newsfirstkannada.com

ಶರದ್ ಪವಾರ್ ಪರದಾಟ: ಅಜಿತ್ ಪವಾರ್ ಸೇರ್ಪಡೆಗೆ ಫಡ್ನವೀಸ್ ಅಸಮಾಧಾನ

Share :

04-07-2023

    ಎನ್​ಸಿಪಿ ಛಿದ್ರ.. ಪಕ್ಷ ಉಳಿಸಲು ಪವಾರ್ ಪರದಾಟ!

    ಅಜಿತ್ ಪಕ್ಷ ತೊರೆದಿದ್ದು ನೋವಾಗಿಲ್ಲ ಎಂದ ಶರದ್

    ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಮೇಲಾಟ

ಮಹಾರಾಷ್ಟ್ರದಲ್ಲಿ ರಾಜಕೀಯ ಮೇಲಾಟ ಮುಂದುವರಿದಿದೆ. ಚಿಕ್ಕಪ್ಪ, ಸಹೋದರಿಯ ವಿರುದ್ಧವೇ ಅಜಿತ್ ಪವಾರ್ ಬಂಡಾಯ ಸಾರಿದ್ದು ಶರದ್ ಪವಾರ್ ಸುತ್ತವೇ ಸಂಶಯದ ಹುತ್ತ ಬೆಳೆದಿದೆ. ಪವಾರ್ ಎನ್​ಸಿಪಿ ತೊರೆದಿದ್ದರಿಂದ ಶಿವಸೇನೆಗೆ ಆದ ಗತಿಯೇ ಎನ್​ಸಿಪಿಗೆ ಬರುವ ಲಕ್ಷಣಗಳು ಗೋಚರಿಸ್ತಿವೆ. ಮಹಾರಾಷ್ಟ್ರ ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ ಮಿಂಚಿನ ಸಂಚಲನ ಸೃಷ್ಟಿಯಾಗಿದೆ. ಎನ್​ಸಿಪಿ ನಾಯಕ ಅಜಿತ್ ಪವಾರ್, ಏಕ್​ನಾಥ್ ಶಿಂಧೆ ಬಣ ಸೇರ್ಪಡೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಮೇಲಾಟ
ಎನ್​ಸಿಪಿ ಉಳಿಸಲು ಶರದ್ ಪವಾರ್ ಶತಪ್ರಯತ್ನ!

ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ಮಹಾರಾಷ್ಟ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ಎನ್‌ಸಿಪಿ ತೊರೆದು ಶಿಂಧೆ ಬಣ ಸೇರಿರುವ ಅಜಿತ್ ಪವಾರ್ ತಮ್ಮ ಜೊತೆ 40 ಶಾಸಕರ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ. ಆದ್ರೆ ಎಷ್ಟು ಮಂದಿ ಶಾಸಕರಿದ್ದಾರೆ ಅನ್ನೋದು ಇನ್ನೂ ಅಸ್ಪಷ್ಟವಾಗಿದೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಬಿಜೆಪಿ ಶಾಕ್ ನೀಡಿದ್ದು ಹಲವು ದಶಕಗಳಿಂದ ಕಟ್ಟಿ ಬೆಳೆಸಿದ್ದ ಪಕ್ಷ ಒಡೆದಿದ್ದು, ಅದನ್ನು ಮತ್ತೆ ಕಟ್ಟುವ ಸವಾಲು ಎದುರಾಗಿದೆ.

ಅಜಿತ್ ಪಕ್ಷ ತೊರೆದಿದ್ದು ನೋವಾಗಿಲ್ಲ ಎಂದ ಶರದ್ ಪವಾರ್!

ಅಜಿತ್ ಪವಾರ್ ಸೇರಿ 9 ಮಂದಿ ಪಕ್ಷ ತೊರೆದಿದ್ದು ನನಗೆ ನೋವಾಗಿಲ್ಲ ಅಂತ ಶರದ್ ಪವಾರ್ ಹೇಳಿದ್ದಾರೆ. ಬಿಜೆಪಿಯ ಕುತಂತ್ರಕ್ಕೆ ನಮ್ಮಲ್ಲಿ ಕೆಲವರು ಬಲಿಯಾಗಿದ್ದಾರೆ ಅಂತ ಕಿಡಿಕಾರಿದ್ದಾರೆ. ಇದೇ ವೇಳೆ ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಅಂತ 82 ವರ್ಷದ ಹಿರಿಯ ರಾಜಕಾರಣಿ ಶರದ್ ಪವಾರ್ ಜನರಲ್ಲಿ ಮನವಿ ಮಾಡಿದ್ದಾರೆ.

ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ!

ಇನ್ನು ಅಜಿತ್ ಪವಾರ್ ಸೇರಿ 9 ಶಾಸಕರ ವಿರುದ್ಧ ಎನ್​​ಸಿಪಿ ಅನರ್ಹತೆ ಅಸ್ತ್ರ ಬಿಟ್ಟಿದೆ. ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್​​ಗೆ ಅನರ್ಹತೆ ಅರ್ಜಿ ಸಲ್ಲಿಸಿದೆ. ಎಲ್ಲಾ ಜಿಲ್ಲೆಗಳ ಪಕ್ಷದ ಕಾರ್ಯಕರ್ತರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್​ರೊಂದಿಗೆ ದೃಢವಾಗಿ ನಿಂತಿದ್ದಾರೆ ಅಂತ ಪಕ್ಷ ಚುನಾವಣಾ ಆಯೋಗಕ್ಕೆ ತಿಳಿಸಿದೆ.

ಅಜಿತ್ ಪವಾರ್ ಸೇರ್ಪಡೆಗೆ ಫಡ್ನವೀಸ್ ಅಸಮಾಧಾನ!

ಎನ್‌ಸಿಪಿಯ ಅಜಿತ್ ಪವಾರ್​ರನ್ನು ನೂತನ ಡಿಸಿಎಂ ಮಾಡಿದ್ದಕ್ಕೆ ದೇವೇಂದ್ರ ಫಡ್ನವೀಸ್ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಫಡ್ನವೀಸ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅಂತಾನೂ ಹೇಳಲಾಗ್ತಿದೆ.. ಶೀಘ್ರದಲ್ಲೇ ಫಡ್ನವೀಸ್ ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಮಹಾರಾಷ್ಟ್ರ ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಮಹಾರಾಷ್ಟ್ರಕ್ಕೆ ಇದು ಕರಾಳ ದಿನ ಎಂದ ಸಂಜಯ್ ರಾವತ್

ಮಹಾರಾಷ್ಟ್ರದಲ್ಲಿ ಡಿಸಿಎಂ ಆಗಿ ಅಜಿತ್ ಪವಾರ್ ಅಧಿಕಾರ ಸ್ವೀಕರಿಸಿದ್ದು ಕರಾಳ ದಿನ ಅಂತ ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಅಜಿತ್ ಪವಾರ್ ಇಂದು ಡಿಸಿಎಂ ಆಗಿದ್ದಾರೆ, ನಾಳೆ ಸಿಎಂ ಸ್ಥಾನವನ್ನೂ ಬದಲಾವಣೆ ಮಾಡಲಿದ್ದಾರೆಂದು ಸಿಎಂ ಶಿಂಧೆಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಶೀಘ್ರದಲ್ಲೇ ಸಿಎಂ ಸ್ಥಾನದಿಂದ ಏಕ್​ನಾಥ್ ಶಿಂಧೆ ಕೆಳಗಿಳಿಯಲಿದ್ದಾರೆ. ಶಿವಸೇನೆ ಒಡೆಯಲು ಕಾರಣರಾದ ಶಿಂಧೆ ಮತ್ತು 16 ಶಾಸಕರು ಶೀಘ್ರವೇ ಅನರ್ಹಗೊಳ್ಳಲಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಜನ ಸಹಿಸುವುದಿಲ್ಲ ಗುಡುಗಿದ್ದಾರೆ. ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಎನ್​ಸಿಪಿ ಭವಿಷ್ಯ ಸದ್ಯ ಮಂಕಾದಂತಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಮೈತ್ರಿಕೂಟ ರಚನೆ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದ್ದ ಶರದ್ ಪವಾರ್​​ಗೆ ತೀವ್ರ ಹಿನ್ನಡೆಯಾದಂತಾಗಿದೆ.. ಮತ್ತೊಂದೆಡೆ ಫಡ್ನವೀಸ್ ಕೂಡ ಅಸಮಾಧಾನಗೊಂಡಿದ್ದು ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶರದ್ ಪವಾರ್ ಪರದಾಟ: ಅಜಿತ್ ಪವಾರ್ ಸೇರ್ಪಡೆಗೆ ಫಡ್ನವೀಸ್ ಅಸಮಾಧಾನ

https://newsfirstlive.com/wp-content/uploads/2023/07/devendra.jpg

Load More