newsfirstkannada.com

×

ಕಲ್ಕಿ ದಾಖಲೆ ಕುಟ್ಟಿ ಪುಡಿ ಮಾಡುತ್ತಾ ಜ್ಯೂ. ಎನ್​ಟಿಆರ್​ ನಟನೆಯ ದೇವರ; ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ದಾಟಿದೆ ಗೊತ್ತಾ..?

Share :

Published September 28, 2024 at 9:01pm

    ಬಾಕ್ಸ್ ಆಫೀಸ್​ನಲ್ಲಿ ಮುಂದುವರಿದ ದೇವರ ಸಿನಿಮಾ ಅಬ್ಬರ

    ಮೊದಲ ದಿನ ಜ್ಯೂ. ಎನ್​ಟಿಆರ್​ ನಟಿಸಿದ ಸಿನಿಮಾದ ಗಳಿಕೆ ಎಷ್ಟು

    ಕಲ್ಕಿ ಸಿನಿಮಾದ ಗಳಿಕೆಯನ್ನೂ ಮೀರಿಸಲಿದೆಯಾ ದೇವರ ಸಿನಿಮಾ?

ಜ್ಯೂನಿಯರ್ ಎನ್​ಟಿಆರ್​ ಅವರ ದೇವರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಜ್ಯೂನಿಯರ್ ಎನ್​ಟಿಆರ್, ಜಾಹ್ನವಿ ಕಪೂರ್​ ಹಾಗೂ ಸೈಫ್ ಅಲಿಖಾನ್ ನಟಿಸಿರು ಈ ಸಿನಿಮಾದ ಕಲೆಕ್ಷನ್ ಎಂತವರನ್ನೂ ಕೂಡ ಗಾಬರಿಗೊಳಿಸುವಂತಿದೆ.ಮೊದಲ ದಿನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್​ನಲ್ಲಿ 172 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ದೊಡ್ಡ ಸದ್ದು ಮಾಡಿದೆ. ಇವು ಸಿನಿಮಾ ತಂಡದ ಭಾಗವಾದ ಕೊರಾಟಲಾ ಸಿವಾ ಅವರು ನೀಡಿದ ಅಂಕಿ ಅಂಶಗಳು.

ಇದನ್ನೂ ಓದಿ: BIGG BOSS 11ಕ್ಕೆ ಬರ್ತಿದ್ದಾರೆ ಸ್ಯಾಂಡಲ್​ವುಡ್​ ಹಾಟ್​ ಬ್ಯೂಟಿ; ಇನ್ಯಾವ ಸ್ಟಾರ್ಸ್​ಗಳು ಎಂಟ್ರಿ?

ಅವರು ಹೇಳುವ ಪ್ರಕಾರ ಮೊದಲ ದಿನದಲ್ಲಿ ದೇವರ ಸಿನಿಮಾ ವಿಶ್ವದಾದ್ಯಂತ 172 ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಶುಕ್ರವಾರ ಒಂದೇ ದಿನ ಈ ಸಿನಿಮಾ ಗಳಿಸಿದ ದುಡ್ಡು ಬರೋಬ್ಬರಿ 70 ಕೋಟಿ ರೂಪಾಯಿ. ಸ್ಯಾಕ್​ನಿಲ್.ಕಾನ್​ ಹೇಳುವ ಪ್ರಕಾರ ಮೊದಲ ದಿನ ಈ ಸಿನಿಮಾ ಗಳಿಸಿದ ದುಡ್ಡು 77 ಕೋಟಿ ರೂಪಾಯಿ ಗಳಿಸಿದೆ. ತೆಲಗುವಿನಲ್ಲಿ 68.6ಕೋಟಿ ರೂಪಾಯಿ, ಹಿಂದಿಯಲ್ಲಿ 7 ಕೋಟಿ ರೂಪಾಯಿ, ಕನ್ನಡದಲ್ಲಿ 30 ಲಕ್ಷ ರೂಪಾಯಿ, ತಮಿಳಿನಲ್ಲಿ 80 ಲಕ್ಷ ರೂಪಾಯಿ ಮಲಯಾಳಂನಲ್ಲಿ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇವರ್ ಪಾರ್ಟ್​ 1 ಸಿನಿಮಾ ಒಟ್ಟಾರೆಯಾಗಿ 79.56 ಕೋಟಿ ರೂಪಾಯಿ ಬಾಕ್ಸ್​ ಆಫೀಸ್​ನಲ್ಲಿ ದೋಚಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​.. ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗುತ್ತಾ?

ಈ ವರ್ಷದಲ್ಲಿ ಮೊದಲ ದಿನವೇ ಅತಿಹೆಚ್ಚು ದುಡ್ಡು ಗಳಿಸಿದ ಸಿನಿಮಾ ದೇವರ. ಕೆಲವು ತಿಂಗಳುಗಳ ಹಿಂದೆ ಬಂದ ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನ ಗಳಿಸಿದ ಹಣ 95 ಕೋಟಿ ರೂಪಾಯಿ ಕಲ್ಕಿ 2898ಎಡಿ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಗಳಿಸಿದ ಹಣ 191.5ಕೋಟಿ ರೂಪಾಯಿ. ಇದು ವಿಶ್ವಾದ್ಯಂತ ಒಂದೇ ದಿನದಲ್ಲಿ ಅತಿಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿ ಪಡೆಯಿತು. ಸದ್ಯ ದೇವರು ಸಿನಿಮಾ ಮುನ್ನುಗ್ಗುತ್ತಿರುವ ವೇಗ ನೋಡಿದರೆ ಈ ವರ್ಷ ಅತಿಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲ್ಕಿ ದಾಖಲೆ ಕುಟ್ಟಿ ಪುಡಿ ಮಾಡುತ್ತಾ ಜ್ಯೂ. ಎನ್​ಟಿಆರ್​ ನಟನೆಯ ದೇವರ; ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ದಾಟಿದೆ ಗೊತ್ತಾ..?

https://newsfirstlive.com/wp-content/uploads/2024/09/Devara-JrNTR.jpg

Load More