ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಎಸ್ಪಿ ಮತ್ತು ಎಸಿ ಕ್ರಮ?
ವಿವಿಧ ಭಾಗಗಳಿಂದ 500 ಬಸ್ ವ್ಯವಸ್ಥೆ ಕಲ್ಪಿಸಿದ್ದನ್ನ ರದ್ದು ಮಾಡಿದೆ
ಹಾಸನಾಂಬೆ ಸನ್ನಿಧಿ; ಕೇವಲ ಧರ್ಮ ದರ್ಶನಕ್ಕೆ ಮಾತ್ರ ಅವಕಾಶ
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದರ್ಶನೋತ್ಸವ ಮುಂದುವರೆದಿದೆ. ಆದರೆ ಕಳೆದ ವರ್ಷದಂತೆ ಈ ವರ್ಷವೂ ದೇವಿ ದರ್ಶನ ಗೊಂದಲ, ಅವ್ಯವಸ್ಥೆಯ ಗೂಡಾಗಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ಬರುತ್ತಿದ್ದಾರೆ. ಆದ್ರೆ, ಸಾವಿರಾರು ರೂಪಾಯಿಕೊಟ್ಟು ಪಾಸ್ ಪಡೆದು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾದ್ರೂ ದರ್ಶನವೇ ಸಿಗುತ್ತಿಲ್ಲ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸನಾಂಬೆ ದರ್ಶನಕ್ಕೆ ಇದ್ದ ಎಲ್ಲಾ ಪಸ್ಗಳೂ ರದ್ದು
ನವೆಂಬರ್ 3ಕ್ಕೆ ಹಾಸನಾಂಬೆಯ ದೇಗುಲದ ಬಾಗಿಲು ಮುಚ್ಚಲಿದೆ. ಹೀಗಾಗಿ ಹಾಸನಾಂಬೆಯ ದರ್ಶನ ಪಡೆಯಲು ಭಕ್ತರಿಗೆ ನವೆಂಬರ್ 2 ಅಂದ್ರೆ.. ನಾಳೆಯೇ ಕೊನೆ ದಿನ. ಆದ್ದರಿಂದ ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ಆದ್ರೀಗ ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಿಳಿತ ಅವೈಜ್ಞಾನಿಕ ನಡೆಯಿಂದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿಕೆ ಮಾಡಲಾಗಿತ್ತು. ಹೀಗಾಗಿ ವಿವಿಐಪಿ ಪಾಸ್ ಪಡೆದು ನೇರ ದರ್ಶನದ ಮಾರ್ಗದಲ್ಲಿ ಲಕ್ಷಾಂತರ ಭಕ್ತರು ಬರ್ತಿದ್ದಾರೆ. ಇದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಪಾಸ್ ಇದೆ ಬಿಡಿ ಎಂದರೂ ಪೊಲೀಸರು ಬಿಡುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಭಕ್ತರು ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೆಲವರು ಬ್ಯಾರಿಕೇಡ್ಗಳನ್ನೇ ಮುರಿದು ದರ್ಶನಕ್ಕೆ ಮುಂದಾಗಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ, ಜನರನ್ನ ನಿಯಂತ್ರಿಸಲು ಎಲ್ಲ ಮಾದರಿಯ ಪಾಸ್ಗಳನ್ನ ರದ್ದು ಮಾಡಿ, ಕೇವಲ ಧರ್ಮ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ಬಸ್ ವ್ಯವಸ್ಥೆಯನ್ನು ರದ್ದುಗೊಳಿಸಿದ ಸರ್ಕಾರ
ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ಬೆಂಗಳೂರು ಸೇರಿದಂತೆ ವಿವಿಧ ಭಾಗಳಿಂದ 500 ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದ್ರೀಗ ಜನರನ್ನು ನಿಯಂತ್ರಿಸಲು ವಿಶೇಷ ಬಸ್ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರ ರದ್ದು ಮಾಡಿದ್ದು, ಭಕ್ತರನ್ನು ಕಂಗಾಲಾಗಿಸಿದೆ.
ಇದನ್ನೂ ಓದಿ: ಹಾಸನಾಂಬೆ ಸನ್ನಿಧಿಯಲ್ಲಿ MLA ಸುರೇಶ್- ಡಿಸಿ ಸತ್ಯಭಾಮ ನಡುವೆ ವಾಗ್ವಾದ.. ಅಸಲಿಗೆ ಆಗಿದ್ದೇನು?
ಇನ್ನು ಹಾಸನದ ಜಿಲ್ಲಾಡಳಿತದ ವಿರುದ್ಧ ಪೌರಕಾರ್ಮಿಕರು ಕೂಡ ಸಿಡಿದೆದ್ದಿದ್ದರು. ನಮ್ಮ ಮೇಲೆ ದೌರ್ಜನ್ಯವಾಗಿದೆ ಎಂದು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ರಸ್ತೆ ತಡೆಯಲು ಮುಂದಾದಾಗ ಪರಿಸ್ಥಿತಿವಿಕೋಪಕ್ಕೆ ತಿರುಗಿತ್ತು. ಕೂಡಲೇ ಎಸ್ಪಿ ಮತ್ತು ಎಸಿ, ಸ್ಥಳಕ್ಕೆ ಭೇಟಿ ನೀಡಿ, ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಈ ಬಾರಿಯ ಹಾಸನಾಂಬೆ ದರ್ಶನೋತ್ಸವನ್ನು ಸಾಕಷ್ಟು ಗದ್ದಲ ಗಲಾಟೆಗಳಿಂದ ಸುದ್ದಿ ಆಗುತ್ತಿದೆ. ನಾಳೆ ಭಕ್ತರ ದರ್ಶನಕ್ಕೆ ಕೊನೆ ದಿನವಾಗಿದ್ದು, ಇವತ್ತು ಮತ್ತು ನಾಳೆ ಭಕ್ತರಿಗೆ ಸರಳ ದರ್ಶನಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ