newsfirstkannada.com

Dhoni: ಈ ಕಾರಣಕ್ಕೆ ಮನಸ್ಸು ಬದಲಾಯಿಸಿದ ಧೋನಿ! ಇಂಥಾ ನಿರ್ಧಾರ​ ತೆಗೆಳೋಕೆ ಕಾರಣ ಯಾರು?

Share :

02-06-2023

    ಧೋನಿ ತೆಗೊಂಡ್ರು ಮಹತ್ವದ ನಿರ್ಧಾರ

    ಅಭಿಮಾನಿಗಳಿಗಾಗಿ ಸರ್ಜರಿಗೆ ಮುಂದಾದ ಮಾಹಿ

    ಅವರ ಅಭಿಮಾನಕ್ಕಾಗಿ ಕರಗಿತು ಮಾಹಿ ಮನಸ್ಸು

ಧೋನಿ ಟ್ರೋಫಿ ಗೆದ್ದಿದ್ದಕ್ಕಿಂತ ನಿವೃತ್ತಿ ಕೊಡದಿರೋ ಸುದ್ದಿ ಅಭಿಮಾನಿಗಳನ್ನ ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿತ್ತು. ಅಷ್ಟಕ್ಕೂ ಮುಂದಿನ ಬಾರಿ ಐಪಿಎಲ್ ಆಡುತ್ತೇನೆ ಎಂದಿರುವ ಮಾಹಿ ಡಿಶಿಶನ್​​​ ಹಂಡ್ರೆಡ್ ಪರ್ಸೆಂಟ್ ಕರೆಕ್ಟ್ ಆಗಿದೆ. ಅಷ್ಟಕ್ಕೂ ಮಿಸ್ಟರ್​ ಕೂಲ್​​ ಯಾಕಾಗಿ ಮುಂದಿನ ಸೀಸನ್​​ನಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದಕ್ಕೆ ಈ ಸ್ಟೋರಿ ಆನ್ಸರ್ ನೀಡುತ್ತೆ.

ನಿರೀಕ್ಷೆಗೂ ಮೀರಿದ ಯಶಸ್ಸಿನೊಂದಿಗೆ 16ನೇ ಐಪಿಎಲ್​​​​​ ಎಂಡ್ ಆಗಿದೆ. ಇದು ಐಪಿಎಲ್​​​​ ​ಲೀಗ್ ಅನ್ನೋದಕ್ಕಿಂತ ಎಂಎಸ್ ಧೋನಿ ಪ್ರೀಮಿಯರ್ ಲೀಗ್​​ ಆಗಿ ಬದಲಾಗಿತ್ತು. ಯಾಕಂದ್ರೆ ಟೂರ್ನಿ ಪೂರ್ತಿ ಮಾಸ್ಟರ್​​ಮೈಂಡ್​​ ಮಾಹಿ ಜಾತ್ರೆನೇ ನಡೆದಿತ್ತು. ಡೇ ಒನ್​ನಿಂದ ಎಂಡ್​​​ ತನಕ ಮಹೇಂದ್ರ ಬಾಹುಬಲಿ ಇಡೀ ಪಂದ್ಯಾವಳಿಯನ್ನ ಆವರಿಸಿದ್ರು. ಕೊನೆಗೆ ಅಭಿಮಾನಿಗಳಿಗಾಗಿ ಮುಂದಿನ ಐಪಿಎಲ್​ ಆಡ್ತೀನಿ ಅನ್ನುವ ಮೂಲಕ ರಿಟೈರ್​​ಮೆಂಟ್ ವಿಚಾರಕ್ಕೆ ಫುಲ್​ಸ್ಟಾಪ್ ಹಾಕಿದ್ರು. ಅಷ್ಟಕ್ಕೂ ಧೋನಿ ಡಿಶಿಶನ್​​ ಕರೆಕ್ಟಾಗಿದೆ. ಈ ಐದು ಕಾರಣಗಳಿಗಾಗಿ ಅವರು ಮುಂದಿನ ಐಪಿಎಲ್​​​​​ ನಲ್ಲಿ ಆಡಲೇಬೇಕು.

ರೀಸನ್​​ ನಂ.1: ಶ್ರೇಷ್ಠ ನಾಯಕತ್ವ

ನಾಯಕತ್ವದಲ್ಲಿ  ಧೋನಿಯನ್ನ ಮೀರಿಸಬಲ್ಲ ಮತ್ತೊಬ್ಬ ಆಟಗಾರನಿಲ್ಲ. ಸಿಎಸ್​ಕೆ ಐಪಿಎಲ್​​ನ ಯಶಸ್ವಿ ತಂಡಗಳಲ್ಲಿ ಒಂದು. ಇದಕ್ಕೆ ಕಾರಣ ಧೋನಿ ಕ್ಯಾಪ್ಟನ್ಸಿ. ಇವರ ಬುದ್ಧಿವಂತಿಕೆ, ಕೂಲಾಗಿ ಒತ್ತಡ ನಿಭಾಯಿಸುವ ಕೆಪಾಸಿಟಿ ಅವರನ್ನ ಶ್ರೇಷ್ಠ ನಾಯಕರನ್ನಾಗಿ ರೂಪಿಸಿದೆ. ಇವರ ಉಪಸ್ಥಿತಿ ಸಹ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಹಕಾರಿ. ಸಿಎಸ್​ಕೆ ತಂಡವನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಹಾಗೂ ಭವಿಷ್ಯದ ನಾಯಕನನ್ನ ರೂಪಿಸಲು ಧೋನಿಯ ಪ್ರೆಸನ್ಸ್​ ಅಗತ್ಯ.

ರೀಸನ್​​ ನಂ.2: ಮಾರ್ಗದರ್ಶನ ಮತ್ತು ಅನುಭವ..!

ಇನ್ನೂ ಧೋನಿ ಓರ್ವ ಕ್ರಿಕೆಟ್​​ನ ನಿಘಂಟು ಇದ್ದ ಹಾಗೇ. ಇವರ ಅಪಾರ ಅನುಭವ ಮತ್ತು ಮಾರ್ಗದರ್ಶನ ಎಲ್ಲರಿಗೂ ಅಗತ್ಯವಿದೆ. ಬರೀ ಚೆನ್ನೈ ಸೂಪರ್ ಕಿಂಗ್ಸ್​​ ತಂಡಕ್ಕೆ ಅಷ್ಟೇ ಅಲ್ಲ. ಉಳಿದ ಫ್ರಾಂಚೈಸಿಯ ಆಟಗಾರರಿಗೆ ಮಾಹಿಯ ಮಾರ್ಗದರ್ಶನ ಅಗತ್ಯವಿದೆ. ಇವರ ಪ್ರೇರಣೆ ಯಂಗ್​ಸ್ಟರ್ಸ್,​ ಸ್ಟಾರ್​​ ಆಟಗಾರರಾಗಿ ಹೊರಹೊಮ್ಮಲು ಹೆಲ್ಫ್​ ಆದೀತು. ಇವರಷ್ಟೇ ಅಲ್ಲದೇ ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುವ ಬಿಸಿಸಿಐ ಹಾಗೂ ಪ್ರಸಾರ ವಾಹಿನಿಗೂ ಧೋನಿ ಬೇಕಾಗಿದ್ದಾರೆ.

ರೀಸನ್​​ ನಂ. 3: ಅದ್ಭುತ ವಿಕೆಟ್ ಕೀಪಿಂಗ್ ಕೌಶಲ್ಯ

ಇನ್ನು ವಿಕೆಟ್​ ಕೀಪಿಂಗ್​​​ನಲ್ಲಿ ಧೋನಿಗೆ ಯಾರು ಸಾಟಿಯಿಲ್ಲ. ಇವರ ಚುರುಕುತನದ ವಿಕೆಟ್​ ಕೀಪಿಂಗ್ ಆಟಕ್ಕೆ​ ಅತ್ಯಗತ್ಯ. ಸ್ಟಂಪ್ಸ್ ಹಿಂದೆ ಮಾಹಿ ಸದಾ ಮೋಡಿ ಮಾಡಬಲ್ಲರು. ಇತ್ತೀಚೆಗೆ ಮುಗಿದ ಐಪಿಎಲ್​​ನಲ್ಲಿ ಗಿಲ್​​ರನ್ನ ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಸ್ಟಂಪ್​​ ಔಟ್ ಮಾಡಿ ಎಲ್ಲರನ್ನ ಬೆರಗಾಗಿಸಿದ್ರು. ಇವರು ಸದಾ ಬ್ಯಾಟ್ಸ್​ಮನ್​​ಗಳ ಚಲನೆಯನ್ನ ಫಾಲೋ ಮಾಡಿ ಖೆಡ್ಡಾಗೆ ಬೀಳಿಸುತ್ತಾರೆ. ಇನ್ನು ಮಾಹಿಯ ವಿಕೆಟ್ ಕೀಪಿಂಗ್​​​ ನೋಡಲೆಂದೇ ಒಂದು ವರ್ಗವಿದೆ. ಅವರು ಖಂಡಿತ ಧೋನಿ ಕೀಪಿಂಗ್ ಚಮತ್ಕಾರವನ್ನ ಮತ್ತೊಮ್ಮೆ ನೋಡಲು ಬಯಸುತ್ತಾರೆ.

ರೀಸನ್​​ ನಂ. 4: ಫಿನಿಶಿಂಗ್ ಸ್ಕಿಲ್​ & ಬ್ಯಾಟಿಂಗ್​ ಪರಾಕ್ರಮ..!

ವಿಶ್ವದ ಬೆಸ್ಟ್ ಫಿನಿಶರ್​​​​​​​ಗಳಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಈ ಸಲದ ಐಪಿಎಲ್​​ನಲ್ಲಿ ಅದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ರು. 182 ರ ಸ್ಟ್ರೈಕ್​ರೇಟ್​​ನಲ್ಲಿ 104 ರನ್​ ಗಳಿಸಿ 41 ರ ಹರೆಯದಲ್ಲೂ ಯಂಗ್​ಸ್ಟರ್ಸ್​ಗಳನ್ನೇ ನಾಚಿಸಿದ್ರು. ಕ್ಯಾಲ್ಕುಲೇಟೆಡ್​ ಆಗಿ ಬ್ಯಾಟಿಂಗ್​ ನಡೆಸುವ ಇವರು ಪ್ರತಿಬಾಲ್​ ಅನ್ನ ರೀಲ್ ಮಾಡ್ತಾರೆ. ಬೌಲರ್ಸ್​ ವೀಕ್ನೆಸ್​​​​ ಗೊತ್ತುಮಾಡಿಕೊಂಡು ಬಳಿಕ ಟಾರ್ಗೆಟ್ ಮಾಡುತ್ತಾರೆ. ಚೇಸ್ ಮಾಡಲು ಎಷ್ಟೇ ರನ್​​​​ ಇದ್ರೂ ಎಂದೆಗುಂದೇ ಬ್ಯಾಟಿಂಗ್ ನಡೆಸಿ ಗೆಲುವು ತಂದುಕೊಡುತ್ತಾರೆ. ಕೊನೆಯಲ್ಲಿ ಮಾಹಿ ಬಾರಿಸುವ ಬಿಗ್ ಶಾಟ್ಸ್​​​​ ಅವರ ಇರುವಿಕೆಯನ್ನ ಬೇಡುತ್ತೆ.

ರೀಸನ್​​ ನಂ. 4: ಬ್ರ್ಯಾಂಡ್​ ಮೌಲ್ಯ & ಅಸಂಖ್ಯಾತ ಅಭಿಮಾನಿ ಬಳಗ

ಇನ್ನು ಮಾಹಿಗಿರೋ ಫ್ಯಾನ್​​ಬೇಸ್​​​​​​​ ನಿಜಕ್ಕೂ ಅನ್​ಬಿಲೀವ್​ಯೇಬಲ್​​​. ನೆಚ್ಚಿನ ಹೀರೋನನ್ನ ನೋಡಲು ಅಂಗಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಈ ಸಲದ ಐಪಿಎಲ್​​​ನಲ್ಲಂತೂ ಆಡಿದ ಕಡೆಯಲೆಲ್ಲಾ ಫಿನಿಶಿಂಗ್ ಮಾಸ್ಟರ್​​​​​​​ಗೆ ಗ್ರ್ಯಾಂಡ್​​​ವೆಲ್​​​​​​ ಕಮ್​ ಸಿಗ್ತು. ಮಾಹಿಗೆ ಅಭಿಮಾನಿಗಳನ್ನ ಆಕರ್ಷಿಸುವ ಕೆಪಾಸಿಟಿದೆ.

ಇದರಿಂದ ಫ್ರಾಂಚೈಸಿ ಬ್ರ್ಯಾಂಡ್ ಮೌಲ್ಯ ಹೆಚ್ಚಾಗುತ್ತೆ. ಒಂದು ವೇಳೆ ಮಾಹಿ ನಿವೃತ್ತಿ ಘೋಷಿಸಿದ್ರೆ ಬಿಸಿಸಿಐಗೆ ದೊಡ್ಡ ಹೊಡೆತ ಬೀಳಲಿದೆ. ಸಾವಿರಾರು ಕೋಟಿ ರೂ ಬಂಡವಾಳ ನಿರೀಕ್ಷಿಸುವ ಪ್ರಸಾರ ವಾಹಿನಿಗೆ ದೊಡ್ಡ ಲಾಸ್ ಆಗಲಿದೆ. ಹಾಗಾಗಿ ಮೇಲಿನ ಕಾರಣಗಳಿಗಾಗಿ ಧೋನಿ ನೆಕ್ಸ್ಟ್​​ ಸೀಸನ್​​​ ಆಡಲೇಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

​​​​

Dhoni: ಈ ಕಾರಣಕ್ಕೆ ಮನಸ್ಸು ಬದಲಾಯಿಸಿದ ಧೋನಿ! ಇಂಥಾ ನಿರ್ಧಾರ​ ತೆಗೆಳೋಕೆ ಕಾರಣ ಯಾರು?

https://newsfirstlive.com/wp-content/uploads/2023/06/Dhoni-12.jpg

Load More