newsfirstkannada.com

ಡಿಪೋ ಮ್ಯಾನೇಜರ್​ ಕಿರುಕುಳ; ಮೈಮೇಲೆ ಡೀಸೆಲ್​​ ಸುರಿದುಕೊಂಡು ಸಾಯಲು ಯತ್ನ

Share :

14-07-2023

    ಡಿಸೇಲ್​ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

    ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ನೊಂದು ಕಲಬುರಗಿ ಜಿಲ್ಲೆಯ ಡ್ರೈವರ್​

    ಡ್ರೈವರ್​ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಡಿಪೋಗೆ ಆಗಮಿಸಿದ KKRTC ಡಿಸಿ

ಕಲಬುರಗಿ: ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ನಗರದ ಡಿಪೋ ನಂಬರ್ 2ನಲ್ಲಿ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಡ್ರೈವರ್ ಬೀರಣ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ಬೀರಣ್ಣ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿಯಾಗಿದ್ದು, ಡಿಪೋ ಮ್ಯಾನೇಜರ್ ಮಂಜುನಾಥ್ ಕಲಬುರಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಸಿಂಗಲ್ ಹೋಗಿ ಬರಲು ಸೂಚನೆ ನೀಡಿದ್ದಾನೆ.  ಆದರೆ ಬೀರಣ್ಣನಿಗೆ 8 ಸಿಂಗಲ್ ಹೋಗಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಮರುದಿನ ಡ್ಯೂಟಿ ಕೊಡದೆ ಡಿಪೋ ಮ್ಯಾನೇಜರ್ ಮಂಜುನಾಥ್ ಕಿರುಕುಳ ನೀಡಿದ್ದಾನೆ.

ಇದರಿಂದ ನೊಂದು ಡ್ರೈವರ್ ಬೀರಣ್ಣ ಮೈಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಡಿಪೋದಲ್ಲಿನ ಡಿಸೇಲ್ ಬಂಕ್ ಗನ್‌ ನಿಂದ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಂದಹಾಗೆಯೇ ಬೀರಣ್ಣ ಡ್ರೈವರ್ ಕಮ್ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಡ್ರೈವರ್​ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೆ ಕೆಕೆಆರ್​​ಟಿಸಿ ಡಿಸಿ ಡಿಪೋಗೆ ಆಗಮಿಸಿದ್ದಾರೆ. ಬಳಿಕ ಕೆಕೆಆರ್ ಟಿಸಿ, ಡಿಸಿ ಸಿದ್ದಪ್ಪಾ ಗಂಗಾಧರ್ ರಿಂದ ಘಟನೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಪೋ ಮ್ಯಾನೇಜರ್​ ಕಿರುಕುಳ; ಮೈಮೇಲೆ ಡೀಸೆಲ್​​ ಸುರಿದುಕೊಂಡು ಸಾಯಲು ಯತ್ನ

https://newsfirstlive.com/wp-content/uploads/2023/07/Driver-Suicide-Attempt.jpg

Load More