newsfirstkannada.com

ಪೋಷಕರಿಗೆ ಗುಡ್‌ನ್ಯೂಸ್‌: ಶಿಕ್ಷಣ ಇಲಾಖೆಯಿಂದ ಬಂತು ಶುಭ ಸುದ್ದಿ.. ಏನದು..?

Share :

20-08-2023

    ಪ್ರೀ ನರ್ಸರಿ ಶಾಲೆ ತೆರೆಯಲು ಭರ್ಜರಿ ಪ್ಲಾನ್​!

    ಇದು ಪೋಷಕರು ಖುಷಿ ಪಡುವಂತಹ ಸುದ್ದಿ

    ಸರ್ಕಾರಿ ಶಾಲೆಗಳಲ್ಲೂ ಇರಲಿದೆ ಪ್ರೀ ನರ್ಸರಿ!

ಬೆಂಗಳೂರು: ಸರ್ಕಾರಿ ಶಾಲೆ ಅಂದ್ರೆ ಮೂಗು ಮೂರಿಯೋ ಮಂದಿಗೆ ಶಿಕ್ಷಣ ಇಲಾಖೆ, ಒಂದಲ್ಲ ಒಂದು ಸ್ವೀಟ್​ ಸರ್ಪ್ರೈಸ್​ ನೀಡ್ತಾನೆ ಬಂದಿದೆ. ಈ ಬಾರಿಯ ಪೋಷಕರೆಲ್ಲಾ ಖುಷಿ ಪಡುವಂಹ ಸುದ್ದಿಯೊಂದನ್ನು ನೀಡಿದೆ. ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಪ್ರೀ ನರ್ಸರಿ ಶಾಲೆ ತೆರೆಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಪೂರ್ವ ಪ್ರಾಥಮಿಕ ಅಂದ್ರೆ, ಎಲ್​ಕೆಜಿ ಶಾಲಾ ತರಗತಿಗಳನ್ನ ಪ್ರಾಯೋಗಿಕವಾಗಿ ನಡೆಸಲು ಪ್ಲಾನ್ ರೂಪಿಸಿದೆ.

2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಪ್ಲಾನ್ ಮಾಡಲಾಗಿದ್ದು, ಈ ತಿಂಗಳಿನಿಂದಲೇ ಸಿದ್ಧತೆ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆಯನ್ನೂ ನೀಡಿದೆ. ಪೂರ್ವ ಪ್ರಾಥಮಿಕ ಶಾಲೆಗಳು ಅಂದ್ರೆ ಎಲ್‌ಕೆಜಿ ನಡೆಸಲು ಒಂದು ಸುಸಜ್ಜಿತ ಕೊಠಡಿ ಮೀಸಲಿರಿಸಲಾಗುತ್ತದೆ. ಅಗತ್ಯ ಸಾಧನ ಸಾಮಾಗ್ರಿಗಳನ್ನು ನಿಯಮಾನುಸಾರ ಖರೀದಿಸಲು ಸೂಚನೆ ನೀಡಲಾಗಿದೆ. ಚಿತ್ರಕಲಾ ಶಿಕ್ಷಕರನ್ನ ಬಳಸಿಕೊಂಡು ಆಕರ್ಷಕವಾಗಿ ಚಿತ್ರ ಬಿಡಿಸಿ ಪಾಠ ಮಾಡಲಾಗುತ್ತದೆ. SDMCಗೆ ಅತಿಥಿ ಶಿಕ್ಷಕಿ ಅಥವಾ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳುವ ಹೊಣೆ ನೀಡಲಾಗುತ್ತೆ.

ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರೂಪಾಯಿ ಹಾಗೂ ಆಯಾರನ್ನು ನೇಮಿಸಿಕೊಳ್ಳಲು 5 ಸಾವಿರ ರೂಪಾಯಿ ಸಂಭಾವನೆ ನಿಗದಿಪಡಿಸಲಾಗುತ್ತೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರವರೆಗೆ ತರಗತಿ ನಿಗದಿ ಮಾಡಲಾಗಿದೆ. ಆಗಸ್ಟ್ ಅಂತ್ಯದೊಳಗೆ ಸರ್ಕಾರದಿಂದಲೇ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುತ್ತೆ. ಜೊತೆಗೆ ಅಂಗನವಾಡಿಗಳಲ್ಲಿ ನೀಡುವ ಹಾಲು, ಊಟ, ಉಪಾಹಾರ ಕೂಡ ಇಲ್ಲಿ ನೀಡಲಾಗುತ್ತೆ. ಒಟ್ಟಿನಲ್ಲಿ ಎಲ್‌ಕೆಜಿಗೆ 4 ರಿಂದ 5 ವರ್ಷದೊಳಗಿನ ಮಕ್ಕಳನ್ನ ಮಾತ್ರ ದಾಖಲಿಸಲು ಜೊತೆಗೆ ಕನಿಷ್ಠ 20 ಮಕ್ಕಳು ಮತ್ತು ಗರಿಷ್ಠ 30 ಮಕ್ಕಳ ದಾಖಲಾತಿಗೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದಕ್ಕೆ ಮಕ್ಕಳು ಹಾಗೂ ಪೋಷಕರ ಪ್ರತಿಕ್ರಿಯೆ ಹೇಗಿರಲಿದೆ ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರಿಗೆ ಗುಡ್‌ನ್ಯೂಸ್‌: ಶಿಕ್ಷಣ ಇಲಾಖೆಯಿಂದ ಬಂತು ಶುಭ ಸುದ್ದಿ.. ಏನದು..?

https://newsfirstlive.com/wp-content/uploads/2023/07/School-1-1.jpg

Load More