ಹೋಗಿ ಹಣ ಎಕ್ಸ್‌ಚೇಂಜ್ ಮಾಡುವ ಬದಲು ಚಿನ್ನದ ಅಂಗಡಿಗೆ ಹೋಗಿ ಚಿನ್ನ ಖರೀದಿ ಮಾಡಲು ಜನ ಇಷ್ಟಪಡುತ್ತಿದ್ದಾರೆ. ಚಿನ್ನದ ಅಂಗಡಿಯಲ್ಲಿ 2 ಲಕ್ಷ ರೂಪಾಯಿಗಿಂತ ಕಡಿಮೆ ಚಿನ್ನ, ಬೆಳ್ಳಿ ಖರೀದಿಸಿದರೆ ಪ್ಯಾನ್ ಹಾಗೂ ಆಧಾರ್ ಕಾರ್ಡ್‌ ಕೊಡಬೇಕಿಲ್ಲ. ಹೀಗಾಗಿ 2000 ನೋಟು ಇದ್ದವರು ಬ್ಯಾಂಕ್‌ನ ಬದಲು ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದಾರೆ.

ಇಷ್ಟೆ ಅಲ್ಲ.. ಪೆಟ್ರೋಲ್ ಬಂಕ್‌ನಲ್ಲಿ 2000 ನೋಟಿನ ಚಲಾವಣೆಯು ಹೆಚ್ಚಾಗಿದೆ. ವಾಹನ ಸವಾರರು 2000 ರೂಪಾಯಿ ನೋಟುಗಳನ್ನ ಕೊಟ್ಟು 100, 200 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಚಿಲ್ಲರೆ ಕೇಳುತ್ತಿದ್ದಾರೆ. ಕೊನೆಗೆ ಹಲವು ಪೆಟ್ರೋಲ್ ಬಂಕ್‌ಗಳು ನಮ್ಮಲ್ಲಿ 2000 ನೋಟಿಗೆ ಚಿಲ್ಲರೆ ಇಲ್ಲ ಎಂದು ಬೋರ್ಡ್‌ ಹಾಕೋ ಸ್ಥಿತಿ ಬಂದಿದೆ. 2000 ನೋಟುಗಳನ್ನ ಬ್ಯಾಂಕ್‌ಗಳಲ್ಲಿ ಎಕ್ಸ್‌ಚೇಂಜ್ ಮಾಡಲು ಸೆಪ್ಟೆಂಬರ್ 30ರವರೆಗೂ ಕಾಲಾವಕಾಶವಿದೆ. ಕಳೆದ ಬಾರಿಯಂತೆ ಜನ ಕ್ಯೂನಲ್ಲಿ ನಿಲ್ಲಬಾರದು ಅಂತಾ RBI ನೋಟು ವಿನಿಮಯಕ್ಕೆ ಸುಲಭವಾದ ದಾರಿಯನ್ನೇ ಪ್ರಕಟಿಸಿದೆ. ಇಷ್ಟಾದ್ರೂ ದುಡ್ಡಿಗಿಂತ ಚಿನ್ನ ಕೊಳ್ಳುವುದೇ ಉತ್ತಮ ಅಂತಾ ಜನ ಭಾವಿಸಿ ಚಿನ್ನದ ಅಂಗಡಿಗಳತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಆಶ್ಚರ್ಯ ಏನಂದ್ರೆ ಗ್ರಾಹಕರ ಡಿಮ್ಯಾಂಡ್‌ಗೆ ಆಭರಣಗಳನ್ನು ಪೂರೈಸಲು ಆಗದೇ ಚಿನ್ನದ ಅಂಗಡಿಗಳಲ್ಲಿ ಮುಂಗಡ ಬುಕ್ಕಿಂಗ್‌ಗಳು ಕೂಡ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

₹2000 ನೋಟಿನಿಂದ ಚಿನ್ನಕ್ಕೆ ಡಿಮ್ಯಾಂಡ್‌; ಬಂಗಾರ ಕೊಳ್ಳಲು ಜನ ಮುಗಿಬಿದ್ದಿದ್ದು ಯಾಕೆ?

https://newsfirstlive.com/wp-content/uploads/2023/05/2000-Note-and-Gold.jpg

Load More