newsfirstkannada.com

ಪೆಟ್ರೋಲ್​​, ಡೀಸೆಲ್​​, ಬಿಯರ್​​, ಬಿರಿಯಾನಿಗಿಂತ ದುಬಾರಿಯಾದ ಟೊಮ್ಯಾಟೋ; 1 ಕೆಜಿಗೆ ಎಷ್ಟು..?

Share :

17-07-2023

    ಮನೆಯಲ್ಲಿ ಟೊಮ್ಯಾಟೋ ಚಟ್ನಿ ಮಾಡುವಂತಿಲ್ಲ

    ಟೊಮ್ಯಾಟೋ ರೈಸ್‌ ಬಾತ್‌ ತಿನ್ನುವಂತೆಯೇ ಇಲ್ಲ

    ರಾಜ್ಯದಲ್ಲಿ ಇನ್ನೂ ತಗ್ಗುತ್ತಿಲ್ಲ ಕೆಂಪು ತರಕಾರಿ ಬೆಲೆ

ಬೆಂಗಳೂರು: ಮನೆಯಲ್ಲಿ ಟೊಮ್ಯಾಟೋ ಚಟ್ನಿ ಮಾಡುವಂತಿಲ್ಲ. ಟೊಮ್ಯಾಟೋ ರೈಸ್‌ ತಿನ್ನುವಂತಿಲ್ಲ. ಟೊಮ್ಯಾಟೋ ಸಾಂಬಾರ್‌ ಬಗ್ಗೆ ಅಂತೂ ಯೋಚ್ನೆ ಮಾಡೋ ಹಾಗಿಲ್ಲ. ಅಷ್ಟರ ಮಟ್ಟಿಗೆ ಕೆಂಪುರಾಣಿಯ ಬೆಲೆ ಏರಿಕೆಯಾಗಿದೆ. ನಿತ್ಯವೂ ಬೆಲೆ ಏರುತ್ತಾ ಶತಕ ಬಾರಿಸಿ ದ್ವಿಶತಕದತ್ತ ಮುನ್ನುಗ್ಗುತ್ತಿದೆ. ಟೊಮ್ಯಾಟೋ ಕೊಳ್ಳುವ ಗ್ರಾಹಕರ ಜೇಬನ್ನ ಸುಡುತ್ತಿದೆ.

ಕಳೆದೆರಡು ವಾರಗಳಿಂದ ಬಡ, ಮಧ್ಯಮ ವರ್ಗದ ಜನರ ಮನೆಯಲ್ಲಿ ಸಾರೆಲ್ಲಾ ನೀರಾಗಿಬಿಟ್ಟಿದೆ. ನಾಲಿಗೆಗೆ ರುಚಿ ಸಿಗದೇ ಜನರು ಕಂಗಾಲಾಗಿದ್ದಾರೆ. ಕಾರಣ ತರಕಾರಿಗಳ ಬೆಲೆ ಏರಿಕೆ ಬರೆ. ಅದರಲ್ಲೂ ನಿತ್ಯ ಅಡಿಗೆಗೆ ಬೇಕಾಗಿರೋ ಟೊಮ್ಯಾಟೋ ಬೆಲೆಯಂತೂ ಕೈಗೆಟುಕದಾಗಿದೆ. ಮಾರ್ಕೆಟ್‌ಗೆ ಹೋದ ಜನರು ಕೆಂಪುರಾಣಿಯನ್ನ ಕೇವಲ ಕಣ್ತುಂಬಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.

ಪೆಟ್ರೋಲ್, ಡೀಸೆಲ್‌ಗಿಂತ ‘ಟೊಮ್ಯಾಟೋ’ ಬಲು ದುಬಾರಿ

ರಾಜ್ಯದಲ್ಲಿ ಕೆಂಪು ತರಕಾರಿಯ ಬೆಲೆ ತಗ್ಗದಾಗಿದೆ. ಇದು ಟೊಮ್ಯಾಟೋ ಬೆಳೆದ ರೈತನ ಬಾಳನ್ನ ಹಸನಾಗಿಸಿದ್ರೆ, ಕೊಳ್ಳುವ ಗ್ರಾಹಕರ ಆರ್ಥಿಕತೆಗೆ ಬರೆ ಕೊಡುತ್ತಿದೆ. ಈಗಾಗಲೇ ಶತಕ ಬಾರಿಸಿ ಟೊಮ್ಯಾಟೋ ದ್ವಿಶತಕದತ್ತ ದಾಪುಗಲಿಡುತ್ತಿದೆ. ಹತ್ತು, ಇಪ್ಪತ್ತು ರೂಪಾಯಿ ಇದ್ದ 1 ಕೆಜೆ ಟೊಮ್ಯಾಟೋ ಬೆಲೆ ಈಗ 1 ಟೊಮ್ಯಾಟೋ ಹಣ್ಣಿಗೆ ಕೊಡಬೇಕಾದ ಸಂದರ್ಭ ಬಂದೊದಗಿದೆ. ಹೀಗಾಗಿ ಟೊಮ್ಯಾಟೋನ ಬೇರೆ ಬೇರೆ ಆಹಾರ, ವಸ್ತುಗಳು, ಪೆಟ್ರೋಲ್, ಡೀಸೆಲ್‌ಗೆ ಕಂಪೇರ್ ಮಾಡಿ ಗೇಲಿ ಮಾಡ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಟ್ರೋಲ್ ಮಾಡ್ತಿದ್ದಾರೆ. ಅದರಲ್ಲೂ ಟೊಮ್ಯಾಟೋ ರೈಸ್ ಕಣ್ಮರೆಯಾಗಿದೆ ಅಂತಾ ಅಳಲು ತೋಡಿಕೊಳ್ತಿದ್ದಾರೆ. ರಾಜ್ಯದಲ್ಲಿ ಕೆಂಪುರಾಣಿ ರೇಟ್ 130 ರೂಪಾಯಿ ಆಗೋಗಿದೆ.

ಟೊಮ್ಯಾಟೋಗಿಂತ ಏನೆಲ್ಲಾ ಅಗ್ಗ?

ಟೊಮ್ಯಾಟೋಗಿಂತ ಒಂದು ಲೀಟರ್ ಪೆಟ್ರೋಲ್ ದರ 101 ರೂಪಾಯಿ 94 ಪೈಸೆ ಇದೆ. ಇನ್ನೂ ಒಂದು ಲೀಟರ್ ಡೀಸೆಲ್ ದರ 87 ರೂಪಾಯಿ 89 ಪೈಸೆ ಇದೆ. ಅಲ್ಲದೇ 1 ಬಿಯರ್ ಟಿನ್‌ನ ದರ ₹80-₹100 ರೂಪಾಯಿ ಇದೆ. ಇನ್ನೂ ಸಿಂಗಲ್ ಸ್ಕ್ರೀನ್ ಮೂವಿ ಟಿಕೆಟ್ ₹100-120 ರೂಪಾಯಿಯಾಗಿದ್ದು 1 ಕೆಜಿ ಟೊಮ್ಯಾಟೋಗಿಂತ ಕಮ್ಮಿಯಿದೆ. ಅಲ್ಲದೇ ಒಂದು ಪ್ಲೇಟ್ ಚಿಕನ್ ಬಿರಿಯಾನಿ 100 ರಿಂದ 120 ರೂಪಾಯಿ ಇದ್ದು, ಇದು ಕೂಡಾ ಟೊಮ್ಯಾಟೋಗಿಂತ 10 ರೂಪಾಯಿ ಕಡಿಮೆ ಇದೆ.

ಗಗನಕ್ಕೇರಿದ ತರಕಾರಿ ಬೆಲೆ.. ಸಸಿಗಳಿಗೆ ಭಾರೀ ಡಿಮ್ಯಾಂಡ್​

ರಾಜ್ಯದಲ್ಲಿ ತರಕಾರಿಗಳ ಬೆಲೆ ಹೆಚ್ಚಾಗ್ತಿದ್ದಂತೆ ತರಕಾರಿ ಸಸಿಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಟೊಮ್ಯಾಟೊ, ಹಸಿ ಮೆಣಸಿನಕಾಯಿ ಸಸಿಗೆ ದಾವಣಗೆರೆಯ ನರ್ಸರಿಗಳಲ್ಲಿ ಸಸಿಗಳು ಭರ್ಜರಿ ಮಾರಾಟ ಆಗುತ್ತಿವೆ.

ತರಕಾರಿ ಬೆಲೆ ಏರಿಕೆ ಬಳಿಕ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಟೊಮ್ಯಾಟೋ ಸಸಿ ಖರೀದಿ ಆಗಿವೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದಲ್ಲಿ ತರಕಾರಿ ದರ ದುಬಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ರೈತರು ಟೊಮ್ಯಾಟೋ, ಮೆಣಸಿನಕಾಯಿ ಬೆಳೆಯಲು ಅತ್ಯುತ್ಸಾಹ ತೋರುತ್ತಿದ್ದಾರೆ.

ಇನ್ನೂ ದೇಶದಲ್ಲಿ ಟೊಮ್ಯಾಟೋ ದರ ಹೆಚ್ಚಳವಾಗ್ತಿದ್ದಂತೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ಜನರ ಸಹಾಯಕ್ಕೆ ಧಾವಿಸಿವೆ. ನಾಫೆಡ್, ಎನ್‌ಸಿಸಿಎಫ್‌ ಕೆಜಿಗೆ 10 ರೂಪಾಯಿ ಸಬ್ಸಿಡಿ ದರವನ್ನ ಟೊಮ್ಯಾಟೋ ಇಳಿಕೆ ಮಾಡಿದೆ ಈ ಮೂಲತ ಸಬ್ಸಿಡಿಯಲ್ಲಿ 80 ರೂಪಾಯಿಗೆ ಟೊಮ್ಯಾಟೋ ದರ ಇಳಿಕೆಯಾಗಿದೆ.

ದಿನನಿತ್ಯ ಬಳಸೋ ಟೊಮ್ಯಾಟೋ ರೇಟ್‌ ಈ ಪಾಟಿ ಏರ್ತಿದ್ರೆ ಬದುಕೋದ್ಹೇಗೆ. ರುಚಿಕರ ಆಹಾರ ತಿನ್ನೋದೇಗೆ ಅಂತಾ ಜನರು ಪರಿತಪಿಸುತ್ತಿದ್ದಾರೆ. ಈ ಟೊಮ್ಯಾಟೋ ಬೆಲೆ ಯಾವಾಗಪ್ಪಾ ಇಳಿಯುತ್ತೆ? ನಾವು ಯಾವಾಗಪ್ಪಾ ರುಚಿ ರುಚಿ ಟೊಮ್ಯಾಟೋ ಬಾತ್ ತಿನ್ನೋದು ಅಂತಾ ಗೊಣಗುತ್ತಾ ಜನ ಊಟ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪೆಟ್ರೋಲ್​​, ಡೀಸೆಲ್​​, ಬಿಯರ್​​, ಬಿರಿಯಾನಿಗಿಂತ ದುಬಾರಿಯಾದ ಟೊಮ್ಯಾಟೋ; 1 ಕೆಜಿಗೆ ಎಷ್ಟು..?

https://newsfirstlive.com/wp-content/uploads/2023/07/Tomato-4.jpg

Load More