Advertisment

BBK11: ಬಿಗ್​ಬಾಸ್​ ವೀಕ್ಷಕರು ಬೇಸರ.. ದೊಡ್ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ

author-image
Veena Gangani
Updated On
BBK11: ಬಿಗ್​ಬಾಸ್​ ವೀಕ್ಷಕರು ಬೇಸರ.. ದೊಡ್ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ
Advertisment
  • ಗೌತಮಿ, ಚೈತ್ರಾ, ಧರ್ಮ ಕೀರ್ತಿರಾಜ್ ಇವರಲ್ಲಿ ಯಾರು ಔಟ್?
  • 8ನೇ ವಾರಕ್ಕೆ ಬಿಗ್​​ಬಾಸ್​ ಮನೆಯ ಆಟ ಮುಗಿಸಿದ್ದಾರೆ ಸ್ಪರ್ಧಿ
  • ಅನುಷಾ ರೈ ಬಳಿಕ ಬಿಗ್​ಬಾಸ್​ನಿಂದ ಔಟ್​ ಆದ ಗೆಳೆಯ ಇವರೇ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 9ನೇ ವಾರಕ್ಕೆ ಕಾಲಿಡುತ್ತದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬಂದಿದ್ದಾರೆ. ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಬರುತ್ತಾರೆ ಅಂತ ವೀಕ್ಷಕರು ಲೆಕ್ಕ ಹಾಕುತ್ತಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಧರ್ಮ ಕೀರ್ತಿರಾಜ್​ ಔಟ್ ಆಗಿದ್ದಾರೆ.

Advertisment

ಇದನ್ನೂ ಓದಿ: ಹೇರ್ ಡ್ರೈಯರ್ ಭಯಾನಕ ಸ್ಫೋಟಕ್ಕೆ ಸಿನಿಮಾವನ್ನು ಮೀರಿಸಿದ ಸಂಚು; ಹುಚ್ಚು ಪ್ರೇಮಿ ಮಾಡಿದ್ದೇನು?

publive-image

ಈಗಾಗಲೇ ಬಿಗ್​ಬಾಸ್ ಮನೆಯಿಂದ 6 ಸ್ಪರ್ಧಿಗಳು ಆಚೆ ಹೋಗಿದ್ದಾರೆ. ನಟಿ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ರಂಜಿತ್‌, ಹಂಸ, ಮಾನಸಾ ಹಾಗೂ ಅನುಷಾ ರೈ ಔಟ್ ಆಗಿದ್ದರು. ಇದೀಗ ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದ ಧರ್ಮ ಕೀರ್ತಿರಾಜ್​ ಅವರು ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ.

publive-image

ಬಿಗ್​ಬಾಸ್​ ಮನೆಗೆ ಬರೋ ಮುನ್ನ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್​ ಎಂಟ್ರಿ ಕೊಟ್ಟಿದ್ದರು. ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಅನುಷಾ ಅವರು ಆಚೆ ಬಂದಿದ್ದರು. ಇದಾದ ಬೆನ್ನಲ್ಲೇ ಈ ವಾರ ಧರ್ಮ ಕೀರ್ತಿರಾಜ್​ ಆಚೆ ಬಂದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ಆಗಿದ್ದಾರೆ.

Advertisment

publive-image

ಇನ್ನೂ ಇದಕ್ಕೆ ಕಾರಣ, ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದ ದಿನದಿಂದ 9ನೇ ವಾರದವರೆಗೂ ಧರ್ಮ ಕೀರ್ತಿರಾಜ್​ ಒಂದೇ ತರ ಇದ್ದರು. ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಿದವರಲ್ಲ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಮಾತನ್ನು ರವಾನಿಸುವುದು ಮಾಡುತ್ತಿರಲಿಲ್ಲ. ಬಿಗ್​ಬಾಸ್​ ಮನೆಯಲ್ಲಿರೋ ಎಲ್ಲರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಅಲ್ಲದೇ ಚೆನ್ನಾಗಿ ಟಾಸ್ಕ್​ ಕೂಡ ಆಡುತ್ತಿದ್ದರು. ಆದರೆ ಇಷ್ಟು ದಿನ ನೋಡಿದ ಧರ್ಮ ಅವರನ್ನು ಮತ್ತೆ ಬಿಗ್​ಬಾಸ್​ ಮನೆಯಲ್ಲಿ ನೋಡೋದಕ್ಕೆ ಆಗೋದಿಲ್ಲ ಅಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment