ಶೋಯೆಬ್ ಅಖ್ತರ್ ಕಾಲ್ಕೆರೆದು ಸ್ಲೆಡ್ಜ್ ಮಾಡೋದ್ರಲ್ಲಿ ನಿಸ್ಸೀಮ
ಅಂದು ಅಖ್ತರ್ಗೇ ಸ್ಲೆಡ್ಜ್ ಮಾಡಿದ್ರು ಧೋನಿ ಮತ್ತು ಇರ್ಫಾನ್ ಪಠಾಣ್
ಪಂದ್ಯವನ್ನು ಸೇವ್ ಮಾಡಲು ಹೀಗೊಂದು ಐಡಿಯಾ ಮಾಡಿದ್ರು
ಶೋಯೆಬ್ ಅಖ್ತರ್ ಬೆಂಕಿ ಚೆಂಡಿನಿಂದಲೇ ಅಲ್ಲ.! ಕಾಲ್ಕೆರೆದು ಸ್ಲೆಡ್ಜ್ ಮಾಡೋದ್ರಲ್ಲೂ ನಿಸ್ಸೀಮ. ಇಂತಹ ಶೋಯೆಬ್ ಅಖ್ತರ್ಗೆ ಸ್ಲೆಡ್ಜ್ ಮಾಡಿ ಟೀಂ ಇಂಡಿಯಾ ಅಂದಿನ ಪಂದ್ಯವನ್ನ ಸೇವ್ ಮಾಡಿರುವ ಕಥೆ ಗೊತ್ತಾ? ಈ ಸ್ಟೋರಿ ಓದಿ.
ಇಂಡೋ-ಪಾಕ್ ಅಂದ್ರೆ, ಬದ್ಧವೈರಿಗಳ ಕದನ. ಯುದ್ಧದಂತೆ ಬಿಂಬಿತವಾಗಿರುವ ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಕಾಯ್ತಿರ್ತಾರೆ. ಮೈದಾನದಲ್ಲಿ ನಡೆಯೋ ಮಾತಿನ ಸಮರ, ಜಿದ್ದಾಜಿದ್ದಿ ಹೋರಾಟ, ಸ್ಲೆಡ್ಜಿಂಗ್. ಸ್ಟಾರ್ವಾರ್ ಪಂದ್ಯವನ್ನ ಮತ್ತಷ್ಟು ಮೆರಗು ನೀಡುತ್ತೆ. ಅದರಲ್ಲೂ ಆಟಗಾರರ ನಡೆಯೋ ಸ್ಲೆಡ್ಜಿಂಗ್ ನೆಕ್ಸ್ಟ್ ಲೆವೆಲ್. ಈ ಸ್ಲೆಡ್ಜಿಂಗ್ ಮಾಡೋದ್ರಲ್ಲಿ ಪಾಕ್ನ ಮಾಜಿ ಆಟಗಾರ ಶೋಯೆಬ್ ಅಖ್ತರ್, ಸದಾ ಮುಂದಿರ್ತಾರೆ. ಸುಖಾ ಸುಮ್ಮನೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಅಖ್ತರ್, ಇದೇ ಅಸ್ತ್ರದೊಂದಿಗೆ ಎದುರಾಳಿಗಳ ವಿಕೆಟ್ ಕಬಳಿಸ್ತಾರೆ. ಆದ್ರೆ, ಇದೇ ಶೋಯೆಬ್ ಅಖ್ತರ್ಗೆ ಸ್ಲೆಡ್ಜ್ ಮಾಡಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನ ಡ್ರಾ ಮಾಡಿಸುವಲ್ಲಿ ಯಶಸ್ವಿಯಾಗಿದ್ರು.
2006ರಲ್ಲಿ ಟೀಮ್ ಇಂಡಿಯಾ, ಪಾಕ್ ಪ್ರವಾಸಕ್ಕೆ ತೆರಳಿತ್ತು. ಫೈಸಲಾಬಾದ್ 2ನೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 588 ರನ್ ಗಳಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ, 281ಕ್ಕೆ 5 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. 6ನೇ ವಿಕೆಟ್ಗೆ ಜೊತೆಯಾದ ಧೋನಿ-ಇರ್ಫಾನ್ ಪಠಾಣ್ಗೆ ಶೋಯೆಬ್, ಘಾತುಕ ಬೌನ್ಸರ್ಗಳಿಂದ ದಾಳಿ ನಡೆಸುತ್ತಿದ್ರು. ಈ ವೇಳೆ ಪ್ಲಾನ್ ಮಾಡಿದ್ದ ಇರ್ಫಾನ್, ಧೋನಿಗೆ ಸಲಹೆ ನೀಡಿದ್ರು. ನಾನು ಏನಾದ್ರೂ ಅಖ್ತರ್ಗೆ ಕಿಚಾಯಿಸುತ್ತೀನಿ. ನೀನು ನಗು ಎಂದು ಐಡಿಯಾ ನೀಡಿದ್ರು. ಇದಕ್ಕೆ ಒಕೆ ಎಂದ ಧೋನಿ, ಅಖ್ತರ್ ಏಕಾಗ್ರತೆ ಭಂಗ ಮಾಡ್ತಿದ್ರು. ಔಟ್ ಮಾಡುತ್ತೇನೆ ಎಂದು ಸವಾಲ್ ಎಸೆದಿದ್ದ ಅಖ್ತರ್, ನಾನಾ ಪ್ರಯತ್ನ ಪಟ್ಟರು. ಇವರಿಬ್ಬರ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ 210 ರನ್ ಜೊತೆಯಾಟವಾಡಿದ ಈ ಜೋಡಿ ಟೀಮ್ ಇಂಡಿಯಾ ಮೇಲುಗೈ ಸಾಧಿಸುವಂತೆ ಮಾಡಿದ್ರು. ಈ ಅದ್ಭುತ ಇನ್ನಿಂಗ್ಸ್ನಲ್ಲಿ ಧೋನಿ 148 ರನ್ಗಳ ಗಳಿಸಿದ್ರೆ. ಇರ್ಫಾನ್ 90 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ