18 ತಿಂಗಳ ಬಳಿಕ ಏಕದಿನ ಪಂದ್ಯಕ್ಕೆ ಆರ್ ಅಶ್ವಿನ್ಗೆ ಸ್ಥಾನ..?
ಭಾರತದ ಪಿಚ್ಗಳಲ್ಲಿ ಅಶ್ವಿನ್ ಅಪಾಯಕಾರಿ, ಅದಕ್ಕೆ ಚಾನ್ಸ್
ಅಶ್ವಿನ್ರನ್ನು ಕೈ ಬಿಟ್ಟು ದೊಡ್ಡ ತಪ್ಪು ಮಾಡಿತಾ ಆಯ್ಕೆ ಸಮಿತಿ
ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಏಕದಿನ ವಿಶ್ವಕಪ್ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಅನುಭವಿ ಸ್ಪಿನ್ನರ್ನನ್ನ, ವೈಟ್ಬಾಲ್ ಕ್ರಿಕೆಟ್ನಿಂದ ಕಡೆಗಣಿಸಲಾಗಿತ್ತು. ಆದ್ರೀಗ ಅಶ್ವಿನ್, ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ಏಕದಿನ ತಂಡಕ್ಕೆ ವಾಪಸಾಗ್ತಿದ್ದಾರೆ.
ಆಫ್ ಸ್ಪಿನ್, ಸೈಡ್ ಸ್ಪಿನ್, ಆರ್ಮ್ ಬಾಲ್, ಕೇರಂ ಬಾಲ್, ಟಾಪ್ ಸ್ಪಿನ್ ಹೀಗೆ ಒಂದೇ ಓವರ್ನಲ್ಲಿ ವೆರೈಟಿ ವೇರಿಯೇಷನ್ಸ್ ಹೊಂದಿರೋ ಏಕೈಕ ಸ್ಪಿನ್ನರ್ ಅದು ಅಶ್ವಿನ್. ಕಳೆದೊಂದು ವರ್ಷದಿಂದ ಅಶ್ವಿನ್ ಏಕದಿನ ತಂಡದಿಂದ ದೂರ ಉಳಿದಿದ್ದರು. ಆದ್ರೀಗ ಏಕದಿನ ವಿಶ್ವಕಪ್ ಹತ್ತಿರವಾಗ್ತಿದಂತೆ ಟೀಮ್ ಇಂಡಿಯಾ ಆಯ್ಕೆ ಸಮಿತಿ, ಅಶ್ವಿನ್ ಮೊರೆ ಹೋಗಿದೆ.
ಲೇಟ್ ಆದ್ರೂ ಲೆಟೆಸ್ಟ್ ಆಗಿ, ಆಯ್ಕೆ ಸಮಿತಿ ಎಚ್ಚೆತ್ತುಕೊಂಡಿದೆ. ಅಶ್ವಿನ್ ಸಾಮರ್ಥ್ಯ ಏನು ಅಂತ ಅಗರ್ಕರ್ ಌಂಡ್ ಟೀಮ್ಗೆ ಗೊತ್ತಾಗಿದೆ. ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿದ್ರೆ, ತಂಡಕ್ಕಾಗೋ ಲಾಭ ಏನು ಅನ್ನೋದು, ಕ್ಲಿಯರ್ ಆಗಿ ಅರ್ಥವಾಗಿದೆ. ಹಾಗಾಗೇ ಅಶ್ವಿನ್ರನ್ನ ತವರಿನಲ್ಲಿ ನಡೆಯೋ ಏಕದಿನ ವಿಶ್ವಕಪ್ ಆಡಿಸಲು, ಸೆಲೆಕ್ಟರ್ಸ್ ಮುಂದಾಗಿದ್ದಾರೆ.
ತಂಡದಲ್ಲಿ ಸಾಕಷ್ಟು ಯುವ ಸ್ಪಿನ್ನರ್ಗಳಿದ್ದಾರೆ. ಆದ್ರೂ ಸೆಲೆಕ್ಷನ್ ಕಮಿಟಿ, ಅಶ್ವಿನ್ ಬೇಕೇ ಬೇಕು ಅಂತಿರೋದಕ್ಕೆ, ಹಲವು ಕಾರಣಗಳಿವೆ.
ಕಾರಣ ನಂ.1- ಬ್ಯಾಕ್ಅಪ್ ಸ್ಪಿನ್ನರ್ ಇಲ್ಲ..!
ಸದ್ಯ ಟೀಮ್ ಇಂಡಿಯಾದಲ್ಲಿ, ಬ್ಯಾಕ್ಅಪ್ ಸ್ಪಿನ್ನರ್ಗಳ ಕೊರತೆ ಎದ್ದು ಕಾಡ್ತಿದೆ. ವಾಷಿಂಗ್ಟನ್ ಸುಂದರ್, ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯುವ ಆಫ್ಸ್ಪಿನ್ನರ್ ಬೆಸ್ಟ್ ಆಪ್ಶನ್ ಆದ್ರೂ, ವಿಶ್ವಕಪ್ ಪ್ಲಾನ್ನಲ್ಲಿ ಇಲ್ಲ. ಹಾಗಾಗಿ ಅಶ್ವಿನ್ಗಿಂತ ಮತ್ತೋರ್ವ ಅನುಭವಿ ಹುಡುಕಿದ್ರೂ ಸಿಗೋದಿಲ್ಲ ಅನ್ನೋದು, ಆಯ್ಕೆಗಾರರಿಗೆ ಗೊತ್ತಾಗಿದೆ.
ಕಾರಣ ನಂ.2- ಒಳ್ಳೆ ಸ್ಪಿನ್ನರ್ ಇಲ್ಲ- ಕ್ಯಾಪ್ಟನ್-ಕೋಚ್ ಹತಾಶೆ..!
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಮುಂದೆ, ಸ್ಪಿನ್ ಆಪ್ಶನ್ಗಳಿಲ್ಲ. ಈಗಾಗಲೇ ICC ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾಕ್ಕೆ, ಓರ್ವ ಮ್ಯಾಚ್ ವಿನ್ನಿಂಗ್ ಸ್ಪಿನ್ನರ್ ಬೇಕೇ ಬೇಕು. ಹಾಗಾಗಿ ಏಕದಿನ ಕ್ರಿಕೆಟ್ನಲ್ಲಿ 5ಕ್ಕಿಂತ ಕಡಿಮೆ ಎಕಾನಮಿ ಹೊಂದಿರುವ ಅಶ್ವಿನ್, ಕ್ಯಾಪ್ಟನ್ ಮತ್ತು ಕೋಚ್ರ ಉತ್ತಮ ಆಯ್ಕೆಯಾಗಲಿದ್ದಾರೆ.
ಕಾರಣ ನಂ.3- ಆಲ್ರೌಂಡರ್ಗಳ ಕೊರತೆ..!
ಸದ್ಯ ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ಗಳಿಗಿಂತ, ಹೆಚ್ಚು ಬ್ಯಾಟ್ಸ್ಮನ್ಗಳು ತುಂಬಿದ್ದಾರೆ. 2011ರಲ್ಲಿ ಟೀಮ್ ಇಂಡಿಯಾದಲ್ಲಿ ಸಚಿನ್, ಸೆಹ್ವಾಗ್, ಯುವರಾಜ್, ಯೂಸುಫ್ ಪಠಾಣ್, ಬೌಲಿಂಗ್ ಮಾಡ್ತಿದ್ರು. ಆದ್ರೆ, ಈಗಿರೋ ತಂಡದಲ್ಲಿ ಟಾಪ್ ಫೈವ್ ಬ್ಯಾಟರ್ಸ್, ಬೌಲಿಂಗ್ ಮಾಡಲ್ಲ. ಹಾರ್ದಿಕ್ ಪಾಂಡ್ಯ, ಜಡೇಜಾ, ಅಕ್ಷರ್ ಪಟೇಲ್ರಂತ ಆಲ್ರೌಂಡರ್ಗಳು, ತಂಡದಲ್ಲಿದ್ದಾರೆ ನಿಜ. ಆದ್ರೆ ಇವಱರು ಎಡಗೈ ಬ್ಯಾಟ್ಸ್ಮನ್ಗಳಿಗೆ, ಟಫ್ ಫೈಟ್ ನೀಡ್ತಿಲ್ಲ. ಸೋ, ಎಡಗೈ ಬ್ಯಾಟ್ಸ್ಮನ್ಗಳ ಎದುರು, ಅಶ್ವಿನ್ ಅಸ್ತ್ರ ಪ್ರಯೋಗಿಸೋಕೆ ಸೆಲೆಕ್ಟರ್ಸ್ ಪ್ಲಾನ್ ಮಾಡ್ತಿದ್ದಾರೆ.
ಕಾರಣ ನಂ.4- ಸ್ಪಿನ್ ಫ್ರೆಂಡ್ಲಿ ಪಿಚ್..!
ಅಶ್ವಿನ್ ವರ್ಲ್ಡ್ಕಪ್ ಪ್ಲಾನ್ನಲ್ಲಿರೋಕೆ ಮತ್ತೊಂದು ಕಾರಣ ಅಂದ್ರೆ, ಭಾರತದ ಪಿಚ್ಗಳು. 9 ಗ್ರೌಂಡ್ಗಳ ಪೈಕಿ ಚೆನ್ನೈ, ಕೊಲ್ಕತ್ತಾ, ಮುಂಬೈ, ಅಹ್ಮದಾಬಾದ್ ಮತ್ತು ಲಕ್ನೋ ಪಿಚ್ಗಳು, ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತೆ. ಹೀಗಿರುವಾಗ ಕ್ಯಾಪ್ಟನ್ ರೋಹಿತ್ ಶರ್ಮಾ, ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಮಂದಿ ಸ್ಪಿನ್ನರ್ಗಳನ್ನ ಆಡಿಸೋ ಸಾಧ್ಯತೆ ಹೆಚ್ಚಿದೆ. ಅಶ್ವಿನ್ ಬೌಲಿಂಗ್ನಲ್ಲಿರೋ ವೆರೈಟಿ, ತಂಡಕ್ಕೆ ವರದಾನವಾಗಲಿದೆ.
ಕಾರಣ ನಂ.5- ಅಟ್ಯಾಕಿಂಗ್ ಸ್ಪಿನ್ನರ್ ಬೇಕು..!
2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ತಂಡದಲ್ಲಿ, ಅಶ್ವಿನ್ ಕಾಣಿಸಿಕೊಂಡಿದ್ರು. ಐಸಿಸಿಯ ಮಹತ್ವದ ಟೂರ್ನಿಗಳಲ್ಲಿ ಆಡಿರುವ ಅನುಭವ, ಅಶ್ವಿನ್ಗಿದೆ. ಅಲ್ಲದೇ, ಹೊಸ ಬಾಲ್ನಲ್ಲಿ ಬೌಲಿಂಗ್ ಮತ್ತು ಬೌಲಿಂಗ್ ಅಟ್ಯಾಕ್ ಓಪನ್ ಮಾಡೋ ಸಾಮರ್ಥ್ಯ ಕೂಡ ಹೊಂದಿದ್ದಾರೆ.
ಈ ಹಿಂದೆ ಮಾಡಿದ್ದ ತಪ್ಪನ್ನ ತಿದ್ದಿಕೊಳ್ಳಲು ಮುಂದಾಗಿರುವ ಬಿಸಿಸಿಐ ಮತ್ತು ಆಯ್ಕೆ ಸಮಿತಿ, ಒಂದೊಳ್ಳೆ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ 10 ವರ್ಷಗಳ ಬಳಿಕ, ಐಸಿಸಿ ಟ್ರೋಫಿ ಗೆಲ್ಲೋಕೆ ಹೊರಟಿದೆ. ಅಜಿತ್ ಅಗರ್ಕರ್ ಌಂಡ್ ಟೀಮ್ ಪ್ಲಾನ್ ವರ್ಕ್ಔಟ್ ಆಗುತ್ತಾ ಕಾದುನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ