newsfirstkannada.com

‘ತಾಕತ್ತಿದ್ದರೆ ಬನ್ನಿ.. ಲಾರಿ ಹತ್ತಿಸಿ..’ ದೇವದುರ್ಗ ಶಾಸಕಿ ಮೇಲೆ ಅಕ್ರಮ ಮರಳು ಲಾರಿ ಹತ್ತಿಸಲು ಯತ್ನಿಸಿದ ಆರೋಪ..!

Share :

23-06-2023

    ಅಕ್ರಮ ಮರಳು ಮಾಫಿಯಾ ವಿರುದ್ಧ ಸಿಡಿದೆದ್ದ ಕರೆಮ್ಮ

    ರಾತ್ರೋರಾತ್ರಿ ಫೇಸ್​ಬುಕ್ ಲೈವ್ ಬಂದು ಎಚ್ಚರಿಕೆ

    ಪೊಲೀಸ್ ಅಧಿಕಾರಿಗಳ ವಿರುದ್ಧವೂ ಶಾಸಕಿ ಕಿಡಿ

ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರ ಕಾರನ್ನು ಅಕ್ರಮ ಮರಳು ದಂಧೆಕೋರರು ಅಡ್ಡಗಟ್ಟಿ, ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ನಿನ್ನೆ ರಾತ್ರಿ ಖಾಸಗಿ ಕಾರ್ಯಕ್ರಮ ಮುಗಿಸಿ ವಾಸಪ್ ತೆರಳುತ್ತಿದ್ದಾಗ ನನ್ನ ಕಾರನ್ನು ಮರಳು ಮಾಫಿಯಾದವರು ಅಡ್ಡಗಟ್ಟಿದ್ದಾರೆ ಎಂದು ಶಾಸಕಿ ಆರೋಪಿಸಿದ್ದಾಳೆ.

ಅಷ್ಟಕ್ಕೂ ಸುಮ್ಮನಾಗದ ಶಾಸಕಿ, ರಾತ್ರಿ ಫೇಸ್​ಬುಕ್​ನಲ್ಲಿ ಲೈವ್ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಲಾರಿ ಹತ್ತಿಸುವವರು ಬನ್ನಿ ನೋಡೋಣ. ತಾಖತ್ತಿದ್ದರೆ ಬನ್ನಿ ಇಲ್ಲಿ, ಏರಿಂಡಿಲಿ ನಾನು ಇದ್ದೀನಿ. ಯಾರು ಲಾರಿ ಹತ್ತಿಸುತ್ತೀರೋ ಬನ್ನಿ, ನಾನೊಬ್ಬ ಶಾಸಕಿಯಾಗಿ ಬಂದಿದ್ದೇನೆ. ನಾನು ಬೆಳಗಿನ ಜಾವದವರೆಗೂ ಇಲ್ಲೇ ಕಾಯುತ್ತೇನೆ, ಯಾರು ಬೇಕಾದರು ಬನ್ನಿ ಎಂದು ಮರಳು ಕಳ್ಳರಿಗೆ ಸವಾಲ್ ಹಾಕಿದ್ದಾರೆ.

ಮಾತ್ರವಲ್ಲ ಬೆಳಗಿನ ಜಾವದವರೆಗೂ ನಡು ರಸ್ತೆಯಲ್ಲೇ ಹೋರಾಟ ಮಾಡುತ್ತೇನೆ. ಘಟನಾ ಸ್ಥಳಕ್ಕೆ ಎಸ್.ಪಿ ಬರಬೇಕು ಎಂದು ಪಟ್ಟು ಹಿಡಿದು ಕೂತಿದ್ದರು. ಜೊತೆಗೆ ಪೊಲೀಸರು ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತಾಕತ್ತಿದ್ದರೆ ಬನ್ನಿ.. ಲಾರಿ ಹತ್ತಿಸಿ..’ ದೇವದುರ್ಗ ಶಾಸಕಿ ಮೇಲೆ ಅಕ್ರಮ ಮರಳು ಲಾರಿ ಹತ್ತಿಸಲು ಯತ್ನಿಸಿದ ಆರೋಪ..!

https://newsfirstlive.com/wp-content/uploads/2023/06/KERAMMA23062023.jpg

Load More