ನಿಮ್ಮನ್ನು ಮೋಸಗಾರರು ಹೀಗೂ ಯಾಮಾರಿಸ್ತಾರೆ ಹುಷಾರ್..!
ಹೆಣ್ಣಿನ ಆಸೆಗೆ ಮರುಳಾಗಿ ಹಣ ಕಳ್ಕೊಂಡ ರಾಮನಗರ ಹುಡುಗ
ಏನಿದು ಫೇಸ್ಬುಕ್ ಮೂಲಕ ನಡೆದ ಮಹಾಮೋಸ..!
ಬೆಂಗಳೂರು: ಫೇಸ್ಬುಕ್ನಲ್ಲಿ ಯಾರದೋ ಫೋಟೋ ಹಾಕಿ ಬರೋಬ್ಬರಿ 41 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದೆ. ‘ಗೀತಾ ಸೆಕ್ಸಿ’ ಎಂಬ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದು ರಾಮನಗರ ಜಿಲ್ಲೆಯ ಕನಕಪುರದ ಯುವಕನಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ರಾಮನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೇಸ್ಬುಕ್ನಲ್ಲಿ ಗೀತಾ ಸೆಕ್ಸಿ ಎಂಬ ಖಾತೆಯೊಂದು ಓಪನ್ ಆಗಿತ್ತು. ಇದು ರಾಮನಗರ ಜಿಲ್ಲೆಯ ಯುವಕನ ಕಣ್ಣಿಗೆ ಬಿದ್ದಿತ್ತು. ಫೇಸ್ಬುಕ್ನ ಬಯೋದಲ್ಲಿ ‘ಬೆಂಗಳೂರಿನಿಂದ ಹಾಸನ, ಕುಣಿಗಲ್, ರಾಮನಗರ, ಶಿವಮೊಗ್ಗದವರೆಗೂ ಸರ್ವೀಸ್ ಇದೆ. ಫ್ರೆಶ್ ಹುಡುಗಿರು ಇದ್ದಾರೆ’ ಎಂದು ಬರೆದಿತ್ತು.
ಇದನ್ನು ಓದಿದ ಯುವಕ ಮೆಸೇಜ್ ಮಾಡಿದ್ದಾರೆ. ಹುಡುಗಿ ಬೇಕಾದರೆ 800ರೂಪಾಯಿ ಹಣದೊಂದಿಗೆ ನಿಮ್ಮ ಫೋಟೋವನ್ನು ಕಳುಹಿಸಿ ಎಂದು ರಿಪ್ಲೈ ಬಂದಿತ್ತು. ಹೌದು ಎಂದು ನಂಬಿದ ಆ ಯುವಕ ಹಣ ಮತ್ತು ಫೋಟೋವನ್ನು ಕಳುಹಿಸಿದ್ದ.
ಫೋಟೋ ಕಳುಹಿಸುತ್ತಿದ್ದಂತೆ ಆ ಫೋಟೋವನ್ನು ಬೆತ್ತಲೆಯಾಗಿ ಮಾರ್ಪಿಂಗ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನ ಸ್ನೇಹಿತರಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಸಿದ್ದಾರೆ. ಇದರಿಂದ ಗಾಬರಿಯಾದ ಯುವಕ ಹಣ ನೀಡಿದ್ದಾರೆ. ವರದಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಸುಮಾರು 41 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಮನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ