/newsfirstlive-kannada/media/post_attachments/wp-content/uploads/2024/12/Devendra-Fadnavis-Maharashtra-CM-1.jpg)
ಮುಂಬೈ: ಮಹಾರಾಷ್ಟ್ರದ ನೂತನ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದಾರೆ. ಕಳೆದ ನವೆಂಬರ್ 23ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ನಾಳೆ ಮುಂಬೈನ ಅಜಾದ್ ಮೈದಾನದಲ್ಲಿ ಫಡ್ನವಿಸ್ ಅವರ ಪಟ್ಟಾಭಿಷೇಕ ಸಮಾರಂಭ ನಿಗಧಿಯಾಗಿದೆ.
ಮಹಾರಾಷ್ಟ್ರ ನೂತನ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆ ಆಗಿದ್ದು ಅನಿರೀಕ್ಷಿತ ಬೆಳವಣಿಗೆಯಂತೂ ಅಲ್ಲ. ಬಿಜೆಪಿ ಎಲೆಕ್ಷನ್‌ನಲ್ಲಿ 132 ಸೀಟ್ ಗೆಲ್ಲುತ್ತಿದ್ದಂತೆ ದೇವೇಂದ್ರ ಫಡ್ನವಿಸ್ ಅವರೇ ಮುಖ್ಯಮಂತ್ರಿ ಆಗುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಮಹಾಯುತಿ ಮೈತ್ರಿಯ ಆಟಕ್ಕೆ ಮಣೆ ಹಾಕದ ಬಿಜೆಪಿ ಹೈಕಮಾಂಡ್ ತನ್ನದೇ ದಾಳ ಉರುಳಿಸಿದೆ.
/newsfirstlive-kannada/media/post_attachments/wp-content/uploads/2024/12/Devendra-Fadnavis-Maharashtra-CM.jpg)
ಮಹಾರಾಷ್ಟ್ರದ ಬಲಾಬಲ (288)
ಬಿಜೆಪಿ - 132
ಶಿವಸೇನೆ (ಶಿಂಧೆ) - 57
ಎನ್‌ಸಿಪಿ (ಅಜಿತ್ ಪವಾರ್) - 41
ಶಿವಸೇನೆ (ಉದ್ಧವ್ ಠಾಕ್ರೆ) - 20
ಕಾಂಗ್ರೆಸ್ - 16
ಎನ್‌ಸಿಪಿ (ಶರದ್ ಪವಾರ್) - 10
ಇತರೆ - 12
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 145 ಶಾಸಕರ ಬೆಂಬಲ ಬೇಕು. ಮ್ಯಾಜಿಕ್ ನಂಬರ್ ಸನಿಹದಲ್ಲಿರುವ ಬಿಜೆಪಿಗೆ ದೊಡ್ಡ ಪಕ್ಷಗಳ ಬೆಂಬಲದ ಅಗತ್ಯವಿಲ್ಲ. ಪಕ್ಷೇತರ ಶಾಸಕರು ಬೆಂಬಲಿಸಲು ಸಿದ್ಧರಿದ್ದರು. ಈ ಹಿನ್ನೆಲೆಯಲ್ಲಿ ನೂತನ ಸರ್ಕಾರ ರಚನೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತು.
ಇವತ್ತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹಾಯುತಿಯಿಂದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರನ್ನೇ ಅಂತಿಮಗೊಳಿಸಲಾಯಿತು. ನಿಯೋಜಿತ ಮುಖ್ಯಮಂತ್ರಿ ಏಕನಾಥ ಶಿಂಧೆ ಶಿವಸೇನೆ ಬಣ, ಅಜಿತ್ ಪವಾರ್ ಎನ್​ಸಿಪಿಯಿಂದಲೂ ಬೆಂಬಲ ನೀಡಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ದೇವೇಂದ್ರ ಫಡ್ನವಿಸ್ ಅವರು ನಾಳೆ 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇದನ್ನೂ ಓದಿ: Breaking: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ
ಸಿಎಂ ಆಯ್ಕೆ ಬಿಕ್ಕಟ್ಟು ಯಾಕೆ?
ಚುನಾವಣಾ ಫಲಿತಾಂಶ ಬಂದಾಗಿನಿಂದ ಮಹಾರಾಷ್ಟ್ರ ಸಿಎಂ ಯಾರೆಂಬ ಕುತೂಹಲ ಮನೆ ಮಾಡಿತ್ತು. ಬಿಜೆಪಿ, ಶಿವಸೇನೆ ಶಿಂಧೆ ಬಣ, ಎನ್​ಸಿಪಿ ಅಜಿತ್ ಪವಾರ್ ಬಣದ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಾಗಿತ್ತು. ಫಲಿತಾಂಶದ ಬಳಿಕ ಮತ್ತೊಮ್ಮೆ ಏಕನಾಥ ಶಿಂಧೆ ಅವರೇ ಸಿಎಂ ಆಗಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಅಜಿತ್​ ಪವಾರ್‌ಗೂ ಸಿಎಂ ಸ್ಥಾನ ಕೊಡಬೇಕೆಂಬ ಆಗ್ರಹವೂ ಇತ್ತು.
ಹಲವು ರಾಜಕೀಯ ಬೆಳವಣಿಗೆಗಳ ಬಳಿಕ ಸಿಎಂ ಸ್ಥಾನದಿಂದ ಏಕನಾಥ ಶಿಂಧೆ ಅವರೇ ದೂರ ಉಳಿದಿದ್ದರು. ತಾವು ಸಿಎಂ ಆಗೋದಿಲ್ಲ ಅಂತ ಸುದ್ದಿಗೋಷ್ಠಿಯಲ್ಲಿ ಶಿಂಧೆ ಅವರು ಘೋಷಿಸಿದ್ದರು. ಕೊನೆಗೆ ಶಿವಸೇನೆ, ಎನ್​ಸಿಪಿ ದೋಸ್ತಿ ಬಿಜೆಪಿಗೆ ಸಿಎಂ ಸ್ಥಾನವನ್ನ ಬಿಟ್ಟುಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us