ಸ್ಕೂಲ್ ಗ್ರೌಂಡ್ನಲ್ಲಿ ಕೊಹ್ಲಿಗೆ ಚಿಯರ್ ಮಾಡಿದ್ದ ಸಹೋದರಿ
ಈಗಲೂ ಸಿಂಪಲ್ ಲೈಫ್ ನಡೆಸ್ತಿದ್ದಾರೆ MS ಧೋನಿಯ ಅಕ್ಕ
ತಮ್ಮಂದಿರ ಕ್ರಿಕೆಟ್ ಜೀವನಕ್ಕೆ ಅಕ್ಕಂದಿರ ಕೊಡುಗೆ ಅಪಾರ
ವಿರಾಟ್ ಕೊಹ್ಲಿ.. ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಎರಡು ಕಣ್ಣುಗಳು. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನೇ ಹೊಂದಿರೋ ಇವರು ಸಾವಿರಾರು ಕೋಟಿ ಒಡೆಯರು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ, ಈ ಸಕ್ಸಸ್ ಹಿಂದೆ ಒಬ್ಬರ ಪಾತ್ರ ಬಹುಮುಖ್ಯ. ಅವಱರು.?
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಪ್ರೇಮಿಗಳ ಎದೆಯನ್ನ ಬೆಚ್ಚಗಾಗಿಸುವ ಹೆಸರು. ಮಾಡ್ರನ್ ಡೇ ಕ್ರಿಕೆಟ್‌ನ ರಾಜನಾಗಿ ಮೆರೆಯುತ್ತಿರುವ ಕೊಹ್ಲಿ, ಇಂದು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಕಂಗೊಳಿಸುತ್ತಿದ್ದಾರೆ. ಕಠಿಣ ಪರಿಶ್ರಮ, ಹೋರಾಟದ ಮನೋಭಾವವನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಂಡವರು ವಿರಾಟ್ ಕೊಹ್ಲಿ.
ಸ್ಟಾರ್ಗಿರಿ, ಜನಪ್ರಿಯತೆ, ಸಂಪತ್ತು. ಕೋಟ್ಯಾನುಕೋಟಿ ಅಭಿಮಾನಿಗಳನ್ನ ಗಳಿಸಿರುವ ಕೊಹ್ಲಿಯ ಯಶಸ್ಸಿನ ಹಿಂದೆ, ಹಲವು ವರ್ಷಗಳ ಪರಿಶ್ರಮವಿದೆ. ಅಗಾಧ ಪ್ರಯತ್ನ, ಅಪಾರ ತ್ಯಾಗವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕೊಹ್ಲಿ ಸಕ್ಸಸ್ ಹಿಂದೆ ಒಬ್ಬರ ಪಾತ್ರ ಬಹುಮುಖ್ಯವಾಗಿದೆ. ಅದು ಬೇಱರು ಅಲ್ಲ., ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ.
ವಿರಾಟ್ ಬೆಂಬಲಕ್ಕೆ ನಿಂತಿದ್ದ ಹಿರಿಯಕ್ಕ ಭಾವನ..!
8ರ ಪ್ರಾಯದಿಂದ ಕ್ರಿಕೆಟ್ ಅಂದ್ರೆ, ಕೊಹ್ಲಿಗೆ ಅಚ್ಚುಮೆಚ್ಚು. ವಿರಾಟ್ ಕ್ರಿಕೆಟ್ನಲ್ಲಿ ಆಸಕ್ತಿ ತೋರಿದಾಗ ಮನೆಯಲ್ಲಿ ವಿರೋಧವೇನು ಉಂಟಾಗಲಿಲ್ಲ. ಬೆಳ್ಳಂಬೆಳಗ್ಗೆ ಆಟದ ಮೈದಾನಕ್ಕೆ ಬಂದು ಬಿಡುತ್ತಿದ್ದ ಹುಡುಗನನ್ನ ಕೋಚ್ ಒತ್ತಾಯಪೂರ್ವಕವಾಗಿ ರಾತ್ರಿ ಮನೆಗೆ ಕಳುಹಿಸಬೇಕಾಗುತ್ತಿತ್ತು. ಅಷ್ಟರ ಮಟ್ಟಿಗೆ ವಿರಾಟ್, ಕ್ರಿಕೆಟ್ನಲ್ಲಿ ಮುಳುಗಿ ಹೋಗ್ತಿದ್ರು.
ಸದಾಕಾಲ ಕ್ರಿಕೆಟ್ನಲ್ಲಿ ಮುಳುಗ್ತಿದ್ದ ಕೊಹ್ಲಿಗೆ ಅಂದು ಹುರಿದುಂಬಿಸಿದ್ದು ಅಕ್ಕ ಭಾವನ. ಆರಂಭದ ದಿನಗಳಲ್ಲಿ ಶಾಲಾ ಗ್ರೌಂಡ್ನಲ್ಲಿ ಪ್ರೀತಿಯ ತಮ್ಮ ಕ್ರಿಕೆಟ್ ಆಡ್ತಿದ್ರೆ, ಅಕ್ಕ ಬ್ಯಾಟ್ ಬೀಸುತ್ತಿದ್ದ ವಿರಾಟ್ನ ನೋಡಿ ಚಿಯರ್ ಮಾಡುತ್ತಿದ್ರು. ಅಪ್ಪ ಕಾಲವಾದ ನಂತರ ನಿಜಕ್ಕೂ ವಿರಾಟ್ಗೆ ಸಪೋರ್ಟಿಂಗ್ ಸಿಸ್ಟಮ್ ಆಗಿ ಕೆಲಸ ಮಾಡಿದ್ದೇ ಈ ಹಿರಿಯಕ್ಕ ಭಾವನ.
ಪ್ರೀತಿಯ ತಮ್ಮನ ಬೆಂಬಲಕ್ಕೆ ಎಂದಿಗೂ ನಿಲ್ತಾರೆ ಭಾವನ!
ಕೊಹ್ಲಿಯ ಅಂತರಾಷ್ಟ್ರೀಯ ಕ್ರಿಕೆಟ್ ಜರ್ನಿ ಆರಂಭವಾಗಿ 15 ವರ್ಷ ಕಳೆದಿವೆ. ಈ 15 ವರ್ಷಗಳ ಜರ್ನಿಯಲ್ಲಿ ಸಾಕಷ್ಟು ಏಳುಬೀಳುಗಳನ್ನ ಕೊಹ್ಲಿ ಕಂಡಿದ್ದಾರೆ. ಗೆದ್ದಾಗ ಖುಷಿ ಪಡೋ ಅಕ್ಕ, ಸೋತಾಗ ಸಂತೈಸಿ ಬೆಂಬಲಕ್ಕೆ ನಿಂತು ಧೈರ್ಯ ತುಂಬುವ ಕೆಲಸ ಮಾಡ್ತಾರೆ. ಸೀಸನ್-16ರ ಐಪಿಎಲ್ನಲ್ಲಿ ಆರ್ಸಿಬಿ ಲೀಗ್ ಸ್ಟೇಜ್ನಿಂದ ಹೊರಬಿದ್ದ ವೇಳೆ ವಿರಾಟ್ ಕಣ್ಣೀರು ಹಾಕಿದ್ರು. ಈ ವೇಳೆ ನೀನು ತಂಡಕ್ಕಾಗಿ ಎಲ್ಲವನ್ನೂ ಮಾಡಿರುವೆ ಎಂದು ಕೊಂಡಾಡಿ ಮನೋಸ್ಥೈರ್ಯ ತುಂಬಿದ್ದು ಭಾವನ ಕೊಹ್ಲಿ. ಹೀಗೆ ಸಣ್ಣ ವಯಸ್ಸಿನಿಂದ ಕೊಹ್ಲಿಯ ಬೆನ್ನೆಲುಬಾಗಿ ಸಕ್ಸಸ್ನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.
ಭಾವನ ಕೊಹ್ಲಿ ಕಂಡರೆ ವಿರಾಟ್ಗೂ ಎಲ್ಲಿಲ್ಲದ ಪ್ರೀತಿ!
ವಿರಾಟ್ಗೂ ಕೂಡ ಅಕ್ಕ ಭಾವನ ಅಂದ್ರೆ, ಎಲ್ಲಿಲ್ಲದ ಪ್ರೀತಿ. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದ ಭಾವನ, ನಂತರ ಬ್ಯುಸಿನೆಸ್ ಮ್ಯಾನ್ ಸಂಜಯ್ ಧಿಂಗ್ರಾರನ್ನ ವಿವಾಹವಾದರು. ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಉದ್ಯಮಿ ಆಗಿರುವ ಭಾವನಾ ಕೊಹ್ಲಿ, ಕೊಹ್ಲಿಯ ಬ್ರ್ಯಾಂಡ್ ಒನ್ 8 ಪಾಲುದಾರರು ಆಗಿದ್ದಾರೆ.
ಎಮ್.ಎಸ್.ಧೋನಿ ಕರಿಯರ್ನಲ್ಲೂ ಅಕ್ಕನ ಪಾತ್ರ..!
ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಟೀಮ್ ಇಂಡಿಯಾದ ಮರೆಯಾಲಾಗದ ಮಾಣಿಕ್ಯನಾಗಿ, ಸಕ್ಸಸ್ಫುಲ್ ಕ್ಯಾಪ್ಟನ್ ಆಗಿದ್ದಾರೆ. ಆದ್ರೆ, ಧೋನಿ ಶ್ರೇಷ್ಠ ನಾಯಕನಾಗಿ, ಆಟಗಾರನಾಗಿ ಬೆಳೆದಿರೋದ್ರ ಹಿಂದೆ ಸಹೋದರಿ ಜಯಂತಿ ಗುಪ್ತಾರ ಅಪಾರ ಬೆಂಬಲ, ಶ್ರಮವಿದೆ.
ಹೇಳಿ ಕೇಳಿ ಮಧ್ಯಮ ವರ್ಗದ ಕುಟುಂಬ ಧೋನಿಯವರದ್ದಾಗಿತ್ತು. ಅಪ್ಪ, ಸಣ್ಣ ಮಟ್ಟದ ನೌಕರರಾಗಿದ್ರು. ಇಂಥಹ ಪರಿಸ್ಥಿಯಲ್ಲಿ ದೇಶಕ್ಕಾಗಿ ಆಡುವ ಬಯಕೆ ಧೋನಿ ವ್ಯಕ್ತಪಡಿಸಿದಾಗ ಬೆಂಬಲಕ್ಕೆ ನಿಂತ ಜಯಂತಿ ಗುಪ್ತಾ, ಕ್ರಿಕೆಟ್ನಲ್ಲೇ ಮುಂದುವರಿಯುವಂತೆ ಪ್ರೋತ್ಸಾಹ ನೀಡಿದ್ರು. ಅಪ್ಪನಿಗೆ ಎಳ್ಳಷ್ಟು ಇಷ್ಟವಿಲ್ಲದಿದ್ದರೂ, ಜಯಂತಿ ಗುಪ್ತಾರ ಪ್ರೋತ್ಸಾಹ ಅಂದು ಧೋನಿ ಆತ್ಮವಿಶ್ವಾಸವನ್ನ ತುಂಬಿತ್ತು.
ಇಂಗ್ಲೀಷ್ ಶಿಕ್ಷಕಿಯಾಗಿರುವ ಧೋನಿ ಸಹೋದರಿ ಜಯಂತಿ
ಧೋನಿ ಸಾವಿರಾರು ಕೋಟಿ ಒಡೆಯ. ತಮ್ಮ ಸಾಹುಕಾರನಾಗಿದ್ರೂ ಅಕ್ಕ, ಇಂದಿಗೂ ಲೀಡ್ ಮಾಡ್ತೀರೋದು ಸಿಂಪಲ್ ಲೈಫ್. ಪಬ್ಲಿಸಿಟಿಯಿಂದ ದೂರ ಇರೋ ಜಯಂತಿ ಗುಪ್ತಾ, ಜಾರ್ಖಂಡ್ನ ರಾಂಚಿಯಲ್ಲಿ ಕೆಲಸ ಮಾಡ್ತಿದ್ದಾರೆ. ರಾಂಚಿಯ ಸರ್ಕಾರಿ ಶಾಲೆಯೊಂದರಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಜಯಂತಿ ಗುಪ್ತಾ ಮದುವೆ ಆಗಿರೋದು ಧೋನಿಯ ಹಳೆಯ ಸ್ನೇಹಿತರಲ್ಲಿ ಒಬ್ಬರಾಗಿರುವ ಗೌತಮ್ ಗುಪ್ತಾ ಎನ್ನುವರನ್ನ. ಧೋನಿ ವೃತ್ತಿ ಜೀವನದ ಆರಂಭದಲ್ಲಿ ಸಹಾಯಕರಾಗಿ ನಿಂತಿದ್ದವರಲ್ಲಿ ಈ ಗೌತಮ್ ಗುಪ್ತಾ ಕೂಡ ಒಬ್ಬರು.
ಧೋನಿ-ಕೊಹ್ಲಿ ಇಂದು ಸೂಪರ್ ಸ್ಟಾರ್ಗಳು.. ಅಸಾಧ್ಯ ಅನ್ನುವುದನ್ನ ಸಾಧಿಸಿದ ಧೀರರು.. ಇವರಿಬ್ಬರ ಈ ಸಾಧನೆಗೆ ಅಕ್ಕಂದಿರ ಪ್ರೀತಿ -ಬೆಂಬಲದ ಪಾಲೂ ಇದೆ ಅನ್ನೋದನ್ನ ಮರೆಯುವಂತಿಲ್ಲ. ಜೊತೆಗೆ ತಮ್ಮಂದಿರು ಸಾವಿರಾರು ಕೋಟಿ ಒಡೆಯರೇ ಆಗಿದ್ರೂ, ಇಂದಿಗೂ ಆಡಂಬರ ಇಲ್ಲದ ಜೀವನ ನಡೆಸ್ತಿರೋದು ನಿಜಕ್ಕೂ ಮೆಚ್ಚುವಂತ ವಿಚಾರ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ