newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌.. ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್‌ಗೂ ಸಂಕಷ್ಟ​; ಪೊಲೀಸರು ಕೇಳಿದ್ದೇನು?

Share :

Published July 5, 2024 at 3:31pm

Update July 5, 2024 at 3:32pm

  ಕೊಲೆ ಬಳಿಕ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಭಾಗಿ

  ಮಿಲನ ಪ್ರಕಾಶ್ ಅವರಿಂದಲೂ ಮಾಹಿತಿ ಕಲೆ ಹಾಕಿದ ಪೊಲೀಸರು

  ಡೆವಿಲ್ ಚಿತ್ರಕ್ಕೆ ಸಂಬಂಧಪಟ್ಟಂತೆ ನೀವು ದರ್ಶನ್‌ಗೆ ಹಣ ನೀಡಿದ್ರಾ?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಗ್ಯಾಂಗ್ ವಿಚಾರಣೆ ಬಳಿಕ ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್​ಗೂ ಸಂಕಷ್ಟ ಎದುರಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಪೊಲೀಸರು ಮಿಲನ ಪ್ರಕಾಶ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರು ನಿರ್ದೇಶಕ ಮಿಲನ ಪ್ರಕಾಶ್ ಅವರಿಂದಲೂ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಿಲನಾ ಪ್ರಕಾಶ್ ಅವರ ವಿಚಾರಣೆ ನಡೆದಿದೆ. ಯಾಕಂದ್ರೆ ಕೊಲೆ ಬಳಿಕ ಆರೋಪಿ ದರ್ಶನ್ ಅವರು ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿಲು ಹೊರಟಿದ್ದರು. ಈ ಹಿನ್ನೆಲೆಯಲ್ಲಿ ಮಿಲನ ಪ್ರಕಾಶ್ ಅವರ ಬಳಿ ಪೊಲೀಸರು ಸ್ಪಷ್ಟನೆ ಕೇಳಿದ್ದಾರೆ.

ಪೊಲೀಸ್ ಠಾಣೆ ಬಂದ ಮಿಲನ ಪ್ರಕಾಶ್ ಅವರನ್ನು ಪೊಲೀಸರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಅವರು ನಿಮ್ಮೊಂದಿಗೆ ಹಂಚಿಕೊಂಡಿದ್ರಾ? ಯಾವಾಗಿನಿಂದ ಚಿತ್ರೀಕರಣ ಆರಂಭ ಮಾಡಿದ್ರಿ, ಯಾವಾಗ ಸ್ಥಗಿತವಾಗಿತ್ತು ಎಂದು ಕೇಳಲಾಗಿದೆ.

ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ರಂತೆ.. ದರ್ಶನ್​ ಬರೋವರೆಗೂ ಏನೆಲ್ಲಾ ಮಾಡಿದ್ರು? 

ರೇಣುಕಾಸ್ವಾಮಿ ಕೊಲೆ ನಡೆದ ನಂತರ ದರ್ಶನ್ ನಿಮ್ಮ ಬಳಿ ಏನೇನು ಮಾತನಾಡಿದ್ರು. ಪ್ರಕರಣಕ್ಕೂ ಮುನ್ನ ಕೊನೆಯ ಬಾರಿ ದರ್ಶನ್ ಅವರನ್ನು ಭೇಟಿಯಾಗಿದ್ದು ಯಾವಾಗ? ಡೆವಿಲ್ ಚಿತ್ರಕ್ಕೆ ಸಂಬಂಧಪಟ್ಟಂತೆ ದರ್ಶನ್‌ಗೆ ಹಣ ನೀಡಿದ್ರಾ? ಈ ಬಗ್ಗೆ ಪೊಲೀಸರು ಮಿಲನ ಪ್ರಕಾಶ್ ಅವರ ಬಳಿ ಸ್ಪಷ್ಟನೆ ಕೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಪರವಾಗಿ ಬ್ಯಾಟ್​ ಬೀಸಿದ ಸ್ಯಾಂಡಲ್​ವುಡ್​ ನಟಿಯರು.. ಒಬ್ಬೊಬ್ಬರು ನೀಡಿದ ಹೇಳಿಕೆ ಹೀಗಿದೆ

ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆಯಾದ ಬಳಿಕ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲು ತೆರಳಿದ್ದರು. ಈ ಬಗ್ಗೆ ಮಿಲನ ಪ್ರಕಾಶ್ ಅವರ ಬಳಿ ಪೊಲೀಸರು​ ವಿಚಾರಣೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌.. ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್‌ಗೂ ಸಂಕಷ್ಟ​; ಪೊಲೀಸರು ಕೇಳಿದ್ದೇನು?

https://newsfirstlive.com/wp-content/uploads/2024/07/Devil-Director-Milana-Prakash.jpg

Load More