/newsfirstlive-kannada/media/post_attachments/wp-content/uploads/2024/11/DHANASHREE_CHAHAL.jpg)
ಟೀಮ್​ ಇಂಡಿಯಾ ಸ್ಪಿನ್​ ಮೆಜಿಶಿಯನ್ ಯುಜುವೇಂದ್ರ ಚಹಲ್​ ಪತ್ನಿ​ ಧನಶ್ರೀ ವರ್ಮಾಗೆ ಒಂದು ಬಿಗ್​ ಆಫರ್​​ ಬಂದಿದೆ. ಚಹಲ್​ ಪತ್ನಿಯ ಡಾನ್ಸ್​​ಗೆ ಫುಲ್​ ದಿಲ್​​ ಖುಷ್​ ಆಗಿರೋ ಟಾಲಿವುಡ್​​ನ ಟಾಪ್​​ ನಿರ್ಮಾಪಕರೊಬ್ಬರು ಆಫರ್​ ಕೊಟ್ಟಿದ್ದಾರೆ. ಚಹಲ್​ ಪತ್ನಿಗೆ ಬಂದಿರೋ ಬೊಂಬಾಟ್​​ ಆಫರ್​​ ಏನು.?
ಹೈವೋಲ್ಟೆಜ್​ ಡ್ಯಾನ್ಸ್​, ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​.!
ಧನಶ್ರೀ ವರ್ಮಾ ಈ ಹೈ ಎನರ್ಜಿಯ ಜಬರ್ದಸ್ತ್​​​​ ಡ್ಯಾನ್ಸ್​​ ಮಾಡುತ್ತಾರೆ. ಈ ಸುಂದರಿ ಟೀಮ್​ ಇಂಡಿಯಾದ ಸ್ಪಿನ್​ ಮೆಜಿಶಿಯನ್​ ಯುಜುವೇಂದ್ರ ಚಹಲ್​ರ ಪತ್ನಿ. ಇವರು ಸೋಷಿಯಲ್​ ಮೀಡಿಯಾದಲ್ಲಿ ಯಾವಾಗ್ಲೂ ಟ್ರೆಂಡಿಂಗ್​ನಲ್ಲಿರ್ತಾರೆ. ಸಖತ್​ ಸ್ಟೆಪ್ಸ್​ಗಳನ್ನ ಹಾಕೋ ಧನಶ್ರೀಯ ಡ್ಯಾನ್ಸ್​ ವಿಡಿಯೋಗಳಂತೂ ಸೆನ್ಸೇಷನ್​​ ಸೃಷ್ಟಿಸಿ ಬಿಡುತ್ತವೆ. ಈಕೆಯಲ್ಲಿರುವ ಡಾನ್ಸ್​​ ಕಲೆಗಾರಿಕೆಗೆ ಫಿದಾ ಆಗದೇ ಇರೋರೆ ಇಲ್ಲ ಬಿಡಿ.
ಇದನ್ನೂ ಓದಿ: ಸೂಪರ್ ಸ್ಟಾರ್ ಕಾರು ನೋಡಿ ಫ್ಯಾನ್ಸ್ ಫುಲ್ ಶಾಕ್​.. ನಾಗರ್ಜುನ್ ಖರೀದಿಸಿದ ಕಾರಿನ ಬೆಲೆ ಎಷ್ಟು?
/newsfirstlive-kannada/media/post_attachments/wp-content/uploads/2024/11/DHANASHREE.jpg)
ಧನಶ್ರೀ ಡಾನ್ಸ್​ಗೆ ತೆಲುಗು ನಿರ್ಮಾಪಕನ ‘ದಿಲ್’​ ಖುಷ್​.!
ಧನಶ್ರೀ ವರ್ಮಾ ಡಾನ್ಸ್​ಗೆ ಕೇವಲ ಸೋಷಿಯನ್​ ಮೀಡಿಯಾದ ಫ್ಯಾನ್ಸ್​​ ಮಾತ್ರವಲ್ಲ.. ಬಾಲಿವುಡ್​ ಅಂಗಳದ ಹಲವರು ಕೂಡ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಇದೀಗ ಧನಶ್ರೀಯ ಡಾನ್ಸ್​ಗೆ ತೆಲುಗಿನ ಫೇಮಸ್​​ ನಿರ್ಮಾಪಕ ದಿಲ್​ ರಾಜು ದಿಲ್​ ಖುಷ್​​ ಆಗಿದ್ದಾರೆ. ಇಷ್ಟೇ ಅಲ್ಲ, ಅವ್ರ ಮುಂದಿನ ಪ್ರಾಜೆಕ್ಟ್​​ ಭಾಗವಾಗುವಂತೆ ಬಿಗ್​ ಆಫರ್​ ನೀಡಿದ್ದಾರೆ.
ಅಂದ್ಹಾಗೆ ದಿಲ್​ ರಾಜು ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಆರ್ಯ, ಬೊಮ್ಮರಿಲ್ಲು, ಮಹರ್ಷಿ, ವಾರಿಸು, ಮಿ.ಪರ್ಫೆಕ್ಟ್​, ವಕಿಲ್​ ಸಾಬ್​, ದುವ್ವಾಡ ಜಗನ್ನಾಥಂನಂತ ಫೇಮಸ್​ ಚಿತ್ರಗಳ ನಿರ್ಮಾಪಕ. ತೆಲಗು ಇಂಡಸ್ಟ್ರಿಯ ಈ ಟಾಪ್​ ನಿರ್ಮಾಪಕರಿಂದ ಧನಶ್ರೀಗೆ ಆಫರ್​ಗೆ ಹೋಗಿದೆ.
ಟಾಲಿವುಡ್​​​ ಡೆಬ್ಯೂಗೆ ಸಜ್ಜಾದ ಚಹಲ್​​ ಪತ್ನಿ.!
ಟಾಲಿವುಡ್​​ ನಿರ್ಮಾಪಕ ದಿಲ್ ​​ರಾಜು ‘ಆಕಾಶಮ್​​ ದಾಟಿ ವಸ್ತಾವಾ’ ಅನ್ನೋ ಡಾನ್ಸ್​ ಬೇಸ್ಡ್​​ ಮೂವಿನ ಪ್ರೋಡ್ಯೂಸ್​​ ಮಾಡ್ತಿದ್ದಾರೆ. ಈಗಾಗಲೇ ಕೋರಿಯಾಗ್ರಾಫರ್​​ ಯಶ್​​ ಹಾಗೂ ಮಲಯಾಳಂ ನಟಿ ಕಾರ್ತಿಕಾ ಮುರಳೀಧರನ್ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಇದೀಗ ಚಿತ್ರದ ಮತ್ತೊಂದು ಮಹತ್ವದ ಪಾತ್ರಕ್ಕೆ ಚಹಲ್​ ಪತ್ನಿಗೆ ಆಫರ್​ ಹೋಗಿದೆ.
ಸದ್ಯ ಸ್ಟೋರಿ ಲೈನ್​ ಕೇಳಿರುವ ಧನಶ್ರೀ, ನಟಿಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಈಗಾಗಲೇ ಟ್ರಯಲ್​ ಶೂಟ್​ಗಳನ್ನ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ತೆಲುಗು ಇಂಡಸ್ಟ್ರಿಗೆ ಶೀಘ್ರದಲ್ಲೇ ಧನಶ್ರೀ ವರ್ಮಾ ಡೆಬ್ಯೂ ಮಾಡಲಿದ್ದಾರೆ.
/newsfirstlive-kannada/media/post_attachments/wp-content/uploads/2023/07/RCB_CHAHAL.jpg)
ಧನಶ್ರೀ ವರ್ಮಾ ಈವರೆಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ.. ಆದ್ರೆ, ಜಲಕ​ ದಿಕಲಾಜಾನಂತಹ ಡಾನ್ಸ್​ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಹಲವು ಮ್ಯೂಸಿಕ್​ ಅಲ್ಬಂಗಳ ಭಾಗವಾಗಿದ್ದಾರೆ. 2023ರ ಏಕದಿನ ವಿಶ್ವಕಪ್​​ನಂತ ಬಿಗ್​ ಪ್ರಾಜೆಕ್ಟ್​ನಲ್ಲೂ ಕಾಣಿಸಿಕೊಂಡಿದ್ದರು.
ಸೋಷಿಯಲ್​ ಮೀಡಿಯಾದಲ್ಲಿ ಧನಶ್ರಿ ವರ್ಮಾ ಸಪರೇಟ್​ ಫ್ಯಾನ್​ ಬೇಸ್​​ ಇದೆ. ಇನ್ಸ್​​​​ಸ್ಟಾಗ್ರಾಂನಲ್ಲಿ 6.2 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ. ಯೂಟೂಬ್​, ಫೇಸ್​​ಬುಕ್​ಗಳಲ್ಲೂ ಧನಶ್ರೀಗೆ ಫಾಲೋವರ್ಸ್​ ಇದ್ದಾರೆ. ಈ ಪ್ರಸಿದ್ಧಿ ಹಾಗೂ ಟ್ಯಾಲೆಂಟ್​ಗೆ ಇದೀಗ ಟಾಲಿವುಡ್​​ನಿಂದ ಆಫರ್​​ ಬಂದಿದೆ. ಈ ಆಫರ್​ ಒಪ್ಪಿ ಧನಶ್ರೀ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಬಣ್ಣ ಹಚ್ತಾರಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us