Advertisment

ಮೋದಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ.. ಇಂದು ಗಂಗೆಯ ದಡದಲ್ಲಿ ಬೆಳಗಲಿವೆ 12 ಲಕ್ಷ ದೀಪಗಳು; ಏನಿದರ ವಿಶೇಷ?

author-image
Bheemappa
Updated On
ಮೋದಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ.. ಇಂದು ಗಂಗೆಯ ದಡದಲ್ಲಿ ಬೆಳಗಲಿವೆ 12 ಲಕ್ಷ ದೀಪಗಳು; ಏನಿದರ ವಿಶೇಷ?
Advertisment
  • ದೇವ್ ದೀಪಾವಳಿ ಅಲ್ಲಿ ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
  • ಈ ಹಬ್ಬಕ್ಕಾಗಿ ದೇಶ ವಿದೇಶಗಳಿಂದ ಲಕ್ಷಂತಾರ ಭಕ್ತರು ಬರುತ್ತಾರೆ
  • ನಗರದ ಪ್ರತಿ ರಸ್ತೆಗೆ ವಿದ್ಯುತ್​ ದೀಪಗಳಿಂದ ಅದ್ಧೂರಿ ಅಲಂಕಾರ

ಲಕ್ನೋ: ದೇವ್ ದಿವಾಳಿ ಅಥವಾ ದೇವ್ ದೀಪಾವಳಿ ಹಬ್ಬವನ್ನು ಇಂದು ವಾರಾಣಸಿಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಗಂಗಾ ನದಿಯ ತಟದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಲು ವಿಶೇಷ ತಯಾರಿ ನಡೆಯುತ್ತಿದೆ. ಇನ್ನು ನಗರದ ಪ್ರತಿ ರಸ್ತೆಯು ವಿದ್ಯುತ್​ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.

Advertisment

publive-image

ಇಂದು ವಾರಾಣಸಿಯಲ್ಲಿ ಗಂಗಾ ನದಿಯ ತಟದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸುವ ಭರ್ಜರಿ ತಯಾರಿ ನಡೆಯುತ್ತಿದೆ. ವಾರಾಣಸಿಯು ಪ್ರಧಾನಿ ಮೋದಿಯವರ ಲೋಕಸಭೆ ಕ್ಷೇತ್ರವಾಗಿದೆ. ಸದ್ಯ ದೇವ್ ದೀಪಾವಳಿ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರತಿವರ್ಷ ಬರುತ್ತಿದ್ದು ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಶ್ರೀ ವಿಶ್ವನಾಥ ಧಾಮದ ಗಂಗಾ ದ್ವಾರ ಮತ್ತು ಚೇತ್ಸಿಂಗ್ ಘಾಟ್​ಗಳಲ್ಲಿ ಲೇಸರ್ ಮತ್ತು ಕ್ರ್ಯಾಕರ್ ಶೋಗಳನ್ನು ಆಯೋಜಿಸಲಾಗಿದ್ದು, ದೇವ್ ದೀಪಾವಳಿ ಉತ್ಸವಕ್ಕೆ ಆಧುನಿಕ ಸ್ಪರ್ಶ ನೀಡಲಾಗ್ತಿದೆ.

publive-image

ಇನ್ನು ಚೇತ್ ಸಿಂಗ್ ಘಾಟ್​ನಲ್ಲಿ ಹೊಲೊಗ್ರಾಫಿಕ್ ಪ್ರೊಜೆಕ್ಷನ್‌ ಒಳಗೊಂಡ ಶಿವ ಹಾಗೂ ಕಾಶಿಯ ನಡುವಿನ ಪೌರಾಣಿಕ ಸಂಬಂಧದ 30 ನಮಿಷಗಳ ಪ್ರದರ್ಶನ ಆಯೋಜಿಸಲಾಗಿದೆ. ಗಂಗಾನದಿ ತೀರದ 85 ಘಾಟ್​ಗಳಲ್ಲಿ 12 ಲಕ್ಷ ದೀಪ ಬೆಳಗಿಸಲು ಪ್ರವಾಸೋದ್ಯಮ ಇಲಾಖೆ ತಯಾರಿ ನಡೆಸಿದೆ. ಇನ್ನು ದೇವ್ ದೀಪಾವಳಿ ಆಚರಿಸುವ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಶಿವ ಪರಮಾತ್ಮನು ರಾಕ್ಷಸ ತ್ರಿಪುರಾಸುರನ ವಿರುದ್ಧ ವಿಜಯ ಸಾಧಿಸುತ್ತಾನೆ. ಹೀಗಾಗಿ ಈ ಹಬ್ಬವನ್ನು ತ್ರಿಪುರಿ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಜೊತೆಗೆ ಭಗವಾನ್ ವಿಷ್ಣುವು ಮತ್ಸ್ಯ ರೂಪ ಪಡೆದ ದಿನವನ್ನು ಕೂಡ ಇದು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment